ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹ ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತದೆ. ಇದಕ್ಕೆ ಗ್ರಹಗಳ ರಾಶಿ ಪರಿವರ್ತನೆ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಗ್ರಹಗಳು ತನ್ನ ಚಲನೆಯನ್ನು ಕೂಡಾ ಬದಲಿಸುತ್ತದೆ.
2/ 8
ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ಸಂಕ್ರಮಿಸಿದ್ದಾರೆ. ಇನ್ನು ಮುಂದಿನ ಐದು ತಿಂಗಳವರೆಗೆ ಇದೇ ರಾಶಿಯಲ್ಲಿರಲಿದ್ದಾರೆ. ನಂತರ ಗುರು ಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಗುರುವನ್ನು ಅದೃಷ್ಟ, ಉನ್ನತ ಶಿಕ್ಷಣ, ಸಂಪತ್ತು, ಜ್ಞಾನ, ಗೌರವದ ಅಂಶ ಎಂದು ಕರೆಯಲಾಗುತ್ತದೆ.
3/ 8
ಯಾರ ಜಾತಕದಲ್ಲಿ ಗುರು ದುರ್ಬಲನಾಗಿರುತ್ತಾನೆಯೋ ಆ ವ್ಯಕ್ತಿಯ ಜೀವನದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಗುರು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಪ್ರತೀ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ.
4/ 8
ನಿಮ್ಮ ಜಾತಕದಲ್ಲಿಯು ಗುರು ಬಲವನ್ನು ಒಲಿಸಿಕೊಳ್ಳಲು ಹೀಗೆ ಮಾಡಿ: ವ್ಯಕ್ತಿಯ ಜಾತಕದಲ್ಲಿ ಗುರುವಿನ ಸ್ಥಾನವು ದುರ್ಬಲವಾಗಿದ್ದರೆ, ಬ್ರಹ್ಮ ಮುಹೂರ್ತದಲ್ಲಿ ಎದ್ದು ಮಡಿಯುಟ್ಟು ಗುರು ಮಂತ್ರವಾದ ಓಂ ಬೃಹಸ್ಪತಯೇ ನಮಃ ಜಪಿಸಬೇಕು.
5/ 8
ಯಾವುದಾದರೂ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸೇವೆ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ಜಾತಕದಲ್ಲಿ ಗುರುಬಲ ಚೆನ್ನಾಗಿರುತ್ತದೆ.
6/ 8
ಈ ರೀತಿಯಾಗಿ ಎಲ್ಲಾ ರೀತಿಯ ನಿಯಮಗಳನ್ನು ಫಾಲೋ ಮಾಡುವುದರಿಂದ ಗುರುಬಲವು ವೃದ್ಧಿಸಲು ಸಹಾಕರ ಮಾಡುತ್ತದೆ.
7/ 8
ಯಾವುದೇ ರೀತಿಯ ತಪ್ಪುಗಳನ್ನು / ಪಾಪಗಳನ್ನು ಮಾಡಿದರೆ ಮುಂದಿನ ವರ್ಷ ಮುಗಿಯುವುದರೊಳಗೆ ನೀವು ದೇವರ ಜಪವನ್ನು ಮಾಡಿ ನಾಶ ಮಾಡಿಕೊಳ್ಳಿ.
8/ 8
ಏಕೆಂದರೆ ಇನ್ನು 5 ತಿಂಗಳುಗಳ ಕಾಲ ಗುರುಬಲವು ಜೊತೆಯಲ್ಲೇ ಇರುತ್ತಾನೆ. ಹೀಗಾಗಿ ಯಾರ ಭವಿಷ್ಯ ಯಾವ ರೀತಿಯಾಗಿ ಬದಲಾಗುತ್ತದೆ ಎಂದು ಹೇಳಲು ಅಸಾಧ್ಯ. 2023ರ ನಂತರ ಕಾದಿದೆ ಅದೃಷ್ಟ ಎಂದು ಜ್ಯೋತಿಷ್ಯದ ಪ್ರಕಾರ ತಿಳಿಸಲಾಗಿದೆ.