Hindu God Flowers: ಯಾವ ದೇವರಿಗೆ ಯಾವ ಹೂವು ಪ್ರಿಯ; ಇಲ್ಲಿದೆ ಮಾಹಿತಿ
ದೇವರ ಪೂಜೆ (God Worship) ಇರಲಿ, ಶುಭ ಸಮಾರಂಭವಿರಲಿ ಅಲ್ಲಿ ಹೂವುಗಳದ್ದೆ ಕಾರುಬಾರು. ಅದರಲ್ಲೂ ಕೆಲವು ಹೂವುಗಳು (Flower) ಕೆಲ ದೇವರಿಗೆ ಬಲು ಪ್ರಿಯ. ಇಂತಹ ಹೂವುಗಳಿಂದ ಪೂಜೆ ನಡೆಸಿದಾಗ ದೇವರ ಪ್ರೀತಿಗೆ ಪಾತ್ರರಾಗುತ್ತೇವೆ ಎಂಬುದು ಹಿಂದೂ ಸಂಪ್ರದಾಯದಲ್ಲಿದೆ. ಅದರಂತೆ ಯಾವ ದೇವರಿಗೆ ಯಾವ ಹೂವು ಪ್ರಿಯ ಎಂಬ ಮಾಹಿತಿ ಇಲ್ಲಿದೆ.
ಮಲ್ಲಿಗೆ ಹೂವು ಎಂದರೆ ಹನುಮಂತನಿಗೆ ತುಂಬಾ ಪ್ರಿಯ. ಎಲ್ಲೆಡೆ ಪರಿಮಳ ಬೀರುವ ಈ ಮಲ್ಲಿಗೆಯಿಂದ ಆಂಜನೇಯ ಪೂಜಿಸಿದರೆ ಶುಭ ಎನ್ನಲಾಗುವುದು. ಅತ್ಯಂತ ಸುಗಂಧದಿಂದ ಕೂಡಿರುವ ಈ ಹೂವನ್ನು ಔಷಧ ಸಸ್ಯ ಎಂದು ಪರಿಗಣಿಸಲಾಗಿದೆ
2/ 7
ಪಲಾಶ ಹೂವು ತಾಯಿ ಸರಸ್ವತಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಪೂಜೆಯಲ್ಲಿಪಲಾಶ ಪುಷ್ಪಗಳನ್ನು ಅರ್ಪಿಸಿ. ಈ ಹೂವುಗಳನ್ನು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹೂವಿನ ಮೂಲಕ ಆರಾಧಿಸಿದರೆ ದೇವಿ ಸಂಪನ್ನಗೊಳ್ಳುತ್ತಾಳೆ ಎನ್ನಲಾಗಿದೆ.
3/ 7
ಎಕ್ಕದ ಹೂವು: ಗಣೇಶನಿಗೆ ಈ ಹೂವು ಬಲು ಪ್ರಿಯ. ಗರಿಕೆಯ ಜೊತೆ ಗಣೇಶನಿಗೆ ಎಕ್ಕೆ ಹೂವು ಸಮರ್ಪಿಸಿದರೆ ಆತ ಸಂತೋಷಗೊಳ್ಳುತ್ತಾನೆ. ಔಷಧ ಗುಣವನ್ನು ಹೊಂದಿರುವ ಈ ಎಕ್ಕದ ಹೂವ ವಾಸ್ತು ದೋಷ ನಿವಾರಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ.
4/ 7
ತುಳಸಿ: ವಿಷ್ಣು, ಕೃಷ್ಣ ಪೂಜೆಗೆ ತಪ್ಪದೇ ತುಳಸಿ ಅರ್ಪಣೆ ಮಾಡಬೇಕು. ತುಳಸಿ ಅರ್ಪಣೆಯಿಂದಲೇ ವಿಷ್ಣುವಿನ ಪೂಜೆ ಸಂಪನ್ನಗೊಳ್ಳುತ್ತದೆ. ಅದರಲ್ಲೂ ಕಾರ್ತಿಕ ಮಾಸದ ಪೂಜೆಯಲ್ಲಿ ತಪ್ಪದೇ ತುಳಸಿ ಬಳಸಿ.
5/ 7
ಕೆಂಪು ದಾಸವಾಳ: ಕಾಳಿ, ಚಾಮುಂಡೇಶ್ವರಿ ಆರಾಧನೆಯಲ್ಲಿ ಕೆಂಪು ದಾಸವಾಳ ಇರಲಿ. ಕಾಳಿ ದೇವರ ಪೂಜೆಯನ್ನು ಮಾಡುವಾಗ 108 ದಾಸವಾಳದ ಹೂವನ್ನು ಜೋಡಿಸುವುದರ ಮೂಲಕ ಹಾರವನ್ನು ಹಾಕಿದರೆ ದೇವಿ ಸಂತುಷ್ಟಳಾಗುತ್ತಾಳೆ
6/ 7
ಕಮಲ: ಲಕ್ಷ್ಮೀಪೂಜೆಯ ವೇಳೆ ಕಮಲದ ಹೂವಿಗೆ ಅಗ್ರ ಸ್ಥಾನ. ವೈಭವ ಲಕ್ಷ್ಮಿ ಕಮಲದ ಮೇಲೆ ಕುಳಿತಿರುವ ಹಿನ್ನಲೆ ಆಕೆಗೆ ತಪ್ಪದೇ ಈ ಹೂವು ಅರ್ಪಿಸಬೇಕು. ಕಮಲ ಸಂಪತ್ತು ಮತ್ತು ಸಮೃದ್ದಿ ಪ್ರತೀಕ ಎಂದು ನಂಬಲಾಗಿದೆ.
7/ 7
ಪಾರಿಜಾತ ಪಾರಿಜಾತ ಪುಷ್ಪ ವಿಷ್ಣುವಿನ ನೆಚ್ಚಿನ ಹೂವು ಆಗಿದೆ. ಸಾಗರ ಮಂಥನದ ಸಮಯದಲ್ಲಿ ಈ ಮರ ಹೊರಬಂದಿತು. ಇದನ್ನು ವಿಷ್ಣುವು ಸ್ವರ್ಗಕ್ಕೆ ತಂದನು ಎಂದು ಪುರಾಣದಲ್ಲಿ ತಿಳಿಸಲಾಗಿದೆ, ಆದ್ದರಿಂದ ಇದು ಅವನ ನೆಚ್ಚಿನ ಹೂವು ಆಗಿದೆ.