Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

Panch Grahi Yoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷ ಅಕ್ಷಯ ತೃತೀಯ ಬಹಳ ವಿಶೇಷವಾಗಿರಲಿದೆ. ಏಕೆಂದರೆ ಈ ವರ್ಷ ಒಂದಲ್ಲ 5 ಗ್ರಹಗಳು ಮೇಷ ರಾಶಿಯಲ್ಲಿ ಒಟ್ಟಿಗೆ ಸೇರುತ್ತವೆ. ಈ ಗ್ರಹಗಳ ಸಂಯೋಗವನ್ನು ಪಂಚಗ್ರಹ ಯೋಗ ಎನ್ನಲಾಗುತ್ತದೆ. ಈ ಬಾರಿ ಪಂಚಗ್ರಹ ಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ, ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22 ರಂದು ಬರುತ್ತದೆ. ಈ ಬಾರಿ ಅಕ್ಷಯ ತೃತೀಯ ಬಹಳ ವಿಶೇಷವಾಗಿದ್ದು, ಒಂದೇ ರಾಶಿಯಲ್ಲಿ 5 ಗ್ರಹಗಳ ಸಂಯೋಗವಾಗಲಿದೆ.

    MORE
    GALLERIES

  • 27

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    ಮೇಷ ರಾಶಿಯಲ್ಲಿ 5 ಗ್ರಹಗಳ ಸಂಯೋಗವಾಗುವುದರ ಜೊತೆಗೆ ವೃಷಭ ರಾಶಿಯಲ್ಲಿ ಎರಡು ಗ್ರಹಗಳಿವೆ. ಮೇಷ ರಾಶಿಯಲ್ಲಿ ಸೂರ್ಯ, ಬುಧ, ಗುರು ಮತ್ತು ಯುರೇನಸ್ ಸಂಯೋಗವಾಗಲಿದೆ. ಈ ವಿಶಿಷ್ಟ ಸಂಯೋಜನೆಯಿಂದ ಪಂಚಗ್ರಾಹಿ ಯೋಗವು ರೂಪುಗೊಳ್ಳಲಿದ್ದು, ಇದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    ಮೇಷ ರಾಶಿ: ಈ ರಾಶಿಯಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳುವುದರಿಂದ ಅಕ್ಷಯ ತೃತೀಯ ದಿನವು ಮೇಷ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಇದಲ್ಲದೇ, ಉದ್ಯೋಗ ಮತ್ತು ವ್ಯವಹಾರದಲ್ಲಿಯೂ ಸಹ ಲಾಭ ಹುಡುಕಿ ಬರಲಿದೆ.

    MORE
    GALLERIES

  • 47

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    ವೃಷಭ ರಾಶಿ: ಪಂಚಗ್ರಹಿ ಯೋಗದ ರಚನೆಯ ಜೊತೆಗೆಈ ರಾಶಿಯಲ್ಲಿ ಚಂದ್ರ ಮತ್ತು ಶುಕ್ರ ಸಂಯೋಗವೂ ಆಗುತ್ತಿದೆ. ಹಾಗಾಗಿ ಈ ರಾಶಿಗೆ ಸೇರಿದವರ ಜಾತಕದಲ್ಲಿ ರಾಜಯೋಗ ಉಂಟಾಗುತ್ತದೆ. ಇದರಿಂದ ನಿಮ್ಮ ಕೆಲಸವನ್ನು ಕಚೇರಿಯಲ್ಲಿ ಗುರುತಿಸಲಾಗುತ್ತದೆ. ಈ ಸಮಯದಲ್ಲಿ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ, ನೀವು ಸಂಪತ್ತನ್ನು ಪಡೆಯುತ್ತೀರಿ.

    MORE
    GALLERIES

  • 57

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    ಕರ್ಕಾಟಕ ರಾಶಿ: ಈ ರಾಶಿಯವರಿಗೆ ಅಕ್ಷಯ ತೃತೀಯ ದಿನ ಬಹಳ ವಿಶೇಷವಾಗಿರಲಿದೆ. ಈ ರಾಶಿಯ ಹತ್ತನೇ ಮನೆಯಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಶುಕ್ರ ಕೂಡ ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಈ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅಲ್ಲದೇ ಆರ್ಥಿಕವಾಗಿ ಸಹ ಲಾಭವಾಗುತ್ತದೆ.

    MORE
    GALLERIES

  • 67

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    ಸಿಂಹ: ಈ ರಾಶಿಯಲ್ಲಿ ಸೂರ್ಯನು ಐದನೇ ಮನೆಯಲ್ಲಿ ಸಂಚರಿಸುತ್ತಾನೆ. ಹಾಗಾಗಿ ಈ ರಾಶಿಯವರಿಗೆ ಅಕ್ಷಯ ತೃತೀಯ ದಿನ ಬಹಳ ವಿಶೇಷ ಎನ್ನಬಹುದು. ಈ ಸಮಯದಲ್ಲಿ ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗಲಿವೆ. ಅಲ್ಲದೇ, ಹಣದ ಲಾಭದೊಂದಿಗೆ ಪ್ರಗತಿ ಕೂಡ ಆಗುತ್ತದೆ.

    MORE
    GALLERIES

  • 77

    Panch Grahi Yoga: ಅಕ್ಷಯ ತೃತೀಯ ದಿನದಂದು ಒಂದೇ ಕಡೆ 5 ಗ್ರಹಗಳು, ಈ 4 ರಾಶಿಯವರ ಲಕ್ ಚೇಂಜ್​

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES