Numerology: ಈ ಸಂಖ್ಯೆಗಳಿಂದ ವೈದ್ಯರಿಗೆ ಅದೃಷ್ಟ, ವೃತ್ತಿಯಲ್ಲಿ ಭಾರೀ ಯಶಸ್ಸು!
ವೈದ್ಯರಿಗೆ ಅಥವಾ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಯಾವ ಸಂಖ್ಯೆಯಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ? ಸಂಖ್ಯಾಶಾಸ್ತ್ರ ಹೇಳೋದೇನು? ಉತ್ತಮ ಚಿಕಿತ್ಸೆ ನೀಡಲು, ರೋಗಿಗಳಿಗೆ ನಿಮ್ಮ ಮೇಲೆ ವಿಶ್ವಾಸ ಮೂಡಲು ಸಹಾಯ ಮಾಡುವ ಸಂಖ್ಯೆಗಳು ಯಾವುದು? ಇಲ್ಲಿದೆ ನೋಡಿ ವಿವರ
ಯಾರಾದರೂ ಅತ್ಯಂತ ಯಶಸ್ವಿ ವೈದ್ಯ ಅಥವಾ ವೈದ್ಯಕೀಯ ವೃತ್ತಿಗಾರನಾಗುವ ಗುರಿಯನ್ನು ಹೊಂದಿದ್ದರೆ, ಅವನು ನೇರವಾಗಿ ಅಥವಾ ಪರೋಕ್ಷವಾಗಿ ತನ್ನ ಜನ್ಮ ದಿನಾಂಕದಲ್ಲಿ 4, 6 ಮತ್ತು 7 ಸಂಖ್ಯೆಯನ್ನು ಹೊಂದಿರಬೇಕು.
2/ 9
ಸಂಖ್ಯೆ 4 ಪ್ರಯತ್ನಗಳನ್ನು ಸೂಚಿಸುತ್ತದೆ. ಇದು ಗುರಿಯನ್ನು ಸಾಧಿಸಲು ಅಗತ್ಯವಿರುವ ಹೋರಾಟ ಅಥವಾ ಶಿಸ್ತಿಗೆ ಸಂಬಂಧಿಸಿದೆ. ಇದು ತಾಂತ್ರಿಕ ಸಾಮರ್ಥ್ಯಗಳನ್ನು ನೀಡುತ್ತದೆ ಮತ್ತು ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ನಿಮ್ಮನ್ನು ಪರಿಣಿತರನ್ನಾಗಿ ಮಾಡುತ್ತದೆ. ವೃತ್ತಿಪರರಲ್ಲಿ ಉತ್ಸಾಹ ಮತ್ತು ಜವಾಬ್ದಾರಿಯುತ ನಡವಳಿಕೆಗಾಗಿ ಸಂಖ್ಯೆ 4 ಅಗತ್ಯವಿದೆ.
3/ 9
ವೈದ್ಯರು ದಿನವಿಡೀ ಉತ್ಸಾಹದಿಂದ ಇರುವುದರೊಂದಿಗೆ ಜವಾಬ್ದಾರರಾಗಿರಬೇಕು, ಮನುಷ್ಯರ ಜೀವನವು ಅವರ ಕೈಯಲ್ಲಿರುತ್ತದೆ. ಸಂಖ್ಯೆ 6 ಮತ್ತೆ ಜವಾಬ್ದಾರಿ ಚಿಕಿತ್ಸೆ ಮತ್ತು ಯಶಸ್ಸನ್ನು ಸಾಧಿಸುವ ಸಂಖ್ಯೆ.
4/ 9
ವೈದ್ಯರು ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೆ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ರೋಗಿಯು ಸುರಕ್ಷಿತವಾಗಿರಬೇಕು. ಅಲ್ಲದೇ ಅವರು ತಾವು ಸುರಕ್ಷಿತ ಕೈಯಲ್ಲಿದ್ದೇವೆ, ಯಶಸ್ವಿಯಾದ ಚಿಕಿತ್ಸೆ ಸಿಗುತ್ತದೆ ಎಂಬ ವಿಶ್ವಾಸ ಹೊಂದಿರಬೇಕು. ಇಂತಹ ಸೂಪರ್ ಪವರ್ ಸಂಖ್ಯೆ 6 ರಿಂದ ಮಾತ್ರ ಬರಬಹುದು.
5/ 9
ಸಂಖ್ಯೆ 7 ಇದು ವ್ಯಕ್ತಿಯನ್ನು ವಿಶ್ವಾಸಾರ್ಹರನ್ನಾಗಿಸುತ್ತದೆ. ಇದು ತುಂಬಾ ಅದೃಷ್ಟದ ಸಂಖ್ಯೆ ಮತ್ತು ಯಾವಾಗಲೂ ಹೊಸ ವೈಜ್ಞಾನಿಕ ತಂತ್ರಗಳನ್ನು ಕಲಿಯಲು ಅಬಕಾಶ ನೀಡುತ್ತದೆ. ಜಾಗತೀಕರಣ ಮತ್ತು ವೈದ್ಯಕೀಯ ಪ್ರಗತಿಯೊಂದಿಗೆ ವೈದ್ಯರು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ಕಲಿಯಬೇಕು ಮತ್ತು ನವೀಕರಿಸಬೇಕು ಇದು ಸಂಖ್ಯೆ 7ರಿಂದ ಸಾಧ್ಯ.
6/ 9
7 ವೈಜ್ಞಾನಿಕ ಅಧ್ಯಯನದ ಸಂಖ್ಯೆ, ಈ ಸಂಯೋಜನೆಯ ಸಂಖ್ಯೆ. ನಿಮ್ಮನ್ನು ಅತ್ಯಂತ ಯಶಸ್ವಿ ವೈದ್ಯರನ್ನಾಗಿ ಮಾಡಬಹುದು
7/ 9
ವೈದ್ಯರು ಪರಿಣತಿ ಹೊಂದಲು ಮತ್ತು ಶಸ್ತ್ರಚಿಕಿತ್ಸಕರಾಗಲು ಮುಂದಾದರೆ, 8 ಸಂಖ್ಯೆ ಅಗತ್ಯ. ನೇರ ಅಥವಾ ಪರೋಕ್ಷವಾಗಿ 8 ಅನ್ನು ಹೊಂದಿಲ್ಲವೆಂದಾದರೆ ಮೊಬೈಲ್ ಸಂಖ್ಯೆಯಲ್ಲಿದ್ದರೂ ಆಗುತ್ತದೆ.
8/ 9
ಅದೃಷ್ಟದ ಬಣ್ಣಗಳು ನೀಲಿ ಮತ್ತು ಹಸಿರು| ಅದೃಷ್ಟ ಸಂಖ್ಯೆ 6 ಮತ್ತು 7
9/ 9
ದೇಣಿಗೆ: ಹಸಿರು ಧಾನ್ಯಗಳನ್ನು ದನಗಳಿಗೆ ಅಥವಾ ಬಡವರಿಗೆ ದಾನ ಮಾಡಿ. ಇಲ್ಲವೆಂದಾದರೆ ಸುತ್ತಮುತ್ತಲಿನ ಪರಿಸರದಲ್ಲಿ ಸಾಕಷ್ಟು ಹಸಿರು ಸಸ್ಯಗಳನ್ನು ಇರಿಸಿ ಮತ್ತು ಅವುಗಳಿಗೆ ಯಾವಾಗಲೂ ನೀರು ಹಾಕಿ