ಮೇಷ: ಈ ತಿಂಗಳು ಮೇಷ ರಾಶಿಯಲ್ಲಿ ನಾಲ್ಕು ಪ್ರಮುಖ ಗ್ರಹಗಳ ಸಂಯೋಗ ಇರಲಿದೆ. ಆದ್ದರಿಂದ, ಈ ರಾಶಿಯ ಜನರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಬಾಕಿ ಉಳಿದಿರುವ ಬಹುತೇಕ ಕೆಲಸಗಳು ಪೂರ್ಣಗೊಳ್ಳಲಿವೆ. ನಿರೀಕ್ಷೆಯಂತೆ ಆದಾಯ ಹೆಚ್ಚಾಗಲಿದೆ. ಮನೆ ಅಥವಾ ನಿವೇಶನ ಖರೀದಿಗೆ ಪ್ರಯತ್ನಗಳು ನಡೆಯುತ್ತವೆ. ಅನಗತ್ಯ ಸಂಪರ್ಕಗಳನ್ನು ತಪ್ಪಿಸಿ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ.
ತುಲಾ: 7 ನೇ ಮನೆಯಲ್ಲಿ ನಾಲ್ಕು ಲಾಭದಾಯಕ ಗ್ರಹಗಳ ಸಂಯೋಗದ ಕಾರಣದಿಂದ , ಈ ರಾಶಿಯವರು ಉದ್ಯೋಗ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಬಹಳ ಲಾಭ ಪಡೆಯಲಿದ್ದಾರೆ. ಅವಿವಾಹಿತರಿಗೆ ವಿವಾಹ ಪ್ರಯತ್ನಗಳು ಫಲ ನೀಡಲಿದೆ. ಆದಾಯ ಸ್ಥಿರವಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಅನಗತ್ಯ ಸಂಪರ್ಕಗಳನ್ನು ತಪ್ಪಿಸಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಕೆಲವು ಸಹೋದ್ಯೋಗಿಗಳು ನಿಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಾಧ್ಯತೆ ಇದೆ.
ಕುಂಭ ರಾಶಿ: ಕೆಲ ಗ್ರಹಗಳ ಸಂಚಾರದಿಂದ ಈ ರಾಶಿಯವರಿಗೆ ದೊಡ್ಡ ಲಾಬ ಸಿಗಲಿದೆ. ಇಡೀ ತಿಂಗಳು ಮಾನಸಿಕವಾಗಿ ಶಾಂತವಾಗಿರುತ್ತದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾದರೂ ಲೆಕ್ಕಕ್ಕೆ ಬರುವುದಿಲ್ಲ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಕೆಲ ಸ್ನೇಹಿತರಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ವೈದ್ಯರಿಗೆ ಕೆಲಸದ ಒತ್ತಡ ಜಾಸ್ತಿ ಆಗಲಿದೆ