ಮನೆಯಲ್ಲಿ ಯಾವುದೇ ಹಬ್ಬ, ಮದುವೆ ಅಥವಾ ಪೂಜೆಗೆ ಅಥವಾ ಮನೆಯ ಅಲಂಕಾರಕ್ಕೆ ಹೂವು ತರುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಚೆಂಡು ಹೂ ಸುಲಭವಾಗಿ ಮತ್ತು ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಚೆಂಡು ಹೂವನ್ನು ದೇವತೆಯನ್ನು ಅಲಂಕರಿಸಲು ಬಳಸಲಾಗುತ್ತದೆ. ಈ ಹೂವಿನ ಮಹತ್ವವನ್ನು ಶಾಸ್ತ್ರಗಳಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಲೇಖನವನ್ನು ಓದಿ.
ಚೆಂಡು ಹೂವಿನ ರಂಗೋಲಿ: ಚೆಂಡು ಹೂವಿನ ರಂಗೋಲಿಯನ್ನು ಮನೆಯ ಮುಖ್ಯ ದ್ವಾರದಲ್ಲಿ ನಿಯಮಿತವಾಗಿ ಇರಿಸಿದರೆ, ವಿಷ್ಣುವು ತುಂಬಾ ಸಂತೋಷಪಡುತ್ತಾನೆ. ಚೆಂಡು ಹೂವಿನಿಂದ ಸಂಪೂರ್ಣ ರಂಗೋಲಿಯನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಚೆಂಡು ಹೂವನ್ನು ಬಣ್ಣದ ರಂಗೋಲಿಯಲ್ಲಿ ಬಳಸಬೇಕು. ವಿಷ್ಣುವಿಗೆ ಚೆಂಡು ಹೂವುಗಳೆಂದರೆ ತುಂಬಾ ಇಷ್ಟ, ಈ ಹೂವನ್ನು ರಂಗೋಲಿಯಲ್ಲಿ ಹಾಕಿದರೆ ಹರಿ ನಿಮ್ಮ ಮನೆಗೆ ಬರುವುದು ಖಂಡಿತ.