ವಿಷ್ಣುವು ಮೋಹಿನಿಯ ರೂಪದಲ್ಲಿ ತನ್ನ ಸೌಂದರ್ಯದಿಂದ ರಾಕ್ಷಸರನ್ನು ನಾಶಪಡಿಸಿ ದೇವತೆಗಳಿಗೆ ಮಾತ್ರ ಅಮೃತವನ್ನು ನೀಡಿ ಕಣ್ಮರೆಯಾದನು. ಈ ಮೋಹಕ ರೂಪವನ್ನು ನೋಡಿದ ಶಿವನ ಮನಸ್ಸು ನಿಜಕ್ಕೂ ರೋಮಾಂಚನಗೊಂಡಿತ್ತು. ಆದರೆ ಅದರ ನಂತರ ಮತ್ತೆ ರಾಕ್ಷಸನೊಬ್ಬನಿಂದ ಮುಕ್ತಿ ಪಡೆಯಲು ವಿಷ್ಣು ಮೋಹಿನಿ ಅವತಾರ ತಾಳುತ್ತಾನೆ. ಆಗ ಹರಿಹರನಿಗೆ ಹುಟ್ಟಿದವನೇ ಅಯ್ಯಪ್ಪಸ್ವಾಮಿ ಎಂದು ಹೇಳಲಾಗುತ್ತದೆ.