Horoscope today, 6 December 2022: ಈ ರಾಶಿಯವರು ಕಡಿಮೆ ಖರ್ಚಿನಲ್ಲಿ ವಾಹನವನ್ನು ಖರೀದಿಸುತ್ತಾರೆ
6/12/2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ತ್ರಯೋದಶಿ ತಿಥಿ ಮಂಗಳವಾರ ಕೃತಿಕಾ ನಕ್ಷತ್ರ ಶಿವ ಯೋಗ ತೈತಿಲ್ಲ ಕರಣ ರಾಹುಕಾಲ 3. 09PM ಇಂದ 4. 34PM ವರೆಗೆ, ಗುಳಿಕಕಾಲ12. 18 PM ಇಂದ 1.34PM ವರೆಗೆ ,ಯಮಗಂಡ ಕಾಲ 9.27AM ಇಂದ 10.53PM ವರೆಗೆ ಸೂರ್ಯೋದಯ 6.37AM ಸೂರ್ಯಾಸ್ತ5 .59PM, ಚಂದ್ರೋದಯ 4.36PM ಚಂದ್ರಾಸ್ತ 5.43AM. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ ನಿಮ್ಮ ಜೀವನಶೈಲಿ ಸುಧಾರಿಸುತ್ತದೆ .ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಹಳೆಯ ಆರೋಗ್ಯದ ತೊಂದರೆಗಳು ದೂರವಾಗುತ್ತದೆ.
2/ 12
ವೃಷಭ ರಾಶಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸ ಆಲೋಚನೆಗಳು ಮನಸ್ಸಿಗೆ ಬರುತ್ತವೆ. ನೀವು ಪ್ರೀತಿ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ.
3/ 12
ಮಿಥುನ ರಾಶಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮನಸ್ಸು ಇರುವುದಿಲ್ಲ. ನಿಮ್ಮ ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುತ್ತೀರಿ.
4/ 12
ಕರ್ಕಾಟಕ ರಾಶಿ ಹೊಸ ಕಾರ್ಯಗಳನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಪ್ರಯಾಣದ ಸಮಯದಲ್ಲಿ ಆಯಾಸ ಅನುಭವಿಸುವಿರಿ.
5/ 12
ಸಿಂಹ ರಾಶಿ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಉತ್ತಮವಾಗಿರುತ್ತದೆ. ಜನರು ನಿಮ್ಮ ಕಲೆಯನ್ನು ಮೆಚ್ಚುತ್ತಾರೆ. ಹೊಸ ವಾಹನ ಖರೀದಿಸಬಹುದು. ಕಡಿಮೆ ಖರ್ಚಿನಲ್ಲಿ ವಾಹನವನ್ನು ಖರೀದಿಸಲು ನಿಮ್ಮ ಭವಿಷ್ಯದಲ್ಲಿದೆ.
6/ 12
ಕನ್ಯಾ ರಾಶಿ ಹೊಸ ರೀತಿಯ ಕೆಲಸ ಮಾಡಲು ಅವಕಾಶ ಇರುತ್ತದೆ. ಇತರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ತುಂಬಾ ಕಾಳಜಿ ವಹಿಸುವಿರಿ.
7/ 12
ತುಲಾ ರಾಶಿ ಮಕ್ಕಳಿಗೆ ಬೇಕಾಗುವ ವಸ್ತುವನ್ನು ಖರೀದಿಸಲು ಮಾರುಕಟ್ಟೆಗೆ ಹೋಗಬೇಕಾಬಹುದು .ಧಾರ್ಮಿಕ ಕಾರ್ಯದಲ್ಲಿ ನಿರತರಾಗುವಿರಿ. ಕಡಿಮೆ ಖರ್ಚಿನಲ್ಲಿ ವಾಹನವನ್ನು ಖರೀದಿಸಲು ನಿಮ್ಮ ಭವಿಷ್ಯದಲ್ಲಿದೆ.
8/ 12
ವೃಶ್ಚಿಕ ರಾಶಿ ಜೀವನ ಸಂಗಾತಿಯ ಬೆಂಬಲ ಸಿಗಲಿದೆ ಹಳೆಯ ಸಮಸ್ಯೆ ಪರಿಹಾರ ಆಗಬಹುದು ,ಕಾನೂನು ವಿಷಯದ ಬಗ್ಗೆ ಚಿಂತೆ ಇರುತ್ತದೆ.
9/ 12
ಧನು ರಾಶಿ ವ್ಯಾಪಾರದ ಪಾಲುದಾರಿಕೆಗೆ ಇಂದು ಶುಭದಿನವಾಗಿದೆ. ಕೆಲಸದಲ್ಲಿ ಸ್ಥಿರತೆ ಇರುತ್ತದೆ ವ್ಯಾಪಾರದ ಲಾಭದಿಂದಾಗಿ ಮನಸ್ಸು ತುಂಬಾ ಸಂತೋಷವಾಗಿರುತ್ತದೆ.
10/ 12
ಮಕರ ರಾಶಿ ಶೇರು ಮಾರುಕಟ್ಟೆಯಲ್ಲಿ ಬಾರಿ ಹೂಡಿಕೆ ಮಾಡುವುದು ಸೂಕ್ತವಲ್ಲ. ದುಷ್ಟ ಜನರು ನಿಮಗೆ ಹಾನಿ ಮಾಡಬಹುದು.
11/ 12
ಕುಂಭ ರಾಶಿ ಹೊಸ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು .ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ.
12/ 12
ಮೀನಾ ರಾಶಿ ಕುಟುಂಬದ ಸದಸ್ಯರ ಆರೋಗ್ಯ ಹದಗೆಡಬಹುದು. ನಂಬಿಕೆ ದ್ರೋಹಿಗಳು ನಿಮ್ಮೊಂದಿಗೆ ಇರುತ್ತಾರೆ ಸಾಲವನ್ನು ತೆಗೆದುಕೊಳ್ಳಬೇಡಿ.