Mauni Amavasya: ಮೌನಿ ಅಮಾವಾಸ್ಯೆ ದಿನ ಪಿತೃದೋಷ ನಿವಾರಣೆಗೆ ತಪ್ಪದೇ ಈ ಐದು ಕ್ರಮ ಅನುಸರಿಸಿ
ಮೌನಿ ಅಮಾವಾಸ್ಯೆಯಂದು (Mauni Amavasya) ಗಂಗಾಸ್ನಾನ ಮತ್ತು ದಾನ ಮಾಡುವುದರಿಂದ ಪಾಪಗಳು ತೊಲಗುತ್ತವೆ. ಜೊತೆಗೆ ದುಃಖಗಳಿಂದ ಮುಕ್ತಿ ಸಿಗುತ್ತದೆ. ಪಿತೃ ದೋಷದಿಂದ (Pirtu dosha) ಬಳಲುತ್ತಿರುವವರು ಕೂಡ ಈ ದಿನದಂದು ತಮ್ಮ ಪೂರ್ವಿಕರಿಗೆ ಶ್ರಾದಧ ವಿಧಿಗಳನ್ನು ನೆರವೇರಿಸುತ್ತಾರೆ. ಈ ಮೂಲಕ ಪಿತೃದೋಷ ನಿವಾರಣೆ ಮಾಡಿಕೊಳ್ಳುತ್ತಾರೆ. ಧಾರ್ಮಿಕ ನಂಬಿಕೆಯೇ ಪ್ರಕಾರ ಮೌನಿ ಅಮಾವಾಸ್ಯೆಯಂದು ಪಿತೃ ದೋಷವನ್ನು ಹೋಗಲಾಡಿಸಲು ಸುಲಭವಾದ ಮಾರ್ಗಗಳು ಯಾವುವು ಎಂದು ತಿಳಿಯೋಣ
ಮೌನಿ ಅಮವಾಸ್ಯೆಯಂದು ಸ್ನಾನ ಮಾಡಿ ದಾನ ಮಾಡಿದ ನಂತರ ಶಿವನ ದೇವಸ್ಥಾನಕ್ಕೆ ತೆರಳಿ ಶಿವನನ್ನು ಪೂಜಿಸಬೇಕು. ಸದಾಶಿವ ಭಗವಂತ ಈ ಜಗತ್ತಿನ ಪಿತಾಮಹ. ಪೂಜೆಯ ನಂತರ, ಪಿತೃ ದೋಷದಿಂದ ಮುಕ್ತಿ ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಪ್ರಗತಿಗಾಗಿ ಸದಾಶಿವನನ್ನು ಪ್ರಾರ್ಥಿಸಿ. ಶಿವನ ಕೃಪೆಯಿಂದ ಪಿತೃ ದೋಷದಿಂದ ಮುಕ್ತರಾಗಬಹುದು.
2/ 5
ಮೌನಿ ಅಮವಾಸ್ಯೆಯಂದು ಗಂಗಾಸ್ನಾನ ಅಥವಾ ಮನೆಯಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ. ಅದರ ನಂತರ ಎಲ್ಲಾ ಪೂರ್ವಜರನ್ನು ನೆನಪಿಸಿಕೊಂಡು ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಅವರಿಗೆ ತರ್ಪಣವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.
3/ 5
ಮೌನಿ ಅಮಾವಾಸ್ಯೆಯಂದು ಪೂರ್ವಜರ ಆತ್ಮತೃಪ್ತಿಗಾಗಿ, ಪಿಂಡದಾನ, ಶ್ರಾದ್ಧ ಕರ್ಮ ಇತ್ಯಾದಿಗಳನ್ನು ಮಾಡಬೇಕು. ನಂತರ, ಬ್ರಾಹ್ಮಣರಿಗೆ ಆಹಾರವನ್ನು ನೀಡಬೇಕು. ಪೂರ್ವಜರು ಕೂಡ ಇದರಿಂದ ಸಂತುಷ್ಟರಾಗಿ ಪಿತೃ ದೋಷದಿಂದ ಮುಕ್ತಿಯನ್ನು ಪಡೆಯಬಹುದು
4/ 5
ಮೌನಿ ಅಮವಾಸ್ಯೆಯ ದಿನ ಪೂರ್ವಜರಿಗೆ ಅನ್ನಸಂತರ್ಪಣೆ ಮಾಡಿ. ಶ್ರಾದ್ಧವನ್ನು ಮಾಡಿದ ನಂತರ, ಆ ಆಹಾರವನ್ನು ನಾಯಿ ಮತ್ತು ಕಾಗೆಗೆ ನೀಡಬೇಕು. ಪೂರ್ವಜರು ತಮ್ಮ ಆಹಾರವನ್ನು ಈ ಮೂಲಕ ಸೇವಿಸಿ ತೃಪ್ತರಾಗುತ್ತಾರೆ. ನಾಯಿ ಮತ್ತು ಕಾಗೆಯನ್ನು ತಿನ್ನುವುದರಿಂದ ಆ ಆಹಾರವು ಪೂರ್ವಜರಿಗೆ ಹೋಗುತ್ತದೆ ಎಂಬುದು ನಂಬಿಕೆ.
5/ 5
ಮೌನಿ ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆಗೆ, ಸಂಜೆ ದೇವಸ್ಥಾನದ ಬಳಿ ಇರುವ ಅರಳಿ ಮರದ ಬೇರಿಗೆ ನೀರು ಮತ್ತು ಹಸುವಿನ ಹಾಲನ್ನು ಅರ್ಪಿಸಿ. ಅದರ ನಂತರ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು