Shivling: ಶಿವಲಿಂಗಕ್ಕೆ ಈ ವಸ್ತುಗಳನ್ನು ಅರ್ಪಿಸಿದ್ರೆ ಜೀವನದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತೆ
Offer these things on Shivling: ಭಗವಾನ್ ಶಿವನನ್ನ ಆರಾಧಿಸುವುದು ಹಾಗೂ ತೃಪ್ತಿ ಪಡಿಸುವುದು ಬಹಳ ಸುಲಭ ಎನ್ನಲಾಗುತ್ತದೆ. ಪುರಾಣಗಳಲ್ಲಿ ಸಹ ಶಿವನನ್ನ ಆರಾಧಿಸಿ ವರ ಪಡೆಯುತ್ತಿದ್ದ ಬಗ್ಗೆ ನಾವು ಕೇಳಿದ್ದೇವೆ. ಹಾಗೆಯೇ ನಾವು ಶಿವಲಿಂಗಕ್ಕೆ ಕೆಲ ವಸ್ತುಗಳನ್ನು ಅರ್ಪಿಸಿದ್ರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಅಕ್ಕಿ: ಅಕ್ಕಿಯನ್ನು ನೀವು ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಪ್ರತಿ ಸೋಮವಾರ ಒಂದು ಕಪ್ ಅಕ್ಕಿಯನ್ನು ಶಿವಲಿಂಗಕ್ಕೆ ಅರ್ಪಿಸಿ. ಇದರಿಂದ ಆರ್ಥಿಕ ಸಮಸ್ಯೆ ಸಹ ನಿವಾರಣೆಯಾಗುತ್ತದೆ.
2/ 7
ಕಬ್ಬಿನ ಜ್ಯೂಸ್: ಕಬ್ಬಿನ ಜ್ಯೂಸ್ ಅನ್ನು ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಯಾವುದೇ ರೀತಿಯ ಕೊರತೆ ಆಗುವುದಿಲ್ಲ ಎನ್ನಲಾಗುತ್ತದೆ. ತಿಂಗಳಲ್ಲಿ 2 ಸೋಮವಾರವಾದರೂ ಈ ರೀತಿ ಮಾಡುವುದರಿಂದ ಸಮಸ್ಯೆಗಳು ಬರುವುದಿಲ್ಲ.
3/ 7
ತುಪ್ಪ: ಶಿವಲಿಂಗದ ಮೇಲೆ ನೀವು ತುಪ್ಪವನ್ನು ಅರ್ಪಣೆ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯದ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.
4/ 7
ಶ್ರೀಗಂಧ: ಶ್ರೀಗಂಧವನ್ನು ದೇವರಿಗೆ ಅರ್ಪಿಸುವುದರಿಂದ ಹಲವಾರು ಲಾಭಗಳಿದೆ. ಹಾಗೆಯೇ ಶಿವಲಿಂಗಕ್ಕೆ ನೀವು ಗಂಧವನ್ನು ಅರ್ಪಣೆ ಮಾಡುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಹಾಗೂ ಪ್ರಶಂಸೆ ಲಭಿಸುತ್ತದೆ.
5/ 7
ಗೋಧಿ: ಮಕ್ಕಳ ಆರೋಗ್ಯದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನೀವು ಗೋಧಿಯನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಬೇಕು. ಇದರಿಂದ ಮಕ್ಕಳ ಆರೋಗ್ಯ ಸೇರಿದಂತೆ ಅವರಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
6/ 7
ಹಾಲು: ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಹೆಚ್ಚಾಗುವುದರ ಜೊತೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
7/ 7
ದೂರ್ವೆ ಹುಲ್ಲು: ದೂರ್ವೆ ಹುಲ್ಲನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದನ್ನು ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ದೀರ್ಘಾಯುಷ್ಯ ಲಬಿಸುತ್ತದೆ ಎಂಬ ನಂಬಿಕೆ ಇದೆ.