Vastu Tips: ಈ ಒಂದು ಗಿಡ ಮನೆಯಲ್ಲಿದ್ರೆ ಹಲವಾರು ವರ್ಷದ ಸಮಸ್ಯೆಗೆ ಮುಕ್ತಿ ಸಿಗುತ್ತೆ
Peony Plant Benefits: ವಾಸ್ತುಶಾಸ್ತ್ರದಲ್ಲಿ ಸಸ್ಯಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಕೆಲವೊಂದು ಸಸ್ಯಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಹಲವಾರು ಲಾಭಗಳಿದೆ ಎಂದು ಹೇಳಲಾಗುತ್ತದೆ. ಹಾಗೆಯೇ ಒಂದು ವಿಶಿಷ್ಟವಾದ ಗಿಡವಿದ್ದು, ಈ ಗಿಡವನ್ನು ಮನೆಗೆ ತಂದರೆ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಆ ಗಿಡ ಪಿಯೋನಿ. ಈ ಪಿಯೋನಿ ಗಿಡದ ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಪಿಯೋನಿ ಗಿಡವನ್ನು ನಮ್ಮ ವಾಸ್ತುಪ್ರಕಾರ ಹಾಗೂ ಫೆಂಗ್ ಶುಯಿ ಪ್ರಕಾರ ಸಹ ಹೂವುಗಳ ರಾಣಿ ಎಂದು ಕರೆಯಲಾಗುತ್ತದೆ. ಈ ಹೂವಿನ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
2/ 8
ಈ ಸುಂದರವಾದ ಗುಲಾಬಿ ಪಿಯೋನಿ ಹೂವುಗಳನ್ನು ನಾವು ಮನೆಯ ನೈರುತ್ಯ ದಿಕ್ಕಿನಲ್ಲಿ ಬೆಳೆಸುವುದರಿಂದ ಹಲವಾರು ರೀತಿಯ ಪ್ರಯೋಜನಗಳಿದೆ. ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಿ, ಪಾಸಿಟಿವ್ ಎನರ್ಜಿ ಹೆಚ್ಚಾಗುವಂತೆ ಮಾಡುತ್ತದೆ.
3/ 8
ನಿಮ್ಮ ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ಹೆಚ್ಚಾಗಲು ಮನೆಯ ಹೊರಗೆ ಇದನ್ನು ನೆಡಬೇಕು. ನಿಮ್ಮ ಮನೆಯಲ್ಲಿ ಜಾಗ ಇಲ್ಲದಿದ್ದರೆ ನೀವು ಈ ಗಿಡದ ಫೋಟೋವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಗೋಡೆಗೆ ಅಂಟಿಸಿ.
4/ 8
ಇನ್ನು ಇದನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟರೆ ಸಂಬಂಧಗಳಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಎನ್ನಲಾಗುತ್ತದೆ.ಈ ಗಿಡದ ಕಾರಣದಿಂದ ಕುಟುಂದಲ್ಲಿ ಪ್ರೀತಿ ಹಾಗೂ ವಿಶ್ವಾಸ ಹೆಚ್ಚಾಗುತ್ತದೆ. ಮನೆಯಲ್ಲಿ ನೆಮ್ಮದಿ ಮೂಡುತ್ತದೆ.
5/ 8
ಈ ಹೂವಿನಲ್ಲಿ ಸಹ ಹಲವಾರು ವಿಧಗಳಿದೆ, ಒಂದೊಂದು ಬಣ್ಣದ ಹೂವುಗಳು ಸಹ ಒಂದೊಂದು ರೀತಿಯ ಪ್ರಯೋಜನ ನೀಡುತ್ತದೆ. ಹಾಗೆಯೇ ಹಳದಿ ಬಣ್ಣದ ಹೂವು ನಿಮ್ಮ ಸಂಗಾತಿ ಹಾಗೂ ನಿಮ್ಮ ನಡುವೆ ರೊಮ್ಯಾನ್ಸ್ ಹೆಚ್ಚಿಸುತ್ತದೆ.
6/ 8
ಇನ್ನು ಬಿಳಿ ಬಣ್ಣದ ಪಿಯೋನಿ ಹೂವು ಕ್ಷಮೆಯನ್ನು ಹಾಗೂ ಪ್ರಾಯಶ್ಚಿತ್ತವನ್ನು ಸೂಚಿಸುತ್ತದೆ. ಹಾಗಾಗಿ ನೀವು ಯಾವುದೇ ರೀತಿಯ ತಪ್ಪು ಮಾಡಿದ್ರೆ,. ನಿಮ್ಮ ಸಂಗಾತಿಯ ಬಳಿ ಕ್ಷಮೆ ಕೇಳಲು ಈ ಹೂವನ್ನು ಕೊಡಬಹುದು. ಇದರಿಂದ ನಿಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಬಹುದು.
7/ 8
ಇನ್ನು ಪಿಂಕ್ ಪಿಯೋನಿ ಹೂವು ಹೊಸ ಸಂಬಂಧಕ್ಕೆ ಸಹಾಯ ಮಾಡುತ್ತದೆ. ಬಹಳ ಸಮಯದಿಂದ ಮದುವೆ ಆಗಿರಲಿಲ್ಲ ಎಂದರೆ ನೀವು ಹೂವಿನ ಗಿಡವನ್ನು ತಂದು ನೆಡಿ. ಇದರಿಂದ ಬೇಗನೆ ಕಂಕಣ ಭಾಗ್ಯ ಲಭಿಸುತ್ತದೆ.
8/ 8
ಹಾಗೆಯೇ ಈ ಹೂವು ಬಹಳ ಕಾಲದಿಂದ ಮಕ್ಕಳಾಗದೇ ಪರದಾಡುತ್ತಿರುವವರಿಗೆ ಸಹ ಮಕ್ಕಳನ್ನು ಪಡೆಯಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಇನ್ನು ವಯಸ್ಸಾದ ದಂಪತಿಗಳ ರೂಂನಲ್ಲಿ ಕೆಂಪು ಬಣ್ಣದ ಪಿಯೋನಿ ಹೂವನ್ನು ಅಥವಅ ಅದರ ಫೋಟೋವನ್ನು ಇಡಬಾರದು.