Vastu Tips: ಹೊಸವರ್ಷಕ್ಕೆ ಈ ಸಿಂಪಲ್ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಹಣದ ಸಮಸ್ಯೆ ಕಾಡಲ್ಲ
Peacock Feather Vastu Tips: ಹೊಸವರ್ಷದ ಸಮಯದಲ್ಲಿ ಸಮೃದ್ಧಿ ಹಾಗೂ ಸಂತೋಷ ಹೆಚ್ಚಾಗಲು ನಾವು ಹಲವಾರು ಸಲಹೆ ಪಾಲಿಸುತ್ತೇವೆ. ಕೆಲವೊಂದು ಬದಲಾವಣೆಗಳನ್ನು ಮಾಡುವುದರಿಂದ ಸಹ ನಮ್ಮ ಬದುಕಿನಲ್ಲಿ ಬದಲಾವಣೆ ಉಂಟಾಗುತ್ತದೆ. ಹಾಗೆಯೇ ನವಿಲುಗರಿಯನ್ನು ಬಳಸಿ ಸಹ ನೀವು ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು, ಹೇಗೆ ಎಂಬುದು ಇಲ್ಲಿದೆ.
ವಾಸ್ತು ಸಮಸ್ಯೆಗಳ ಕಾರಣದಿಂದ ನಾವು ಜೀವನದಲ್ಲಿ ವಿವಿಧ ರೀತಿಯ ತೊಂದರೆಯನ್ನು ಅನುಭವಿಸುತ್ತೇವೆ. ಆರ್ಥಿಕವಾಗಿ ಹಾಗೂ ಆರೋಗ್ಯದ ವಿಚಾರವಾಗಿ ಸಹ ನಿಮಗೆ ಈ ಸಮಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಪಡೆಯುವುದು ಬಹಳ ಮುಖ್ಯ.
2/ 8
ಹೊಸವರ್ಷಕ್ಕೆ ಕೇವಲ ಒಂದು ದಿನ ಬಾಕಿ, ಈ ಸಮಯದಲ್ಲಿ ನಮ್ಮ ಜೀವನದಲ್ಲಿ ಹೊಸತನವನ್ನು ನಾವು ಬಯಸುತ್ತೇವೆ. ಅದಕ್ಕೆ ನಾವು ನವಿಲುಗರಿಯನ್ನು ಬಳಸಿ ವಾಸ್ತು ಸಮಸ್ಯೆಗೆ ಪರಿಹಾರ ಪಡೆಯಬಹುದು. ಇದರಿಂದ ಆರ್ಥಿಕವಾಗಿ ಸದೃಢರಾಗಲು ಸಹಾಯವಾಗುತ್ತದೆ.
3/ 8
ಈ ನವಿಲು ಗರಿಯನ್ನು ಭಗವಾನ್ ಶ್ರೀಕೃಷ್ಣನ ಆಭರಣ ಎಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಲವಾರು ಲಾಭಗಳಿದೆ ಎನ್ನಲಾಗುತ್ತದೆ. ಅಲ್ಲದೇ, ಈ ನವಿಲು ಗರಿ ಇಲ್ಲದೇ ಕೃಷ್ಣನ ಅಲಂಕಾರ ಪೂರ್ಣವಾಗುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ಅಷ್ಟರ ಮಟ್ಟಿಗೆ ಅಗತ್ಯ ಈ ನವಿಲು ಗರಿ
4/ 8
ಇಷ್ಟೇ ಅಲ್ಲದೇ, ಈ ನವಿಲು ಗರಿಯು ಲಕ್ಷ್ಮೀ, ಸರಸ್ವತಿ, ಇಂದ್ರ ಹಾಗೂ ಕಾರ್ತಿಕೇಯನಿಗೆ ಸಹ ಬಹಳ ಇಷ್ಟವಾದ ವಸ್ತು ಎನ್ನಲಾಗುತ್ತದೆ. ಈ ದೇವರಿಗೆ ನವಿಲು ಗರಿಯನ್ನು ಅರ್ಪಿಸುವುದರಿಂದ ಜೀವನದ ತೊಡಕುಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
5/ 8
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲು ಗರಿ ಇದ್ದರೆ ಬಹಳ ಒಳ್ಳೆಯದು, ಆದರೆ ಅದನ್ನು ಇಡುವ ದಿಕ್ಕು ಸಹ ಮುಖ್ಯವಾಗುತ್ತದೆ. ನೀವು ಈ ನವಿಲು ಗರಿಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಎನ್ನಲಾಗುತ್ತದೆ.
6/ 8
ಅಲ್ಲದೇ, ನವಿಲು ಗರಿಯನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯ ಸದಸ್ಯರ ನಡುವೆ ಇದ್ದ ವೈಮನಸ್ಸು ದೂರವಾಗಿ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಲಾಭ ಸಿಗುತ್ತದೆ. ಇಷ್ಟೇ ಅಲ್ಲದೇ ನೆಗೆಟಿವ್ ಎನರ್ಜಿ ಹರಡದಂತೆ ತಡೆಯುತ್ತದೆ.
7/ 8
ನವಿಲು ಗರಿಯಲ್ಲಿ 9 ಗ್ರಹಗಳು ವಾಸಿಸುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ನಿಮಗೆ ಆರೋಗ್ಯ ಸಮಸ್ಯೆಗಳು ಇದ್ದರೆ ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭ ಎಂದು ಹೇಳಲಾಗುತ್ತದೆ. ಹೊಸವರ್ಷದ ಈ ಸಮಯದಲ್ಲಿ ನೀವು ನವಿಲುಗರಿಯನ್ನು ಮನೆಗೆ ತನ್ನಿ ಮನೆಯ ಶಾಂತಿ ಕಾಪಾಡಿಕೊಳ್ಳಿ.
8/ 8
ಹಲವಾರು ಜನರು ಈ ಸಮಯದಲ್ಲಿ ಹಣದ ಸಮಸ್ಯೆ ಎದುರಿಸುತ್ತಿರುತ್ತಾರೆ, ಜೊತೆಗೆ ಅವರಿಗೆ ತಿಳಿಯದೇ ಹಣ ವ್ಯರ್ಥವಾಗುತ್ತಿರುತ್ತದೆ. ಅದನ್ನು ಈ ವರ್ಷ ನಿಲ್ಲಿಸಬೇಕು ಎಂದರೆ ನವಿಲುಗರಿಯನ್ನು ಪೂಜೆಯ ಕೋಣೆಯಲ್ಲಿ ಇಡುವುದು ಒಳ್ಳೆಯದು.