Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

ಭಾರತದ ವಿವಿಧ ರಾಜ್ಯಗಳಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು, ಜನರು ಬಹಳ ಪರದಾಡುತ್ತಿದ್ದಾರೆ. ಆದರೆ ಈ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೆಲ ಪಂಡಿತರು ಪರಿಹಾರಗಳನ್ನು ಸೂಚಿಸಿದ್ದು, ಅದರ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ತೆಲಂಗಾಣದಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ದಾಟಿದರೆ ಮತ್ತು ಆಂಧ್ರಪ್ರದೇಶದಲ್ಲಿ 50 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಿದ್ದು, ಬಿಸಿಲ ಬೇಗೆಗೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅನೇಕ ರಾಜ್ಯಗಳಲ್ಲಿ ಸುಡುವ ಬೇಸಿಗೆ ತನ್ನ ತೀವ್ರ ಪರಿಣಾಮವನ್ನು ತೋರಿಸುತ್ತಿದೆ.

    MORE
    GALLERIES

  • 27

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ಆದರೆ ಈ ಸಮಯದಲ್ಲಿ, ವೈದಿಕ ಪಂಡಿತರು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಿಸಿಗೆ ಕಾರಣ ಹಾಗೂ ಪರಿಹಾರವನ್ನು ಪತ್ತೆಹಚ್ಚುತ್ತಿದ್ದಾರೆ. ತೆಲಂಗಾಣದ ಕಾಜಿಪೇಟೆಯ ವಿಷ್ಣುಪುರಿ ಕಾಲೋನಿಯಲ್ಲಿರುವ ಸ್ವಯಂಭೂ ಶ್ರೀ ಶ್ವೇತಾರ್ಕಮೂಲ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಇನವೋಲು ಅನಂತ ಮಲ್ಲಯ್ಯ ಶರ್ಮಾ ಈ ಬಗ್ಗೆ ಕೆಲ ಮಾಹಿತಿ ನೀಡಿದ್ದಾರೆ.

    MORE
    GALLERIES

  • 37

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ಸೂರ್ಯ ಇತ್ತೀಚೆಗಷ್ಟೇ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡಿದ್ದು, ಅದರಲ್ಲೂ ಕೃತ್ತಿಕಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲ ಜೀವಿಗಳು ಹಸಿವಿನಿಂದ ಬಳಲುತ್ತಿವೆ ಎಂದು ಅವರ ತಿಳಿಸಿದ್ದಾರೆ.

    MORE
    GALLERIES

  • 47

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ಇನ್ನು ಬೇಸಿಗೆಯ ತೀವ್ರತೆಯನ್ನು ನಿಯಂತ್ರಿಸುವ ಸಲುವಾಗಿ ದೇವಾಲಯದ ಅರ್ಚಕರು ಏಳು ನದಿಗಳಿಂದ ತಂದ ನೀರು ಮತ್ತು 108 ತೆಂಗಿನಕಾಯಿಯ ನೀರಿನಿಂದ ದೇವರಿಗೆ ಪವಿತ್ರ ಸ್ನಾನ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ಧಾರೆ.

    MORE
    GALLERIES

  • 57

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ಮುಂಬರುವ 12 ದಿನಗಳಲ್ಲಿ ತಾಪಮಾನವು ಹೊಸ ಎತ್ತರವನ್ನು ಮುಟ್ಟುತ್ತದೆ ಮತ್ತು ಸೂರ್ಯನ ಕಿರಣಗಳು ಸರಿಯಾದ ರೀತಿಯಲ್ಲಿ ಭೂಮಿಯ ಮೇಲೆ ಬೀಳುವುದಿಲ್ಲ ಹಾಗಾಗಿ ಜನರು ಬಹಳ ಜಾಗರೂಕರಾಗಿರಬೇಕು ಎಂದು ಅರ್ಚಕರು ತಿಳಿಸಿದ್ದಾರೆ.

    MORE
    GALLERIES

  • 67

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ಅಲ್ಲದೇ, ಅ(a), ಈ(e), ಉ(v, u) , ಏ(y,a), O(o), ವಾ(v), ವು(v,u), ವೆ(v), ವೋ(v, o) ಮುಂತಾದ ವರ್ಣಮಾಲೆಗಳೊಂದಿಗೆ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು ಹೆಚ್ಚಿನ ತಾಪಮಾನದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ

    MORE
    GALLERIES

  • 77

    Summer: ಬೇಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಪಂಡಿತರ ಪರಿಹಾರ ಇಲ್ಲಿದೆ

    ಹಾಗೆಯೇ, ಬೇಸಿಗೆಯಿಂದ ರಕ್ಷಣೆ ಪಡೆಯಲು ಬರುವ 12 ದಿನಗಳ ಕಾಲ ದಿನಕ್ಕೆ 108 ಬಾರಿ ಓಂ ಜೂಮ್ ಸ್ವಾಹಾ ಮಂತ್ರವನ್ನು ಪಠಿಸಬೇಕು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಇನವೋಲು ಅನಂತ ಮಲ್ಲಯ್ಯ ಶರ್ಮಾ ತಿಳಿಸಿದ್ದಾರೆ.

    MORE
    GALLERIES