ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮದಿನವು ಅವನ ಜೀವನ, ವ್ಯಕ್ತಿತ್ವ, ವೃತ್ತಿ, ಮದುವೆ ಹೊಂದಾಣಿಕೆ ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಲಕ್ಷಾಂತರ ಜನರು ಪ್ರತಿದಿನ ರಾಶಿ ಭವಿಷ್ಯವನ್ನು ಓದುತ್ತಾರೆ. ಭಾರತದಲ್ಲಿ ಜ್ಯೋತಿಷ್ಯಶಾಸ್ತ್ರವೂ ಅತ್ಯಂತ ಪ್ರಾಚೀನ ವಿಜ್ಞಾನವಾಗಿದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಜ್ಯೋತಿಷಿಗಳು ಗ್ರಹಗಳನ್ನು ಮತ್ತು ಅವುಗಳ ಚಲನೆಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವುದಲ್ಲದೆ, ಅವುಗಳ ಆಧಾರದ ಮೇಲೆ ಜ್ಯೋತಿಷ್ಯವನ್ನು ರೂಪಿಸಿದರು.