Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

Monthly Prediction: ಮಾರ್ಚ್ ತಿಂಗಳಲ್ಲಿ ಅನೇಕ ರಾಶಿಗಳ ಜೀವನದಲ್ಲಿ ಸಂತೋಷದಿಂದ ತುಂಬಿರುತ್ತದೆ. ಆದರೆ ಕೆಲವು ಗ್ರಹಗತಿಗಳ ಬದಲಾವಣೆಯಿಂದ ತೊಂದರೆಗಳನ್ನು ಎದುರಿಸಬಹುದು. ವಿಶೇಷವಾಗಿ ಗ್ರಹಗಳ ಸಂಚಾರವನ್ನು ಅವಲಂಬಿಸಿ, ಯಾವ ರಾಶಿಚಕ್ರಗಳು ಯಾವ ಫಲ ಅನುಭವಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

First published:

 • 112

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಮೇಷ: ಈ ರಾಶಿಯವರಿಗೆ ಈ ತಿಂಗಳ ಮೊದಲ ಎರಡು ವಾರಗಳು ಬಹಳ ಒಳ್ಳೆಯದಾಗಿರುತ್ತದೆ. ಇದು ಉದ್ಯೋಗ ಮತ್ತು ಹಣಕಾಸಿನ ವಿಷಯದಲ್ಲಿ ಲಾಭ ನೀಡುತ್ತದೆ. ಆದರೆ ಈ ಸಮಯದಲ್ಲಿ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಸ್ವಲ್ಪ ನೆಗ್ಲೆಕ್ಟ್ ಮಾಡಿದರೂ ಸಮಸ್ಯೆ ಗ್ಯಾರಂಟಿ. ಕೆಲಸದಲ್ಲಿ ಹಿರಿಯರು ಹೆಚ್ಚುವರಿ ಜವಾಬ್ದಾರಿಗಳನ್ನು ನೀಡುತ್ತಾರೆ. ಒಂದು ರೀತಿಯಲ್ಲಿ ಅಧಿಕಾರ ಯೋಗದ ಸಾಧ್ಯತೆ ಇದೆ. ಉಳಿದ ಎರಡು ವಾರಗಳಲ್ಲಿ, ಉದ್ಯೋಗದ ವಿಷಯದಲ್ಲಿ ಸುಧಾರಣೆ ಕಂಡುಬರುತ್ತದೆ, ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಏರಿಳಿತ ಆಗಬಹುದು. ಹಣಕಾಸಿನ ವ್ಯವಹಾರದಿಂದ ನಷ್ಟವಾಗುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳು ಸಮಸ್ಯೆಗೆ ಮುಖ್ಯ ಕಾರಣ.

  MORE
  GALLERIES

 • 212

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ವೃಷಭ ರಾಶಿ: ಈ ತಿಂಗಳು ವೃಷಭ ರಾಶಿಯವರು ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಹೋದ್ಯೋಗಿಗಳೂ ಸಹ ನಿಮ್ಮ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ವ್ಯವಹಾರಗಳಲ್ಲಿ ಲಾಭ ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿಯು ಸ್ಥಿರವಾಗಿರುತ್ತದೆ ಆದರೆ ಅನಗತ್ಯ ವೆಚ್ಚಗಳಿಂದ ತೊಂದರೆ ಆಗಬಹುದು. ಮಾರ್ಚ್ 18 ರ ನಂತರ ಉದ್ಯೋಗದಲ್ಲಿ ಬದಲಾವಣೆಗಳ ಸಾಧ್ಯತೆ ಇದೆ. ನಿಮ್ಮ ಆಲೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬಹಳ ದಿನಗಳಿಂದ ಮನದಲ್ಲಿದ್ದ ಆಸೆ ಅನಿರೀಕ್ಷಿತವಾಗಿ ನೆರವೇರುವುದು.

  MORE
  GALLERIES

 • 312

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಮಿಥುನ: ಉದ್ಯೋಗ ಮತ್ತು ಹಣಕಾಸಿನ ವಿಷಯದಲ್ಲಿ ಸ್ಥಿರತೆ ಇರುತ್ತದೆ. ಹೊಸ ಕೆಲಸದ ಆಫರ್ ಬರುತ್ತದೆ. ನಿರುದ್ಯೋಗಿಗಳಿಗೆ ಶುಭ ಸಮಾಚಾರ ಸಿಗಲಿದೆ. ಹೆಚ್ಚಿದ ಒತ್ತಡ ಮತ್ತು ಕೆಲಸದ ಹೊರತಾಗಿಯೂ ನಿಮ್ಮ ಗುರಿ ತಲುಪಬಹುದು. ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಹಠಾತ್ ಆರ್ಥಿಕ ಲಾಭದ ಅವಕಾಶವಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

  MORE
  GALLERIES

 • 412

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಕರ್ಕಾಟಕ: ಆರ್ಥಿಕವಾಗಿ ಹಲವು ರೀತಿಯಲ್ಲಿ ನಿಮಗೆ ಲಾಭ ಆಗಲಿದೆ. . ಸ್ವಂತ ಮನೆ ಕನಸು ನನಸಾಗುವ ಸೂಚನೆಗಳಿವೆ. ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ ಉಳಿತಾಯವನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಾಹನ ಅಪಘಾತಗಳ ಬಗ್ಗೆ ಎಚ್ಚರದಿಂದಿರಿ. ಇತರ ಜನರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ.

  MORE
  GALLERIES

 • 512

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಸಿಂಹ: ಈ ತಿಂಗಳ ಮೊದಲಾರ್ಧದಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ಪೂರ್ಣವಾಗುತ್ತದೆ. ಯಾವುದೇ ಸಮಸ್ಯೆ ಬರುವುದಿಲ್ಲ. ಈ ಸಮಯದಲ್ಲಿ ಹೆಚ್ಚಿನ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಆದಾಯದಲ್ಲಿ ನಿರೀಕ್ಷಿತ ಹೆಚ್ಚಳ ಆಗಲಿದೆ. ಆದರೆ ನಂತರ ಸ್ವಲ್ಪ ಸಮಯ ಸಮಸ್ಯೆಗಳು ಆಗಬಹುದು. ಸಂಬಂಧಿಕರ ಜೊತೆ ಜಗಳ ಆಗಬಹುದು. ಆರೋಗ್ಯದಲ್ಲಿ ಸಮಸ್ಯೆ ಆಗಲಿದೆ. ದುಂದುವೆಚ್ಚವನ್ನು ತಪ್ಪಿಸಿ.

  MORE
  GALLERIES

 • 612

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಕನ್ಯಾ ರಾಶಿ: ವ್ಯಾಪಾರದಲ್ಲಿ ಭಾರಿ ಲಾಭವಾಗಲಿದೆ. ಹೂಡಿಕೆ ನಿಮಗೆ ದೊಡ್ಡ ಲಾಭ ನೀಡಲಿದೆ, ವಿದೇಶದಿಂದ ಆಫರ್ಗಳು ಬರುತ್ತವೆ. ನಿರುದ್ಯೋಗಿಗಳಿಗೆ ಉತ್ತಮ ಹುದ್ದೆ ಸಿಗಲಿದೆ. ಉದ್ಯೋಗದಲ್ಲಿ ಕೆಲವು ಒಳ್ಳೆಯ ಬದಲಾವಣೆಗಳು ಆಗಬಹುದು. ಅಧಿಕಾರಿಗಳು ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

  MORE
  GALLERIES

 • 712

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ತುಲಾ: ನಿಮ್ಮ ಆಲೋಚನೆಗಳು ಮತ್ತು ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಯಾರೊಂದಿಗೂ ಅಸಭ್ಯವಾಗಿ ಅಥವಾ ಅನುಚಿತವಾಗಿ ವರ್ತಿಸಬೇಡಿ. ತಾಳ್ಮೆ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುತ್ತದೆ. ಆರ್ಥಿಕ ಲಾಭದ ಅವಕಾಶವಿದೆ. ಅಲ್ಲದೆ ನಿರೀಕ್ಷೆಯಂತೆ ಆದಾಯವೂ ಹೆಚ್ಚಲಿದೆ. ಕೋರ್ಟ್ ಕೇಸ್ ನಿಮ್ಮ ಪರವಾಗಿ ಇತ್ಯರ್ಥವಾಗಲಿದೆ. ರಸ್ತೆ ಅಪಘಾತಗಳ ಸಾಧ್ಯತೆ ಇದೆ.

  MORE
  GALLERIES

 • 812

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ವೃಶ್ಚಿಕ ರಾಶಿ: ನಿಮ್ಮ ಮೌನ ನಿಮಗೆ ಸಹಾಯ ಮಾಡುತ್ತದೆ. ಹಣಕಾಸಿನ ವಿಷಯಗಳು ಲಾಭ ಸಿಗಲಿದೆ. ಸಂಬಂಧಿಕರ ಬಳಿ ಹಣಕಾಸಿನ ನೆರವು ಪಡೆಯಬೇಡಿ. ಉದ್ಯೋಗ ಹಾಗೂ ವ್ಯವಹಾರ ವಿಷಯಗಳಲ್ಲಿ ಸ್ವಂತ ನಿರ್ಧಾರ ಲಾಭ ನೀಡುತ್ತದೆ. ಕೆಲವು ಸಹೋದ್ಯೋಗಿಗಳು ನಿಮ್ಮ ಬಗ್ಗೆ ಕೆಟ್ಟ ಪ್ರಚಾರ ಮಾಡುವ ಸಾಧ್ಯತೆ ಇದೆ. ಆದಾಯದ ಪರಿಸ್ಥಿತಿ ಸ್ಥಿರವಾಗಿರುತ್ತದೆ ಆದರೆ ಅನಗತ್ಯ ವೆಚ್ಚ ಹೆಚ್ಚಾಗುತ್ತದೆ.

  MORE
  GALLERIES

 • 912

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಧನು ರಾಶಿ: ಅನೇಕ ಅಡೆತಡೆಗಳನ್ನು ನಿವಾರಿಸಿ ಉದ್ಯೋಗದಲ್ಲಿ ಒಂದು ಮೆಟ್ಟಿಲು ಏರುವ ಸಮಯ ಇದು. ಅಧಿಕಾರ ಯೋಗದ ಸಂಭವವಿದೆ. ಕೌಟುಂಬಿಕ ವಿಚಾರದಲ್ಲಿ ಸ್ವಲ್ಪ ನೆಮ್ಮದಿ ಇರುತ್ತದೆ. ಸಂಬಂಧಿಕರಿಂದ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಆಗಬಹುದು. ಅನಿರೀಕ್ಷಿತ ಹಣ ನಿಮಗೆ ಸಿಗಲಿದೆ. ಬಾಡಿಗೆ ಮನೆಯಿಂದ ಸ್ವಂತ ಮನೆಗೆ ತೆರಳುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

  MORE
  GALLERIES

 • 1012

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಮಕರ ರಾಶಿ: ಕುಟುಂಬದ ಬಗ್ಗೆ ಕೆಲವು ಉತ್ತಮ ನಿರ್ಧಾರ ತೆಗೆದುಕೊಂಡರೆ ನಿಮಗೆ ಉತ್ತಮ. ಈ ತಿಂಗಳು ಆರ್ಥಿಕವಾಗಿ ಲಾಭ ಸಿಗಲಿದೆ. ಸ್ನೇಹಿತರೊಂದಿಗೆ ಮೋಜು ಮಾಡುವ ಸಮಯ ಇದು. ಹಣಕಾಸಿನ ಸಮಸ್ಯೆಗಳು ಅನಿರೀಕ್ಷಿತವಾಗಿ ಪರಿಹಾರವಾಗುತ್ತದೆ. ಪೋಷಕರಿಂದ ನಿರೀಕ್ಷಿತ ಸಹಾಯ ದೊರೆಯಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಲೇವಾದೇವಿಗಾರರು, ಸರ್ಕಾರಿ ನೌಕರರು, ಮದ್ಯ ಮಾರಾಟಗಾರರಿಗೆ ಸಮಯ ತುಂಬಾ ಒಳ್ಳೆಯದು. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ.

  MORE
  GALLERIES

 • 1112

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಕುಂಭ: ಈ ವಾರ ಆದಾಯ ಸ್ಥಿರವಾಗಿರುತ್ತದೆ. ಆದರೆ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಬೇಕು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ಸ್ನೇಹಿತರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಅವಶ್ಯಕ. ಅಕ್ಕ-ಪಕ್ಕದಲ್ಲಿ ಸ್ವಲ್ಪ ಘರ್ಷಣೆ ಆಗಬಹುದು.

  MORE
  GALLERIES

 • 1212

  Monthly Horoscope: ಮಾರ್ಚ್ ತಿಂಗಳಲ್ಲಿ ಕಾದಿದೆ ಈ ರಾಶಿಯವರಿಗೆ ಹಬ್ಬ, ಜೀವನವೇ ಸಾಕಪ್ಪ ಅನಿಸುತ್ತೆ

  ಮೀನ: ಈ ರಾಶಿಯವರಿಗೆ ಈ ತಿಂಗಳ ಮೊದಲ 2 ವಾರ ಬಹಳ ಒಳ್ಳೆಯದಾಗಿರುತ್ತದೆ. ಅಧಿಕಾರ ಮತ್ತು ಬಡ್ತಿಗೆ ಅವಕಾಶವಿದೆ. ಪ್ರಮುಖ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಹಠಾತ್ ಆರ್ಥಿಕ ಲಾಭ ಆಗಬಹುದು. ಹಿಂದೆ ಮಾಡಿದ ಹಣಕಾಸಿನ ವಹಿವಾಟು ಉತ್ತಮ ಲಾಭವನ್ನು ನೀಡುತ್ತದೆ.ಆದರೆ ಆರೋಗ್ಯದ ಬಗ್ಗೆ ಕಾಳಜಿ ಬಹಳ ಅವಶ್ಯಕ.

  MORE
  GALLERIES