Palmistry: ಈ ವಸ್ತುಗಳನ್ನು ಕೊಡುವಾಗ ಅಪ್ಪಿ-ತಪ್ಪಿಯೂ ಅಂಗೈ ಮೇಲಿಡಬೇಡಿ!
Astrological Tips: ಭಾರತೀಯ ಜೀವನಶೈಲಿಯಲ್ಲಿ, ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲವು ಕೆಲಸಗಳು ಜ್ಯೋತಿಷ್ಯದ ಪ್ರಕಾರ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲಿ ಒಂದು ಅಂಗೈನಲ್ಲಿ ಕೆಲ ವಸ್ತುಗಳನ್ನು ಇತರರಿಗೆ ನೀಡುವುದು. ಯಾವ ವಸ್ತುಗಳನ್ನು ನೀಡಬಾರದು ಎಂಬುದು ಇಲ್ಲಿದೆ.
ನಾವು ಕೆಲವೊಂದು ಕೆಲಸಗಳನ್ನು ನಮಗೆ ಗೊತ್ತಿಲ್ಲದಂತೆ ತಪ್ಪಾಗಿ ಮಾಡಿರುತ್ತೇವೆ. ನಮ್ಮ ಪ್ರಕಾರ ಆ ಕೆಲಸದಲ್ಲಿ ಯಾವುದೇ ತಪ್ಪು ಇರುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ ಅದು ನಮ್ಮ ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿ ಹಾಳು ಮಾಡುತ್ತದೆ.
2/ 8
ನೀವು ಗಮನಿಸಿರಬಹುದು ನಾವು ಯಾವುದಾದರೂ ವಸ್ತುವನ್ನು ಬೇರೆಯವರಿಗೆ ಕೊಡುವಾಗ ಅಂಗೈನಲ್ಲಿ ಇಡಬಾರದು ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದೆ ಸಹ ಹಲವು ಅರ್ಥಗಳಿದೆ.
3/ 8
ನಾವು ಅಂಗೈನಲ್ಲಿ ಈ ಕೆಳಗಿನ ವಸ್ತುಗಳನ್ನು ಕೊಡುವುದು ಲಕ್ಷ್ಮೀ ಕೋಪಗೊಳ್ಳಲು ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
4/ 8
ಉಪ್ಪು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಯಾರಿಗಾದರೂ ಉಪ್ಪನ್ನು ಕೊಡುವಾಗ ಪ್ಲೇಟ್ ಅಥವಾ ಬಟ್ಟಲಿನಲ್ಲಿ ಕೊಡಬೇಕು. ನಾವು ಉಪ್ಪನ್ನು ಯಾರ ಕೈಗೂ ಕೊಡಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಪ್ಪನ್ನು ನೇರವಾಗಿ ಇನ್ನೊಬ್ಬರ ಕೈಗೆ ಕೊಟ್ಟರೆ ಜಗಳವಾಗುತ್ತದೆ ಎನ್ನಲಾಗುತ್ತದೆ.
5/ 8
ಮೆಣಸಿನಕಾಯಿ ಮೆಣಸಿನಕಾಯಿಯನ್ನು ನಾವು ಸಾಮಾನ್ಯವಾಗಿ ಬೇರೆಯವರ ಅಂಗೈಗೆ ಕೊಡುತ್ತೇವೆ. ಆದರೆ ಇದು ತಪ್ಪು. ಮೆಣಸಿನಕಾಯಿಯನ್ನು ಸಹ ಕೈನಲ್ಲಿ ಕೊಡುವುದರಿಂದ ಜಗಳ ಉಂಟಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
6/ 8
ನೀರು ನಾವು ನೀರನ್ನು ಯಾವಾಗಲೂ ಲೋಟದಲ್ಲಿಯೇ ಕೊಡುವುದು, ಆದರೆ ಕೆಲವೊಂದು ಬಾರಿ ಬೊಗಸೆಯಲ್ಲಿ ನೀರನ್ನು ಕೊಡುತ್ತೇವೆ. ಆದರೆ ಇದು ಒಳ್ಳೆಯದಲ್ಲ. ಕೈನಲ್ಲಿ ನೀರು ಕುಡಿಯುವುದರಿಂದ ಸಂಪತ್ತು ನಷ್ಟವಾಗುತ್ತದೆ. ಬಡತಕ್ಕೆ ಕಾರಣವಾಗುತ್ತದೆ.
7/ 8
ರೊಟ್ಟಿ ರೊಟ್ಟಿ ಮತ್ತು ಚಪಾತಿಯನ್ನು ನಾವು ಅರ್ಜೆಂಟ್ನಲ್ಲಿದ್ಧಾಗ ಕೈಗೆ ಕೊಡುತ್ತೇವೆ. ಅದನ್ನು ತಟ್ಟೆಯಲ್ಲಿ ಇಟ್ಟುಕೊಂಡು ತಿನ್ನಬೇಕು. ಅಪ್ಪಿ-ತಪ್ಪಿ ಕೈನಲ್ಲಿ ತಿನ್ನಬಾರದು. ಇದರಿಂದ ಮನೆಯರಿಂದ ಸಿಗುವ ಆಶೀರ್ವಾದ ಸಿಗುವುದಿಲ್ಲ ಎನ್ನಲಾಗುತ್ತದೆ.
8/ 8
ಟವೆಲ್ ಮತ್ತು ಕರ್ಚೀಫ್ ಎಲ್ಲರ ಮನೆಯಲ್ಲಿ ಟವೆಲ್ ಮತ್ತು ಕರ್ಚೀಫ್ಗಳನ್ನು ಕೈನಲ್ಲಿಯೇ ಕೊಡುವುದು ವಾಡಿಕೆ. ಆದರೆ ಇದು ತಪ್ಪು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಕೈಗೆ ಕರ್ಚೀಫ್ ಕೊಡುವುದರಿಂದ ಹಣ ಖಾಲಿ ಆಗುತ್ತದೆ ಎನ್ನುವ ನಂಬಿಕೆ ಇದೆ.