Hanuman Chalisa: ಹನುಮಾನ್ ಚಾಲೀಸ್ ಓದುವಾಗ ಈ ತಪ್ಪು ಮಾಡಲೇಬೇಡಿ
Hanuman Chalisa: ಹನುಮಾನ್ ಚಾಲೀಸ್ ಎಷ್ಟು ಶಕ್ತಿಶಾಲಿ ಎಂಬುದರ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಇದನ್ನು ಪ್ರತಿದಿನ ಪಠಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇದನ್ನು ಓದುವಾಗ ಮಾಡುವ ತಪ್ಪು ಹನುಮಂತನ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತದೆ. ಆ ತಪ್ಪುಗಳು ಯಾವುವು ಎಂಬುದು ಇಲ್ಲಿದೆ.
ಹನುಮಂತನ ಆರಾಧನೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಹಲವಾರು ಜನ ಪ್ರತಿದಿನ ಹನುಮಾನ್ ಚಾಲೀಸ್ ಪಠಣೆ ಮಾಡುತ್ತಾರೆ. ಆದರೆ ಅದೆಷ್ಟೇ ಮಾಡಿದರೂ ಜೀವನದಲ್ಲಿ ಬದಲಾವಣೆ ಆಗುವುದಿಲ್ಲ. ಅದಕ್ಕೆ ಕಾರಣ ಅವರು ಮಾಡುವ ಈ ತಪ್ಪುಗಳು.
2/ 8
ಮಧ್ಯದಿಂದ ಓದಬಾರದು: ಯಾವುದೇ ಕಾರಣಕ್ಕೂ ಹನುಮಾನ್ ಚಾಲೀಸವನ್ನು ಮಧ್ಯ ಭಾಗದಿಂದ ಓದಬಾರದು. ಬೇರೆಯವರು ಓದುವಾಗ ಅರ್ಧದಲ್ಲಿ ಸೇರಿಕೊಳ್ಳುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.
3/ 8
ಅನೈತಿಕ ಸಂಬಂಧ ಇರಬಾರದು: ಹನುಮಾನ್ ಚಾಲೀಸವನ್ನು ನೀವು ಪ್ರತಿದಿನ ಪಠಣೆ ಮಾಡುವವರಾಗಿದ್ದರೆ ನೀವು ಅನೈತಿಕ ಸಂಬಂಧ ಹೊಂದಿರಬಾರದು. ಸಂಗಾತಿಯನ್ನು ಬಿಟ್ಟು ಇತರರ ಜೊತೆ ಸಂಬಂಧ ಹೊಂದಿದ್ದರೆ ನಿಮಗೆ ಚಾಲೀಸ ಪಠಣೆಯ ಫಲ ಸಿಗುವುದಿಲ್ಲ.
4/ 8
ಮನಸ್ಸು ಸ್ವಚ್ಛವಾಗಿರಬೇಕು: ಹನುಮಾನ್ ಚಾಲೀಸ್ ಪಠಣೆ ಮಾಡುವಾಗ ನಮ್ಮ ಮನಸ್ಸು ಸ್ವಚ್ಛವಾಗಿರಬೇಕು. ಯಾವುದೇ ಕಾರಣಕ್ಕೂ ತಲೆಯಲ್ಲಿ ಕೆಟ್ಟ ಆಲೋಚನೆಗಳು ಬರಬಾರದು. ಆಗ ಮಾತ್ರ ನಿಮ್ಮ ಇಷ್ಟಾರ್ಥ ಈಡೇರುತ್ತದೆ.
5/ 8
ಆಹಾರದ ಬಗ್ಗೆ ಇರಲಿ ಎಚ್ಚರ: ಹನುಮಾನ್ ಚಾಲೀಸ್ ಪಠಣೆ ಮಾಡುವಾಗ ಆಹಾರದ ಬಗ್ಗೆ ಗಮನ ಇಟ್ಟುಕೊಳ್ಳಬೇಕು. ಮದ್ಯಪಾನ ಮಾಡುವುದು ಸೇರಿದಂತೆ ತಾಮಸಿಕ ಆಹಾರಗಳನ್ನು ಸೇವನೆ ಮಾಡಬಾರದು.
6/ 8
ಬಡವರಿಗೆ ಹಿಂಸೆ ಮಾಡಬಾರದು: ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ನೀವು ಬಡವರಿಗೆ ಹಾಗೂ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಬಡವರಿಗೆ ಸಹಾಯ ಮಾಡುವುದು ಉತ್ತಮ.
7/ 8
ಕೆಟ್ಟ ಕೆಲಸ ಮಾಡಬೇಡಿ: ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಬೇರೆಯವರಿಗೆ ಕೆಟ್ಟದ್ದಾಗಲಿ ಎಂದು ಆಲೋಚನೆ ಮಾಡಬಾರದು. ಬೇರೆಯವರಿಗೆ ಸಹಾಯ ಮಾಡಬೇಕು. ಈ ಸಮಯದಲ್ಲಿ ದಾನ-ಧರ್ಮ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)