God Idol: ದೇವರ ಕೋಣೆಯಲ್ಲಿ ಅಪ್ಪಿ-ತಪ್ಪಿ ಈ ವಿಗ್ರಹಗಳನ್ನು ಇಡಬೇಡಿ, ಕಷ್ಟ ತಪ್ಪಿದ್ದಲ್ಲ
Vastu Tips: ನಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಸಹ ವಾಸ್ತು ಪ್ರಕಾರವಾಗಿ ಇರಬೇಕು, ಇಲ್ಲದಿದ್ದರೆ ಸಮಸ್ಯೆಗಳು ಬರಬಹುದು. ಹಾಗೆಯೇ ದೇವರ ವಿಚಾರದಲ್ಲಿ ಸಹ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಮನೆಯಲ್ಲಿ ಕೆಲ ದೇವರ ವಿಗ್ರಹವನ್ನು ಇಟ್ಟುಕೊಳ್ಳಬಾರದು. ಮನೆಯಲ್ಲಿ ಯಾವ ರೀತಿ ವಿಗ್ರಹ ಇರಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ದೇವರ ಕೋಣೆ ಇಲ್ಲದೇ ಯಾವುದೇ ಮನೆ ಇರುವುದಿಲ್ಲ. ಹಿಂದೂ ಸಂಪ್ರದಾಯದಲ್ಲಿ ದೇವರ ಕೋಣೆ ಹಾಗೂ ವಿಗ್ರಹಕ್ಕೆ ಬಹಳ ಮಹತ್ವವಿದೆ. ಹಾಗಾಗಿ ಯಾವ ದೇವರ ವಿಗ್ರಹ ಇಟ್ಟು ಪೂಜೆ ಮಾಡುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ.
2/ 8
ನಾವು ನಮ್ಮ ದೇವರ ಮನೆಯಲ್ಲಿ ಇಷ್ಟದೇವರ ವಿಗ್ರಹ ಹಾಗೂ ಮನೆ ದೇವರ ವಿಗ್ರಹ ಇಟ್ಟುಕೊಳ್ಳುತ್ತೇವೆ. ಆದರೆ ಇದನ್ನು ಖರೀದಿ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪು ಮಾಡುವುದರಿಂದ ಆರ್ಥಿಕವಾಗಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆ ಬರುತ್ತದೆ.
3/ 8
ನಾವು ದೇವರ ವಿಗ್ರಹವನ್ನು ಪೂಜೆ ಮಾಡುವ ಮೊದಲು ಯಾವ ಮೂರ್ತಿ ಪೂಜೆ ಮಾಡಬೇಕು ಹಾಗೂ ಯಾವುದನ್ನ ಮಾಡಬಾರದು ಎಂಬುದನ್ನ ತಿಳಿದುಕೊಂಡಿರಬೇಕು. ಆಗ ಮಾತ್ರ ನಮ್ಮ ಜೀವನಕ್ಕೆ ಪೂಜೆಯ ಫಲ ಸಿಗುತ್ತದೆ ಎನ್ನಲಾಗುತ್ತದೆ
4/ 8
ಯಾವುದೇ ಕಾರಣಕ್ಕೂ ನೀವು ಕಬ್ಬಿಣ , ಅಲ್ಯೂಮಿನಿಯಂ, ಉಕ್ಕಿನ ಮೂರ್ತಿಗಳನ್ನು ಪೂಜೆ ಮಾಡಬಾರದು. ದೇವರ ಮನೆಯಲ್ಲಿ ಇವುಗಳನ್ನು ಇಡುವುದು ಅಶುಭದ ಸಂಕೇತ ಎನ್ನಲಾಗುತ್ತದೆ. ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯಬಹುದು ಎನ್ನಲಾಗುತ್ತದೆ.
5/ 8
ವಿಗ್ರಹದ ಲೋಹ ಮಾತ್ರ ಅಲ್ಲ ಅದರ ಎತ್ತರ ಕೂಡ ಮುಖ್ಯವಾಗುತ್ತದೆ. 9 ಅಡಿಗಿಂತ ಹೆಚ್ಚಿನ ಎತ್ತರದ ದೇವರ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಮನೆಯಲ್ಲಿ ಚಿಕ್ಕ ವಿಗ್ರಹ ಇದ್ದರೆ ಮಾತ್ರ ಹೆಚ್ಚು ಪ್ರಯೋಜನ ಎನ್ನುವ ನಂಬಿಕೆ ಇದೆ.
6/ 8
ಬೆಳ್ಳಿ ವಿಗ್ರಹ: ದೇವರ ಮನೆಯಲ್ಲಿ ಬೆಳ್ಳಿಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ನೀವು ಮನೆಯಲ್ಲಿ ಬೆಳ್ಳಿ ವಿಗ್ರಹ ಇಡಬಹುದು ಅದರ ಜೊತೆಗೆ ತಾಮ್ರ ಮತ್ತು ಹಿತ್ತಾಳೆಯ ವಿಗ್ರಹಗಳನ್ನು ಸಹ ಇಟ್ಟುಕೊಳ್ಳಬಹುದು.
7/ 8
ಬೆಳ್ಳಿ ಮಾತ್ರವಲ್ಲದೇ ಚಿನ್ನದ ವಿಗ್ರಹವನ್ನು ಸಹ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದು ಮಂಗಳಕರ ಎನ್ನಲಾಗುತ್ತದೆ. ಈ ರೀತಿ ದೇವರ ವಿಗ್ರಹದ ನಿಯಮಗಳನ್ನು ಫಾಲೋ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)