Palmistry: ಅಂಗೈನಲ್ಲಿ ಈ ರೇಖೆ ಇದ್ರೆ ನೀವು ಶ್ರೀಮಂತರಾಗೋದನ್ನ ಯಾರೂ ತಡೆಯೋಕೆ ಆಗಲ್ಲ
Lucky Lines In Hand: ಜ್ಯೋತಿಷ್ಯ ಶಾಸ್ತ್ರದಲ್ಲಿ ಹಸ್ತಸಾಮುದ್ರಿಕಾ ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಿಮ್ಮ ಅಂಗೈ ರೇಖೆಯ ಮೂಲಕ ಭವಿಷ್ಯವನ್ನು ತಿಳಿಯಲು ಇದು ಸಹಾಯ ಮಾಡುತ್ತದೆ. ಈ ಶಾಸ್ತ್ರದ ಪ್ರಕಾರ ನಿಮ್ಮ ಅದೃಷ್ಟದ ರೇಖೆ ಯಾವುದು ಎಂಬುದು ಇಲ್ಲಿದೆ.
ಲಗ್ನ ರೇಖೆ: ಈ ರೇಖೆಯು ಕಿರುಬೆರಳಿನ ಕೆಳಗೆ ಸಮನಾಗಿ ಇರುತ್ತದೆ. ಈ ಸಾಲು ಸ್ಪಷ್ಟವಾಗಿ ಕಾಣಿಸಿದಷ್ಟೂ ನಿಮ್ಮ ದಾಂಪತ್ಯ ಉತ್ತಮವಾಗಿರುತ್ತದೆ. ಈ ರೇಖೆಯು ಮೇಲಕ್ಕೆ ಹೋದರೆ ಅಥವಾ ಕೆಳಕ್ಕೆ ಹೋದರೆ ಅದು ಒಳ್ಳೆಯದಲ್ಲ, ಅದು ದಾಂಪತ್ಯದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಈ ರೇಖೆ ಕಟ್ ಆಗಿದ್ದರೆ ವಿಚ್ಛೇದನಕ್ಕೆ ಕಾರಣವಾಗುತ್ತದೆ.
2/ 8
ಲವ್ ಲೈನ್: ನಿಮ್ಮ ಅಂಗೈನಲ್ಲಿರುವ ಸಣ್ಣ ರೇಖೆಗಳು ನಿಮ್ಮ ಲವ್ ಲೈಫ್ ಬಗ್ಗೆ ಹೇಳುತ್ತದೆ. ಅದರಲ್ಲೂ ಈ ಗುಲಾಬಿ ಬಣ್ಣದಲ್ಲಿದ್ದರೆ ಪ್ರೀತಿ ಪ್ರೇಮ ಶುರುವಾಗುತ್ತದೆ. ನಿಮ್ಮ ರಾಶಿಯಲ್ಲಿ ಶುಕ್ರನು ಉಚ್ಛನಾಗಿರುವಾಗ ಪ್ರೇಮ ವಿವಾಹವಾಗುವ ಸಾಧ್ಯತೆಗಳಿವೆ.
3/ 8
ಸಂತಾನ ರೇಖೆ: ಲಗ್ನ ರೇಖೆಯ ಮೇಲೆ ಸಂತಾನ ರೇಖೆಗಳು ಮತ್ತು ಅವುಗಳ ಸ್ಥಾನಗಳಿವೆ. ಈ ಸ್ಥಾನದಲ್ಲಿ ನಿಮಗೆ ಅಡ್ಡ ರೇಖೆ, ಮಚ್ಚೆ ಇದ್ದರೆ ಸಂತಾನ ಸಮಸ್ಯೆ ಉಂಟಾಗುತ್ತದೆ. ರೇಖೆ ನೇರವಾಗಿದ್ದು, ಯಾವುದೇ ಕಲೆ ಹಾಗೂ ಮಚ್ಚೆ ಇಲ್ಲದಿದ್ದರೆ ಒಳ್ಳೆಯದು.
4/ 8
ಧನ ರೇಖೆ: ಸಂಪತ್ತಿಗೆ ವಿಶೇಷ ರೇಖೆ ಎಂಬುದೇ ಇಲ್ಲ. ಇದು ಕೆಲವು ವಿಶೇಷ ಸೂಚನೆಗಳಿಂದಾಗಿ ನಾವು ಸಂಪತ್ತಿನ ವಿಚಾರ ತಿಳಿಯಬಹುದು. ಹಾಗೆಯೇ ಕೈಯಲ್ಲಿ ತ್ರಿಕೋನ ಇದ್ದರೆ ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ.
5/ 8
ಧನ ರೇಖೆ: ಅಲ್ಲದೇ, ಕೈ ಬಣ್ಣ ಗುಲಾಬಿಯಾಗಿದ್ದರೆ ಸಂಪತ್ತು ಇರುತ್ತದೆ. ಕೈ ಬಣ್ಣ ಮಾಸಿ ಹೋಗಿದ್ದರೆ ಅಥವಾ ಕಪ್ಪಾಗಿದ್ದರೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
6/ 8
ವಯಸ್ಸಿನ ರೇಖೆ: ಜೀವನದ ರೇಖೆಯನ್ನು ವಯಸ್ಸಿನ ರೇಖೆ ಎಂದು ಕರೆಯಲಾಗುತ್ತದೆ. ಕೈಯಲ್ಲಿರುವ ವಿವಿಧ ರೀತಿಯ ಅನೇಕ ಗುರುತುಗಳಿಂದ ನೀವು ವಯಸ್ಸನ್ನು ಹೇಳಬಹುದು. ನಿಮ್ಮ ಆಯಸ್ಸಿನ ಬಗ್ಗೆ ಸಹ ತಿಳಿದುಕೊಳ್ಳಬಹುದು.
7/ 8
ವಯಸ್ಸಿನ ರೇಖೆ: ಕಿರುಬೆರಳಿನ ರೇಖೆ ಹಾಗೂ ನಿಮ್ಮ ಬೆರಳುಗಳಲ್ಲಿ ಇರುವ ಸಣ್ಣ ಸಣ್ಣ ರೇಖೆಗಳನ್ನು ಅಧ್ಯಯನ ಮಾಡುವುದರಿಂದ ಆಯಸ್ಸಿನ ಬಗ್ಗೆ ತಿಳಿಯಬಹುದು. ವಯಸ್ಸಿನ ರೇಖೆಯ ಬಳಿ ಅಡ್ಡ ಇದ್ದರೆ,ಅಂದರೆ ಮಚ್ಚೆ ಇರುವುದು ಅಥವಾ ಲೈನ್ ಕಟ್ ಆಗಿದ್ದರೆ ನೀವು ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)