Astrological Remedy: ಸ್ನಾನದ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ ದಾರಿದ್ರ್ಯ ಓಡಿ ಹೋಗುತ್ತೆ
Astrological Remedy: ಸ್ನಾನ ಮಾಡುವುದು ನಮ್ಮ ದೇಹವನ್ನು ಶುದ್ಧೀಕರಿಸಲು ಎಂದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಇದು ನಿಮ್ಮ ಮನಸ್ಸನ್ನು ಹಾಗೂ ಬದುಕಿನ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ ಎಂದರೆ ನಂಬುತ್ತೀರಾ? ಹೌದು, ಸ್ನಾನ ಮಾಡುವಾಗ ಕೆಲವೊಂದು ವಸ್ತುಗಳನ್ನು ನೀರಿಗೆ ಹಾಕಿ ಬಳಸುವುದರಿಂದ ದಾರಿದ್ರ್ಯ ಮಾಯವಾಗುತ್ತದೆ.
ಸ್ನಾನ ಮಾಡುವುದರಿಂದ ದೇಹ ಸ್ವಚ್ಛವಾಗುವುದು ಮಾತ್ರವಲ್ಲದೇ ಮನಸ್ಸಿಗೆ ಅದೇನೋ ಒಂಥರ ನೆಮ್ಮದಿ ಸಿಗುತ್ತದೆ. ಜೀವನದಲ್ಲಿರುವ ಒತ್ತಡಗಳೆಲ್ಲಾ ಸ್ವಲ್ಪ ಸಮಯ ಮಾಯವಾಗುತ್ತದೆ. ಆದರೆ ಸ್ನಾನ ಮಾಡುವಾಗ ಕೆಲ ಬದಲಾವಣೆ ಮಾಡಿಕೊಂಡರೆ ಸಮಸ್ಯೆಗಳು ನಿವಾರಣೆಯಾಗಿ, ಜೀವನ ನೆಮ್ಮದಿಯಾಗಿರುತ್ತದೆ.
2/ 8
ಸಾಮಾನ್ಯವಾಗಿ ಸ್ನಾನ ಮಾಡುವಾಗ ನಾವು ನೀರು ಮತ್ತು ಸೋಪನ್ನು ಬಳಕೆ ಮಾಡುತ್ತೇವೆ. ಆದರೆ ಕೆಲವರು ತುಳಸಿ ಎಲೆಯನ್ನು ಸಹ ನೀರಿಗೆ ಹಾಕುತ್ತಾರೆ. ಹಾಗೆಯೇ ನೀವು ಇನ್ನೂ ಕೆಲವೊಂದು ವಸ್ತುಗಳನ್ನು ಸ್ನಾನದ ನೀರಿಗೆ ಹಾಕಿ ಬಳಸುವುದು ದಾರಿದ್ರ್ಯ ಹೋಗಲಾಡಿಸಲು ಸಹಾಯ ಮಾಡುತ್ತದೆ.
3/ 8
ಉಪ್ಪು: ಮನೆಯಲ್ಲಿ ನೆಗೆಟಿವ್ ಎನರ್ಜಿ ಹೋಗಲಾಡಿಸಲು ಉಪ್ಪನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಹಾಗೆಯೇ ಈ ಉಪ್ಪನ್ನ ಸ್ನಾನದ ನೀರಿಗೆ ಹಾಕುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ ಹಾಗೂ ಸಮಸ್ಯೆಗಳು ಸಹ ಬರುವುದಿಲ್ಲ.
4/ 8
ಕಪ್ಪು ಎಳ್ಳು: ಕಪ್ಪು ಎಳ್ಳು ಶನಿದೇವರ ಸಂಕೇತವಾಗಿದೆ. ಇದನ್ನು ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಇದರಿಂದ ಬಡತನ ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ.
5/ 8
ಹಾಲು: ಚರ್ಮದ ಆರೈಕೆಯ ವಿಚಾರಕ್ಕೆ ಬಂದರೆ ಹಾಲಿನ ನೀರಿನಿಂದ ಸ್ನಾನ ಮಾಡಬೇಕು ಎಂಬು ಹೇಳಿರುವುದನ್ನ ಕೇಳಿರುತ್ತೇವೆ. ಇದರಿಂದ ಸಾವಿರಾರು ಲಾಭಗಳಿದೆ. ಆದರೆ ಹಾಲಿನ ಸ್ನಾನದಿಂದ ರೋಗಗಳು ಹತ್ತಿರ ಸುಳಿಯುವುದಿಲ್ಲ ಎನ್ನಲಾಗುತ್ತದೆ.
6/ 8
ಶ್ರೀಗಂಧ: ಶ್ರೀಗಂಧದ ಮಹತ್ವದ ಬಗ್ಗೆ ನಾವು ಯಾರಿಗೂ ಹೆಚ್ಚಾಗಿ ಹೇಳಬೇಕಿಲ್ಲ. ಸ್ವಲ್ಪ ಶ್ರೀಗಂಧದ ಪುಡಿಯನ್ನು ಸ್ನಾನದ ನೀರಿಗೆ ಹಾಕಿ, ಅದನ್ನು ಬಳಸಿ ಸ್ನಾನ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ,
7/ 8
ತುಪ್ಪ: ಭಾರತೀಯ ಪರಂಪರೆಯಲ್ಲಿ ತುಪ್ಪಕ್ಕೆ ಬಹಳ ಪ್ರಮುಖವಾದ ಸ್ಥಾನವಿದೆ. ಅಡುಗೆಯಿಂದ ಪೂಜೆಯವರೆಗೆ ತುಪ್ಪ ಇಲ್ಲದೇ ಆಗುವುದಿಲ್ಲ. ಹಾಗೆಯೇ ಈ ತುಪ್ಪವನ್ನು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ ಬಳಸಿದರೆ ರೋಗಗಳು ಬರುವುದಿಲ್ಲ, ಆರೋಗ್ಯ ಚೆನ್ನಾಗಿರುತ್ತದೆ ಎನ್ನಲಾಗುತ್ತದೆ.
8/ 8
Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ