Naga Temples: ಭಾರತದಲ್ಲಿ ಖ್ಯಾತಿ ಪಡೆದ ನಾಗ ದೇವಾಲಯಗಳಿವು
ಪೌರಾಣಿಕ ಕಾಲದಿಂದಲೂ ಹಾವುಗಳನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ. ಇದೇ ಉದ್ದೇಶದಿಂದಾಗಿ ನಾಗಗಳಿಗಾಗಿ ಕೆಲವು ದೇವಾಲಯಗಳು ಮೀಸಲಾಗಿದೆ. ಅದರಲ್ಲೂ ನಾಗ ದೋಷ ಸೇರಿದಂತೆ ಹಲವು ದೋಷಗಳ ಪರಿಹಾರಕ್ಕೆ ಈ ದೇಗುಲಗಳು ಹೆಸರಾಗಿದೆ. ಭಾರತದಲ್ಲಿ ಅಂತಹ ಖ್ಯಾತಿ ಪಡೆದ ನಾಗ ದೇವಾಲಯಗಳಿವು
ಕುಕ್ಕೆ ಸುಬ್ರಹ್ಮಣ್ಯ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನೆಲೆಸಿರುವ ಈ ಕ್ಷೇತ್ರ ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದು. ಕುಮಾರ ಪರ್ವತದ ತಪ್ಪಲಿನಲ್ಲಿ, ಕುಮಾರಧಾರ ನದಿಯ ದಡದಲ್ಲಿ ಇರುವ ಈ ದೇವಾಲದಯಲ್ಲಿ ವಾಸುಕಿ ಮತ್ತು ಶೇಷನಾಗನನ್ನು ಪೂಜಿಸಲಾಗುತ್ತದೆ.
2/ 8
ಬೆಂಗಳೂರಿನಿಂದ 60 ಕಿಮೀ ದೂರವಿರುವ ಈ ಘಾಟಿ ಸುಬ್ರಹ್ಮಣ್ಯ ದೇವಾಲಯ ಕೂಡ ಹೆಚ್ಚು ಜನಪ್ರಿಯವಾಗಿರುವ ದೇವಾಲಯ. ಕಾರ್ತಿಕೇಯನನ್ನು ನಾಗರೂಪದಲ್ಲು ಆರಾಧಿಸಲಾಗುತ್ತದೆ
3/ 8
ಕೇರಳದ ಅಲಪ್ಪುಡದಲ್ಲಿ ನಾಗರಾಜನಿಗಾಗಿ ಅರ್ಪಿತವಾಗಿರುವ ದೇವಾಲಯ ಈ ಮನ್ನರ್ಸಲ ದೇವಾಲಯ. ಇಲ್ಲಿ 30 ಸಾವಿರಕ್ಕೂ ಹೆಚ್ಚು ನಾಗ ಕಲ್ಲುಗಳನ್ನು ಕಾಣಬಹುದು. ಮದುವೆಯಾದ ಹೊಸ ದಂಪತಿಗಳು ಇಲ್ಲಿ ಬಂದು ಸೇವೆ ಸಲ್ಲಿಸುವ ಪದ್ಧತಿ ಇದೆ. ಈ ಮೂಲಕ ಅವರು ಮಗುವಿನ ಆಶೀರ್ವಾದ ಪಡೆಯುತ್ತಾರೆ ಎನ್ನಲಾಗಿದೆ.
4/ 8
ತಮಿಳುನಾಡಿನ ನಾಗರಕೊಲ್ಲಿಯ ನಾಗರಾಜ ದೇವಾಲಯಗ ತಮಿಳುನಾಡಿನಲ್ಲಿ ಪ್ರಖ್ಯಾತಿ ಹೆಸರು ಪಡೆದಿದೆ, ಈ ದೇವಾಲಯದಲ್ಲಿ ವಾಸುಕಿ ಅಂದರೆ ಕೃಷ್ಣನನ್ನು ನಾಗರಾಜನ ರೂಪದಲ್ಲಿ ಪೂಜಿಸಲಾಗುವುದು
5/ 8
ಗುಜರಾತ್ನ ಭುಜ್ನಲ್ಲಿರುವ ಈ ದೇವಸ್ಥಾನ ಕೂಡ ನಾಗ ದೇವರಿಗೆ ಹೆಸರಾಗಿದೆ, ನಾಗರ ಕೊನೆಯ ಸಾಮ್ರಾಜ್ಯವೇ ಈ ಭುಜಂಗ್ ಕೋಟೆ ಎನ್ನಲಾಗಿದೆ. ಇಲ್ಲಿ ಕೊನೆಯಾದಾಗಿ ಆಳಿದ ಭುಜಂಗ್ ಮನೆತನದ ನೆನಪಿನಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. ನಾಗ ಪಂಚಮಿಯಂದು ಇಲ್ಲಿ ಜಾತ್ರೆ ಆಚರಿಸಲಾಗುವುದು
6/ 8
ತಮಿಳುನಾಡಿನ ತಿರುರನಾಗೇಶ್ವರಂ ನ ನಾಗನಂತಸ್ವಾಮಿ ದೇವಾಲಯ ಕೂಡ ಪ್ರಖ್ಯಾತಿ ಪಡೆದ ದೇಗುಲವಾಗಿದೆ. ಇಲ್ಲಿ ಶಿವನನ್ನು ನಾಗೇಶ್ವರನ ರೂಪದಲ್ಲಿ ಆರಾಧಿಸಲಾಗುವುದು
7/ 8
ತಮಿಳುನಾಡಿನ ನಾಗಪಣ್ಣಂನ ಕಾಯರೊಹನಸ್ವಾಮಿ ದೇವಾಲಯ ಕೂಡ ಖ್ಯಾತಿ ಪಡೆದ ಸ್ಥಳವಾಗಿದೆ. ಇಲ್ಲಿ ಕೂಡ ಶಿವನ ಸ್ವರೂಪದಲ್ಲಿ ನಾಗ ದೇವರನ್ನು ಪೂಜಿಸಲಾಗುವುದು
8/ 8
ಹಾವಿನ ರಾಜನಾಗಿದ್ದ ಶೇಷನಾಗ ಪಹಲ್ಗಾಂ ಬಳಿ ಒಂದು ಸರೋವರದ ರಚನೆ ಮಾಡಿದರು. ಶೇಷನಾಗ ಇನ್ನೂ ಇಲ್ಲಿ ವಾಸಿಸುತ್ತಿದ್ದಾರೆಂದು ನಂಬಲಾಗಿದೆ ಆದ್ದರಿಂದ ಸರ್ಪ ದೇವರಿಗೆ ಸಮರ್ಪಿತವಾದ ದೇವಸ್ಥಾನವನ್ನು ಅದರ ದಡದಲ್ಲಿ ನಿರ್ಮಿಸಲಾಗಿದೆ. ಅಮರನಾಥ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳು ಈ ಸರೋವರದ ಬಳಿ ಭೇಟಿ ನೀಡುತ್ತಾರೆ ಮತ್ತು ಶೇಷನಾಗನ್ನು ಪೂಜಿಸುತ್ತಾರೆ.