2023 Resolutions: ನಿಮ್ಮ ರಾಶಿ ಪ್ರಕಾರ ಹೊಸವರ್ಷದ ರೆಸಲ್ಯೂಷನ್ ಹೀಗಿದ್ರೆ ಫುಲ್ ಲಾಭವಂತೆ
New Year's Resolutions for 2023: ಹೊಸವರ್ಷ ಎಂದರೆ ಹಲವಾರು ಜನರದ್ದು ಹಲವು ಯೋಜನೆ ಇರುತ್ತದೆ. ಹಾಗೆಯೇ ಈ ಸಮಯದಲ್ಲಿ ರೆಸಲ್ಯೂಷನ್ ಅಂದರೆ ಹೊಸವರ್ಷದಲ್ಲಿ ಯಾವೆಲ್ಲಾ ಬದಲಾವಣೆ ಮಾಡಿಕೊಳ್ಳಲಾಗುವುದು ಎಂಬ ನಿರ್ಧಾರ ಮಾಡಲಾಗುತ್ತದೆ. ಆದರೆ ನಿಮ್ಮ ರಾಶಿಯ ಅನುಗುಣವಾಗಿ ಹೊಸವರ್ಷದ ರೆಸಲ್ಯೂಷನ್ ಹೇಗಿರಬೇಕು ಎಂಬುದು ಇಲ್ಲಿದೆ.
ಮೇಷ: ಮೇಷ ರಾಶಿಯವರು ಈ ವರ್ಷ ಆಧ್ಯಾತ್ಮಿಕವಾಗಿ ಹೆಚ್ಚು ಸಮಯವನ್ನು ಕಳೆಯುವ ನಿರ್ಧಾರ ಮಾಡುವುದು ಬಹಳ ಒಳ್ಳಯೆದು. ಅಲ್ಲದೇ ಸ್ವಲ್ಪ ತಾಳ್ಮೆಯಿಂದ ಈ ವರ್ಷ ವ್ಯವಹಾರ ಮಾಡುವುದು ಹೆಚ್ಚು ಲಾಭ ನೀಡುತ್ತದೆ. ಜೊತೆಗೆ ಸ್ವಲ್ಪ ಟ್ರಿಪ್ ಹೋಗುವ ಪ್ಲ್ಯಾನ್ ಸಹ ಮಾಡಿ.
2/ 12
ವೃಷಭ: ಈ ರಾಶಿಯವರು ಹಣಕಾಸಿಗೆ ಸಂಬಂಧಪಟ್ಟಂತೆ ಯೋಜನೆ ಹಾಕಿಕೊಳ್ಳುವುದು ಅಗತ್ಯವಿದೆ. ನಿಮ್ಮ ಕೆಲಸಗಳನ್ನು ಆರಂಭ ಮಾಡಲು ಹಣದ ಅವಶ್ಯಕತೆ ಇದೆ. ಹಾಗಾಗಿ ಸುಮಾರು 3 ತಿಂಗಳ ಪ್ಲ್ಯಾನ್ ಮಾಡುವುದು ನಿಮಗೆ ಉತ್ತಮ ಎನ್ನಬಹುದು.
3/ 12
ಮಿಥುನ: ಈ ರಾಶಿಯವರು ಯಾವುದೇ ನಿರ್ಧಾರ ಮಾಡದಿದ್ರೂ ಸಹ ತಾಳ್ಮೆಯಿಂದ ಇರುವ ರೆಸಲ್ಯೂಷನ್ ಮಾಡುವುದು ಮುಖ್ಯ. ಎಷ್ಟು ಶಾಂತಿಯಿಂದ ಇರಲು ಸಾಧ್ಯವೋ ಅಷ್ಟು ಇದ್ದರೆ 2023ರಲ್ಲಿ ಜೀವನ ನೆಮ್ಮದಿಯಾಗಿರುತ್ತದೆ.
4/ 12
ಕಟಕ: ಈ ರಾಶಿಯವರು ಪ್ರವಾಸಕ್ಕೆ ಸಂಬಂಧಪಟ್ಟಂತೆ ಯೋಜನೆ ಹಾಕುವುದು ಉತ್ತಮ ಎನ್ನಬಹುದು. ಅದರಲ್ಲೂ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಮಾಡುವುದರಿಂದ ಜೀವನದಲ್ಲಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
5/ 12
ಸಿಂಹ: ಭಾವನೆಗಳನ್ನು ನಿಯಂತ್ರಣ ಮಾಡುವುದನ್ನ ಈ ವರ್ಷ ನೀವು ಕಲಿಯುವುದು ಬಹಳ ಅಗತ್ಯವಾಗುತ್ತದೆ. ಸಿಂಹ ರಾಶಿಯವರು ಬಹಳ ಸ್ಟ್ರಾಂಗ್ ಎಂಬುದನ್ನ ನೀವು ನಿರೂಪಿಸಬೇಕು. ಹಾಗಾಗಿ ನಿಮಗಾಗಿ ಸಮಯ ಮೀಸಲಿಡುವ ರೆಸಲ್ಯೂಷನ್ ಮಾಡಿ.
6/ 12
ಕನ್ಯಾ: ಸಂಬಂಧಗಳ ವಿಚಾರದಲ್ಲಿ ಬದ್ಧತೆ ನಿಮ್ಮ ಸಮಸ್ಯೆ. ಹಾಗಾಗಿ ಈ ವರ್ಷ ಒಂದು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವ ರೆಸಲ್ಯೂಷನ್ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಬದುಕಿಗೆ ಒಂದು ಅರ್ಥ ಬರುತ್ತದೆ.
7/ 12
ತುಲಾ: ಈ ರಾಶಿಯವರು ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳುವ ರೆಸಲ್ಯೂಷನ್ ಮಾಡುವುದು ನಿಮಗೆ ಉತ್ತಮ. ಸಣ್ಣ ಸಣ್ಣ ತಪ್ಪುಗಳಿಗೆ ಮುನಿಸಿಕೊಳ್ಳುವ ನಿಮ್ಮ ಗುಣ ಬದಲಾಗಬೇಕು. ಇಲ್ಲದಿದ್ದರೆ 2023ರಲ್ಲಿ ಸಮಸ್ಯೆ ಹೆಚ್ಚಾಗಬಹುದು.
8/ 12
ವೃಶ್ಚಿಕ: ಈ ರಾಶಿಯವರು 2023ರಲ್ಲಿ ಹೆಚ್ಚಿನ ಜನರ ಜೊತೆ ಬೆರೆಯುವ ಅಗತ್ಯವಿದೆ. ಹಾಗಾಗಿ ಪಾರ್ಟಿ ಮಾಡುವುದು, ಅನೇಕ ಕಾರ್ಯಕ್ರಮಗಳಿಗೆ ಭೇಟಿ ನೀಡುವುದು ಅಗತ್ಯ. 2022ರಲ್ಲಿ ಯಾರ ಜೊತೆಯೂ ಸೇರದೇ ನೀವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಿದ್ದೀರಿ.
9/ 12
ಧನಸ್ಸು: ನಿಮ್ಮ ವೈಯಕ್ತಿಕ ಬದುಕಿಗೆ ಹೆಚ್ಚು ಸಮಯ ಮೀಸಲಿಡುವುದು ಮುಖ್ಯವಾಗುತ್ತದೆ. ಸಂಗಾತಿಯ ಅಗತ್ಯತೆಯನ್ನು ಪೂರೈಸುವುದು ಈ ಸಮಯದಲ್ಲಿ ಎಲ್ಲದಕ್ಕಿಂತ ಪ್ರಮುಖವಾಗುತ್ತದೆ. ಹಾಗಾಗಿ 2023ರಲ್ಲಿ ಕುಟುಂಬಕ್ಕೆ ಸಮಯ ಮೀಸಲಿಡುವ ನಿರ್ಧಾರ ಮಾಡಿ.
10/ 12
ಮಕರ; ಈ ವರ್ಷ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಫಿಟ್ನೆಸ್ ರೆಸಲ್ಯೂಷನ್ ನಿಮಗೆ 2023ರಲ್ಲಿ ಸಹಾಯ ಮಾಡುತ್ತದೆ. ಕೆಲಸದ ವಿಚಾರದಲ್ಲಿ ಹೆಚ್ಚು ಗಮನ ಕೊಡಬೇಕಾಗುತ್ತದೆ.
11/ 12
ಕುಂಭ: ಹಣಕಾಸಿನ ವಿಚಾರವಾಗಿ ನೀವು ನಿರ್ಧಾರ ಮಾಡುವುದು ಬಹಳ ಅಗತ್ಯ ಎನ್ನಬಹುದು. ಹಣ ಉಳಿಸುವುದು ಹಾಗೂ ವ್ಯರ್ಥ ಮಾಡದಂತೆ ನೋಡಿಕೊಳ್ಳುವುದು ನಿಮ್ಮ ಭವಿಷ್ಯಕ್ಕೆ ಅಗತ್ಯ. ಹಾಗಾಗಿ ಕೆಲ ಯೋಜನೆಗಳನ್ನು ಹಾಕಿಕೊಳ್ಳಿ, ಸಹಾಯವಾಗುತ್ತದೆ.
12/ 12
ಮೀನ: ಮೀನ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಸಹಿಬೇಕು. ಈ ಸಮಯದಲ್ಲಿ ತಾಳ್ಮೆ ಸಹ ನಿಮಗೆ ಮುಖ್ಯವಾಗುತ್ತದೆ. ಇಷ್ಟೇ ಅಲ್ಲದೇ ನಿಮ್ಮ ಜೀವನದಲ್ಲಿ ಸಿಕ್ಕ ಸಿಕ್ಕವರನ್ನು ನಂಬುವುದು ಸಮಸ್ಯೆಗೆ ಕಾರಣವಾಗುತ್ತದೆ