Holi ಹುಣ್ಣಿಮೆ ದಿನ ತಪ್ಪದೇ ಈ ಕಾರ್ಯ ಮಾಡಿ; ಉದ್ಯೋಗದಲ್ಲಿ ಯಶಸ್ಸು ಗ್ಯಾರಂಟಿ
ಹೋಳಿ ಹಿಂದೂಗಳ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಹೋಳಿ ಹುಣ್ಣಿಮೆ ಮಾರ್ಚ್ 17 ರಂದು ಬಂದಿದೆ. ಬಣ್ಣಗಳ ಹಬ್ಬವಾದ ಹೋಳಿಯನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ಕಾಮ ದಹನ ನಡೆಸುವ ಈ ದಿನ ಉದ್ಯೋಗದಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಅದರಿಂದ ಕೂಡ ಮುಕ್ತಿ ಪಡೆಯಬಹುದು.
ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನದಂದು ಬಡವರಿಗೆ ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಉತ್ತಮ ಆರೋಗ್ಯವು ಸಂಪತ್ತನ್ನು ತರುತ್ತದೆ ಮತ್ತು ಜೀವನದಲ್ಲಿ ಶಾಂತಿ ಉಳಿಯುತ್ತದೆ.
2/ 8
ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಹೋಳಿ ಹುಣ್ಣಿಮೆ ಶುಭದಿನವಾಗಿದೆ. ಈ ದಿನ ತೆಂಗಿನಕಾಯಿಯನ್ನು ಮನೆಗೆ ನಿವಾಳಿಸಿ ಅದನ್ನು ಒಡೆದು, ಕಾಮ ದಹನದ ಬೆಂಕಿಯಲ್ಲಿ ಹಾಕಬೇಕು.
3/ 8
ಬಳಿಕ ಈ ಬೆಂಕಿ ಸುತ್ತ ಏಳು ಪ್ರದಕ್ಷಿಣೆ ಹಾಕಬೇಕು. ನಂತರ ದೇವರಿಗೆ ಹಣ್ಣುಗಳು ಅಥವಾ ಸಿಹಿತಿಂಡಿಗಳನ್ನು ಅರ್ಪಿಸಿ. ಇದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
4/ 8
ಶ್ರಮವಹಿಸಿ ಕೆಲಸ ಮಾಡಿದರೂ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ, ನಂತರ ಕಾಮದಹನದ ಪೂಜೆಯ ಸಮಯದಲ್ಲಿ ತೆಂಗಿನಕಾಯಿಯೊಂದಿಗೆ ವೀಳ್ಯದೆಲೆ ಅರ್ಪಿಸಿ. ದೇವರಿಗೆ ಪ್ರಾರ್ಥಿಸಿ.
5/ 8
ಕಾಮ ದಹನದ ಸಮಯದಲ್ಲಿ ಹಲಸು, ಗೋಧಿ, ಅವರೆಕಾಳು ಮತ್ತು ಕಾಳುಗಳನ್ನು ಬೆಂಕಿಯಲ್ಲಿ ಹಾಕಿದರೆ ಆರ್ಥಿಕ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
6/ 8
ಅಲ್ಲದೇ ಈ ದಿನ ಮುತ್ತಿನ ಶಂಖವನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
7/ 8
ಧರ್ಮಗ್ರಂಥಗಳ ಪ್ರಕಾರ ಹೋಳಿ ಹಬ್ಬವು ಹೋಲಿಕಾ ದಹನದಿಂದ ಪ್ರಾರಂಭವಾಗುತ್ತದೆ. ಕುಟುಂಬದಲ್ಲಿ ಶಾಂತಿ, ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಬಯಸಿದರೆ ಶಿವನಿಗೆ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಪ್ರಸಾದವಾಗಿ ಅರ್ಪಿಸಬೇಕು.
8/ 8
ಹೋಳಿ ಹಬ್ಬದ ಕಾಮದಹನ ಮನುಷ್ಯನಲ್ಲರಿವ ಕಾಮ ಕ್ರೋಧಗಳ ದಹನದ ಸಂಕೇತವೂ ಆಗಿದೆ. ಈ ದಿನದಂದು ದೇವರಿಗೆ ಇಷ್ಟಾರ್ಥ ಪ್ರಾಪ್ತಿಗಾಗಿ ಪೂಜಿಸುವುದರಿಂದ ಶುಭವಾಗಲಿದೆ.