Panch Mahapurush Raj Yoga: ಜನವರಿ 18ರಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆಯಂತೆ, ನಿಮ್ಗೂ ಈ ಯೋಗ ಇದೆಯಾ ನೋಡಿ
Panch Mahapurush Raj Yoga: ಜ್ಯೋತಿಷ್ಯದಲ್ಲಿ ಬುದ ಗ್ರಹಕ್ಕೆ ಬಹಳ ಪ್ರಮುಖವಾದ ಸ್ಥಾನಮಾನವಿದೆ. ಅದರ ರಾಶಿ ಬದಲಾವಣೆಯು 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಈ ಬಾರಿ ಬುಧನ ಬದಲಾವಣೆಯಿಂದ ಪಂಚ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ಅನೇಕ ರಾಶಿಗಳಿಗೆ ಪ್ರಯೋಜನವಾಗಲಿದೆ.
ಜ್ಯೋತಿಷ್ಯದಲ್ಲಿ ಬುದ ಗ್ರಹಕ್ಕೆ ಬಹಳ ಪ್ರಮುಖವಾದ ಸ್ಥಾನಮಾನವಿದೆ. ಅದರ ರಾಶಿ ಬದಲಾವಣೆಯು 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಈ ಬಾರಿ ಬುಧನ ಬದಲಾವಣೆಯಿಂದ ಪಂಚ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ಅನೇಕ ರಾಶಿಗಳಿಗೆ ಪ್ರಯೋಜನವಾಗಲಿದೆ.
2/ 8
ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಬುಧಗ್ರಹ ಜನವರಿ 18ರ ಸಂಜೆ 6.18ಕ್ಕೆ ಧನು ರಾಶಿಯಲ್ಲಿ ಚಲಿಸಲಿದ್ದು, ನಂತರ ಫೆಬ್ರವರಿಯಲ್ಲಿ ಮಕರ ರಾಶಿ ಪ್ರವೇಶ ಮಾಡಲಿದ್ದಾನೆ. ಈ ಸಮಯದಲ್ಲಿಯೇ ಈ ಪಂಚ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ.
3/ 8
ಮೇಷ ರಾಶಿ: ಈ ರಾಶಿಯವರಿಗೆ ಪಂಚ ಮಹಾಪುರುಷ ರಾಜಯೋಗದಿಂದ ಅವಕಾಶಗಳ ಸುರಿಮಳೆಯಾಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸಲಿದೆ. ಈ ಸಮಯದಲ್ಲಿ ಹಳೆಯ ಸಮಸ್ಯೆಗಳಿಗೆ ಸಹ ಪರಿಹಾರ ಸಿಗುತ್ತದೆ.
4/ 8
ಮಿಥುನ: ಈ ಸಮಯದಲ್ಲಿ ಅವಿವಾಹಿತರಿಗೆ ವಿವಾಹ ಭಾಗ್ಯವಿದೆ ಎನ್ನಲಾಗುತ್ತಿದ್ದು, ಕುಟುಂಬದಲ್ಲಿ ಯಾವುದೇ ರೀತಿ ವೈಮನಸ್ಸು ಇದ್ದರೂ ನಿವಾರಣೆಯಾಗುತ್ತದೆ. ಮಾನಸಿಕ ಶಾಂತಿ ಹಾಗೂ ಆರೋಗ್ಯ ನಿಮ್ಮದಾಗುತ್ತದೆ.
5/ 8
ಕನ್ಯಾ: ಕನ್ಯಾ ರಾಶಿಯವರಿಗೆ ಪಂಚ ಮಹಾಪುರುಚ ರಾಜಯೋಗದಿಂದ ಆರ್ಥಿಕವಾಗಿ ಲಾಭವಾಗಲಿದೆ. ಬಹಳ ದಿನಗಳಿಂದ ಬರದೇ ಹಾಗೆಯೇ ಉಳಿದಿದ್ದ ಹಣ ನಿಮ್ಮ ಕೈ ಹಿಡಿಯಲಿದೆ. ಅಲ್ಲದೇ ಹೂಡಿಕೆಯಲ್ಲಿ ಸಹ ಲಾಬ ಹೆಚ್ಚಾಗಲಿದೆ.
6/ 8
ಧನಸ್ಸು: ಧನಸ್ಸು ರಾಶಿಯವರಿಗೆ ಈ ಯೋಗದ ಫಲದಿಂದ ನಿಂತು ಹೋಗಿದ್ದ ಕೆಲಸಗಳು ಪೂರ್ಣವಾಗಲಿದೆ. ಆರೋಗ್ಯದ ದೃಷ್ಟಿಯಿಂದ ಸಹ ಈ ಸಮಯದಲ್ಲಿ ಎಲ್ಲಾವೂ ಒಳ್ಳೆಯದಾಗಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಸಹ ಯಶಸ್ಸು ನಿಮ್ಮದಾಗುತ್ತದೆ.
7/ 8
ಮೀನ: ಈ ಸಮಯದಲ್ಲಿ ಮೀನ ರಾಶಿಯವರು ಕೈ ಹಿಡಿದ ಕೆಲಸಗಳು ಯಶಸ್ಸು ನೀಡುತ್ತದೆ. ಅದರಲ್ಲೂ ಹೊಸ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಎನ್ನಬಹುದು. ಸ್ವಂತ ಕಂಪನಿ ಇದ್ದರೆ ಆರ್ಥಿಕವಾಗಿ ಲಾಭ ಆಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)