Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

Shukra Gochara: ಶುಕ್ರ ಮೇಷ ರಾಶಿಯಿಂದ ವೃಷಭ ರಾಶಿಗೆ ಗುರುವಾರ, ಏಪ್ರಿಲ್ 6 ರಂದು ಸಂಚಾರ ಮಾಡಲಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಅದರಲ್ಲೂ ಈ ಶುಕ್ರ ಸಂಚಾರದಿಂದ ಸಂತೋಷ, ಸಂಪತ್ತು ಸಹ ಹೆಚ್ಚಾಗಲಿದೆ. ಯಾವೆಲ್ಲಾ ರಾಶಿಗೆ ಈ ಅದೃಷ್ಟದ ಕಾದಿದೆ ಎಂಬುದು ಇಲ್ಲಿದೆ.

First published:

  • 18

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ವೃಷಭ ರಾಶಿಯು ಶುಕ್ರನ ಸ್ವಂತ ರಾಶಿಯಾಗಿದ್ದು, ಈ ಕಾರಣದಿಂದ ಶುಕ್ರ ಸಂಚಾರ ಬಹಳ ಪ್ರಮುಖ ಎನಿಸಿಕೊಂಡಿದೆ. ಅಲ್ಲದೇ ಈ ರಾಶಿಯಲ್ಲಿ ಶುಕ್ರನ ಶಕ್ತಿ ಹೆಚ್ಚಾಗುವುದರಿಂದ ಅದೃಷ್ಟವೇ ಬದಲಾಗಲಿದೆ ಎನ್ನಬಹುದು.

    MORE
    GALLERIES

  • 28

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ಕನ್ಯಾ ರಾಶಿ: ಈ ರಾಶಿಯವರಿಗೆ ಶುಕ್ರ ಸಂಕ್ರಮಣವು ಪ್ರಯೋಜನಕಾರಿಯಾಗಿರಲಿದೆ. ಈ ಸಂಚಾರದಿಂದ ನೀವು ಸುಲಭವಾಗಿ ಶತ್ರುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಪ್ರಶಂಸೆ ನಿಮ್ಮನ್ನ ಹುಡುಕಿ ಬರಲಿದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. ಹೊಸ ವಾಹನ ಖರೀದಿಯ ಯೋಗವಿದೆ,

    MORE
    GALLERIES

  • 38

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ಮಕರ ರಾಶಿ: ಈ ಮಕರ ರಾಶಿಯವರು ಶುಕ್ರ ಸಂಚಾರದಿಂದ ಬಹಳ ಲಾಭ ಪಡೆಯುತ್ತಾರೆ. ಈ ಸಮಯದಲ್ಲಿ, ಉದ್ಯೋಗಿಗಳಿಗೆ ಪ್ರಶಂಸೆ ಮಾತ್ರವಲ್ಲದೇ ಆರ್ಥಿಕವಾಗಿ ಸಹ ಪ್ರಯೋಜನ ಸಿಗುತ್ತದೆ. ಒಟ್ಟಾರೆ ಅದೃಷ್ಟ ಈ ರಾಶಿಯವರ ಬೆನ್ನಿಗಿರುತ್ತದೆ. ಅಲ್ಲದೇ, ಈ ಸಮಯದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ನಿಜಕ್ಕೂ ದೊಡ್ಡ ಲಾಭ ಸಿಗಲಿದೆ.

    MORE
    GALLERIES

  • 48

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ಮೇಷ ರಾಶಿ: ಶುಕ್ರನ ಸಂಚಾರ ಈ ರಾಶಿಯಿಂದ ಎರಡನೇ ಮನೆಯಲ್ಲಿ ನಡೆಯಲಿದ್ದು, ಆರ್ಥಿಕವಾಗಿ ಅನೇಕ ಸಮಸ್ಯೆಗಳು ನಿವಾರಣೆ ಆಗುವುದು ಮಾತ್ರವಲ್ಲದೇ, ಲಾಭ ಸಹ ಆಗುತ್ತದೆ. ಈ ಸಮಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದರಿಂದ ಸಹ ಪ್ರಯೋಜನ ಸಿಗಲಿದೆ. ಈ ಸಮಯದಲ್ಲಿ ಯಶಸ್ಸು ಹಾಗೂ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 58

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ಕುಂಭ ರಾಶಿ: ಶುಕ್ರನ ಈ ಸಂಚಾರ ಕುಂಭ ರಾಶಿಯವರ ದಿಕ್ಕನ್ನ ಬದಲಾಯಿಸಲಿದೆ. ವಿದೇಶ ಪ್ರಯಾಣದ ಅವಕಾಶ ಸಿಗಲಿದ್ದು, ನಿಮ್ಮ ವೈಯಕ್ತಿಕ ಜೀವನದಲ್ಲಿ ಇದ್ದ ಎಲ್ಲಾ ಸಮಸ್ಯೆಗಳು ಸಹ ನಿವಾರಣೆ ಆಗುತ್ತದೆ. ಅಲ್ಲದೇ, ಹೊಸ ವ್ಯಾಪಾರ ಹಾಗೂ ವ್ಯವಹಾರ ಮಾಡಲು ಇದು ಸೂಕ್ತವಾದ ಸಮಯ ಎನ್ನಬಹುದು.

    MORE
    GALLERIES

  • 68

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ವೃಷಭ ರಾಶಿ: ಈ ರಾಶಿಯಲ್ಲಿಯೇ ಶುಕ್ರ ಹೆಚ್ಚು ಕಾಲ ವಾಸ ಮಾಡುವುದರಿಂದ ಅನೇಕ ವಿಚಾರಗಳಲ್ಲಿ ಪ್ರಯೋಜನ ಸಿಗಲಿದೆ. ಅದೃಷ್ಟ ಈ ರಾಶಿಯವರ ಬೆನ್ನೇರಲಿದ್ದು, ಬಹಳ ದಿನಗಳಿಂದ ಕಾಯುತ್ತಿದ್ದ ಹಣ ಮರಳಿ ಸಿಗಲಿದೆ. ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಆದರೆ, ಕೆಲಸದ ಮಧ್ಯೆ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

    MORE
    GALLERIES

  • 78

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    ಕರ್ಕಾಟಕ ರಾಶಿ: ಈ ಶುಕ್ರನ ಸಂಚಾರದಿಂದ ದೊಡ್ಡ ಮಟ್ಟದಲ್ಲಿ ನಿಮಗೆ ಆರ್ಥಿಕವಾಗಿ ಲಾಭವಾಗುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗಲಿದೆ. ಗುಡ್​ ನ್ಯೂಸ್ ನಿಮಗಾಗಿ ಕಾದಿದೆ ಎನ್ನಬಹುದು. ಹಿರಿಯರ ಸಲಹೆ ಪಡೆದು ಯಾವುದೇ ನಿರ್ಧಾರ ಮಾಡಿದರೂ ಸಹ ಅದರಿಂದ ಲಾಭ ಗಳಿಸುತ್ತಿರಿ.

    MORE
    GALLERIES

  • 88

    Hanuman Jayanti 2023: ಏಪ್ರಿಲ್ 6 ರಿಂದ ಈ ಆರು ರಾಶಿಗಳ ನಸೀಬು ಬದಲು, ಶುಕ್ರನಿಂದ ಭಾರೀ ಅದೃಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES