ಗಜಕೇಸರಿ ಯೋಗ ಎಂದರೇನು?: ಗಜ ಎಂದರೆ ಆನೆ ಮತ್ತು ಕೇಸರಿ ಎಂದರೆ ಸಿಂಹ. ಆನೆ ಮತ್ತು ಸಿಂಹ ಎರಡೂ ಅತ್ಯಂತ ಬಲಿಷ್ಠ ಪ್ರಾಣಿಗಳಾಗಿರುವುದರಿಂದ ಗಜಕೇಸರಿ ರಾಜಯೋಗ ಕೂಡ ಬಹಳ ಬಲಿಷ್ಠವಾದ ಯೋಗ ಎಂದು ಹೇಳಲಾಗುತ್ತದೆ. ಈ ಯೋಗ ಇರುವ ಜನರು ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ ಮತ್ತು ಅವರು ಏನು ಮಾಡಿದರೂ ಅದರಲ್ಲಿ ಅದ್ಭುತವಾದ ಫಲಿತಾಂಶವನ್ನು ಸಾಧಿಸುತ್ತಾರೆ. ಹಾಗಾಗಿಯೇ ಗಜಕೇಸರಿ ರಾಜಯೋಗವು ಪ್ರತಿಯೊಬ್ಬರ ಜೀವನದಲ್ಲಿ ಸಕಲ ಸೌಭಾಗ್ಯವನ್ನು ನೀಡುವ ರಾಜಯೋಗವಾಗಿದೆ.