ಕೆಲವರು ಎಷ್ಟು ಸಂಪಾದಿಸಿದರೂ ಮನೆಯಲ್ಲಿ ಹಣವಿರೋದಿಲ್ಲ. ತಿಂಗಳಾಂತ್ಯಕ್ಕೆ ಕೈಚೀಲದಲ್ಲಿ ಒಂದು ರೂಪಾಯಿಯೂ ಉಳಿಯೋದಿಲ್ಲ. ಎಷ್ಟೇ ಮುಂಜಾಗ್ರತೆ ವಹಿಸಿದರೂ ನೀರಿನಂತೆ ಹಣ ಖರ್ಚಾಗುತ್ತದೆ. ಜನರು ಹಣ ಸಂಪಾದಿಸಲು ಕಷ್ಟಪಡುತ್ತಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಕುಂಡಲಿ ದೋಷ ಅಥವಾ ವಾಸ್ತು ದೋಷದಿಂದ ಸಂಭವಿಸಬಹುದು.