Loan: ಅಪ್ಪಿ-ತಪ್ಪಿಯೂ ಈ ಒಂದು ದಿನ ಸಾಲ ಮಾಡ್ಬೇಡಿ, ಜನ್ಮದಲ್ಲಿ ತೀರಿಸೋಕೆ ಆಗಲ್ವಂತೆ
Astrology: ಕೆಲವೊಮ್ಮೆ ಕೆಲ ಕಾರಣದಿಂದ ಬೇರೆಯವರಿಂದ ಹಣ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ದಿನಗಳಲ್ಲಿ ನಾವು ಸಾಲ ಪಡೆದರೆ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲವಂತೆ. ಆ ದಿನಗಳು ಯಾವುವು ಎಂಬುದು ಇಲ್ಲಿದೆ.
ಮೊದಲೆಲ್ಲ ಸಾಲ ಎಂದರೆ ಶೂಲ ಎನ್ನುವ ಆಲೋಚನೆ ಜನರಲ್ಲಿ ಇತ್ತು, ಆದರೆ ಈಗ ಕಾಲ ಬದಲಾಗಿದೆ. ತಮ್ಮ ಜೀವನಶೈಲಿಗೆ ಅನುಗುಣವಾಗಿ ಸಾಲ ಮಾಡಲು ಆರಂಭಿಸಿದ್ದಾರೆ. ಜೀವನ ನಡೆಸಲು ಸಾಲು ಅಗತ್ಯ ಎನ್ನುವಂತಾಗಿದೆ.
2/ 8
ಈಗಂತೂ ಇಎಂಐ, ಕ್ರೆಡಿಟ್ ಕಾರ್ಡ್ ಹೀಗೆ ಸಾಲ ಪಡೆಯಲು ಸೌಲಭ್ಯಗಳು ಹಲವಾರಿದೆ. ಹಾಗಾಗಿ ಯಾವಾಗ ಬೇಕೋ ಆಗ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಸಾಲ ಎಂದಿಗೂ ನೆಮ್ಮದಿ ನೀಡುವುದಿಲ್ಲ. ಅದನ್ನು ತೀರಿಸುವ ತನಕ ನಿದ್ದೆ ಬರುವುದಿಲ್ಲ
3/ 8
ಅಲ್ಲದೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಲ ತಪಡೆಯಲು ಸಹ ಒಂದು ದಿನ ಹಾಗೂ ಸಮಯವಿದೆ. ಸರಿಯಾದ ಸಮಯದಲ್ಲಿ ಸಾಲ ಪಡೆಯದಿದ್ದರೆ, ಅದನ್ನು ಮರಳಿ ಕೊಡುವುದು ಬಹಳ ಕಷ್ಟವಾಗುತ್ತದೆ. ಬಹಳಷ್ಟು ವರ್ಷಗಳ ಕಾಲ ಈ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ.
4/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ, ಬುಧವಾರ, ಶನಿವಾರ ಸಾಲ ಮಾಡಿದರೆ ನಿಮ್ಮ ಸಾಲ ಎಂದಿಗೂ ಮುಗಿಯುವುದಿಲ್ಲವಂತೆ. ಹಾಗಾಗಿ ಈ 3 ದಿನಗಳ ಕಾಲ ಅಪ್ಪಿ ತಪ್ಪಿ ಸಾಲ ಮಾಡಲು ಹೋಗಬೇಡಿ. ಅಲ್ಲದೇ ದಿನ ಮಾತ್ರ ಅಲ್ಲ ನಕ್ಷತ್ರಗಳು ಸಹ ಸಾಲ ಪಡೆಯುವಾಗ ಮುಖ್ಯವಾಗುತ್ತದೆ.
5/ 8
ಉತ್ತರಫಾಲ್ಗುಣಿ, ಹಸ್ತ, ಮೂಲ, ಅದ್ರ, ಜ್ಯೇಷ್ಠ, ವಿಶಾಖ, ರೋಹಿಣಿ , ಕೃತಿಕಾ, ಉತ್ತರಾಷಾಢ, ಉತ್ತರ ಭಾದ್ರಪದ, ಇಷ್ಟು ನಕ್ಷತ್ರಗಳು ಸಾಲ ಪಡೆಯಲು ಸೂಕ್ತವಲ್ಲ ಎನ್ನಲಾಗುತ್ತದೆ. ಹಾಗಾಗಿ ಈ ನಕ್ಷತ್ರ ಇದ್ದ ದಿನ ಸಹ ನೀವು ಸಾಲ ಮಾಡಿದರೆ ತೀರಿಸಲು ಸಾಧ್ಯವಾಗುವುದಿಲ್ಲವಂತೆ.
6/ 8
ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಲ ಪಡೆಯಲು ಒಳ್ಳೆಯ ದಿನ ಸಹ ಇದೆ. ನೀವು ಅನಿವಾರ್ಯವಿದ್ದರೆ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರದಂದು ಹಣ ಪಡೆಯಬಹುದು. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.
7/ 8
ಅಲ್ಲದೇ, ನಕ್ಷತ್ರದ ವಿಚಾರಕ್ಕೆ ಬಂದರೆ ಶತಭಿಷ, ಸ್ವಾತಿ, ಧನಿಷ್ಠ, ಮೃಗಶಿರ ಪುನರ್ವಸು, ರೇವತಿ, ಚಿತ್ರ, ಅನುರಾಧ, ಅಶ್ವಿನಿ ಮತ್ತು ಪುಷ್ಯ ನಕ್ಷತ್ರದ ಸಮಯದಲ್ಲಿ ನೀವು ಯಾವುದೇ ಭಯವಿಲ್ಲದೇ ಸಾಲ ಪಡೆಯಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)