Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

Mercury Transit 2023: ಪ್ರತಿಯೊಂದು ಗ್ರಹವು ಪ್ರತಿಯೊಂದು ರಾಶಿಯಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದಾಗ ಅಥವಾ ರಾಶಿ ಬದಲಾಯಿಸಿದಾಗ ಅದು ಆಯಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2 ದಿನದಲ್ಲಿ ಬುಧನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಯಾವೆಲ್ಲಾ ಬದಲಾವಣೆ ಆಗಲಿದೆ ಎಂಬುದು ಇಲ್ಲಿದೆ.

First published:

  • 19

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕೆಲ ಸಮಯದ ನಂತರ ರಾಶಿ ಬದಲಾಯಿಸುತ್ತವೆ. ಇದು ಮಾನವ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹಾಗೆಯೇ ಗ್ರಹಗಳ ಚಲನೆಯ ಬದಲಾವಣೆಯು ಕೆಲವರಿಗೆ ಪಾಸಿಟಿವ್ ಮತ್ತು ಕೆಲವರಿಗೆ ನೆಗೆಟಿವ್ ಆಗಿರುತ್ತದೆ.

    MORE
    GALLERIES

  • 29

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಅತ್ಯಂತ ವೇಗವಾಗಿ ಚಲಿಸುವ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಬುಧನು ಶುಭ ಸ್ಥಾನದಲ್ಲಿ ಇರುತ್ತಾನೆಯೋ ಅವರಿಗೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಇನ್ನೇನು 2 ದಿನಗಳಲ್ಲಿ ಅಂದರೆ ಫೆಬ್ರವರಿ 27 ರಂದು, ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಎಂದು ಕರೆಯಲ್ಪಡುವ ಬುಧ ರಾಶಿ ಬದಲಾವಣೆ ಮಾಡುತ್ತದೆ,

    MORE
    GALLERIES

  • 39

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ಫೆಬ್ರವರಿ 27ರ ಸಂಜೆ 04.55ಕ್ಕೆ ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ ನಡೆಯಲಿದೆ. ಸದ್ಯ ಬುಧ ಮಕರ ರಾಶಿಯಲ್ಲಿದ್ದು, ಫೆಬ್ರವರಿ 27 ರ ಸಂಜೆಯಿಂದ ಮಾರ್ಚ್ 16 ರ ಬೆಳಗ್ಗೆಯವರೆಗೆ ಬುಧ ಕುಂಭ ರಾಶಿಯಲ್ಲಿರುತ್ತಾನೆ. ನಂತರ ಮಾರ್ಚ್ 16 ರಂದು ಬೆಳಗ್ಗೆ 10.54 ಕ್ಕೆ ಬುಧ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

    MORE
    GALLERIES

  • 49

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ಫೆಬ್ರವರಿ 27 ರಂದು ಕುಂಭ ರಾಶಿಯಲ್ಲಿ ಬುಧ ಸಂಚಾರದಿಂದಾಗಿ ಸೂರ್ಯನೊಂದಿಗೆ ಶುಭ ಸಂಯೋಗವಿದೆ. ಬುಧಾದಿತ್ಯ ರಾಜಯೋಗದಿಂದಾಗಿ ಕೆಲವು ರಾಶಿಯ ಜನರು ವ್ಯಾಪಾರ, ಉದ್ಯೋಗ ಮತ್ತು ಆದಾಯದಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ.

    MORE
    GALLERIES

  • 59

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ಮೇಷ: ಈ ಮೇಷ ರಾಶಿಯವರಿಗೆ ಬುಧ ಸಂಕ್ರಮಣ ಲಾಭ ನೀಡಲಿದೆ. ಉದ್ಯೋಗಿಗಳ ಸಂಬಳವನ್ನು ಹೆಚ್ಚಾಗುವ ಹೆಚ್ಚಿನ ಸಾಧ್ಯತೆಗಳಿವೆ. ಅವರು ವಿಶೇಷವಾಗಿ ಹಣದ ವಿಚಾರವಾಗಿ ಯಶಸ್ವಿಯಾಗುತ್ತಾರೆ. ನೀವು ಯಾವುದೇ ವಿವಾದದಲ್ಲಿ ಸಿಲುಕಿಕೊಂಡರೆ ಚಿಂತಿಸಬೇಡಿ. ನೀವು ಕೆಲಸದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಬಹುದು.

    MORE
    GALLERIES

  • 69

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ವೃಷಭ ರಾಶಿ: ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ ಈ ರಾಶಿಗೆ ಯಶಸ್ಸನ್ನು ನೀಡುತ್ತದೆ. ವ್ಯವಹಾರದಲ್ಲಿ ಅಗಾಧವಾದ ಯಶಸ್ಸು ಹುಡುಕಿ ಬರಲಿದೆ. ಲಾಭ ಪಡೆಯಲು ಉತ್ತಮ ಅವಕಾಶಗಳು ದೊರೆಯಲಿವೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ.

    MORE
    GALLERIES

  • 79

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ಸಿಂಹ: ವ್ಯಾಪಾರಸ್ಥರಿಗೆ ಇದು ಉತ್ತಮ ಸಮಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವ್ಯಾಪಾರ ವಿಸ್ತರಣೆ ಮಾಡಬಹುದು, ಹೊಸ ಜನರ ಪರಿಚಯ ನಿಮಗೆ ಲಾಭ ನೀಡಲಿದೆ. ಹಣಕಾಸಿನ ವಿಚಾರವಾಗಿ ಚಿಂತೆ ದೂರವಾಗುತ್ತದೆ. ನಿಮ್ಮ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಯೂ ಇದೆ.

    MORE
    GALLERIES

  • 89

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    ತುಲಾ: ತುಲಾ ರಾಶಿಯವರಿಗೆ ಬುಧ ಸಂಕ್ರಮಣದಿಂದ ಆದಾಯ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ವರ್ಷ ಕನಸು ನನಸಾಗುತ್ತದೆ. ಅಲ್ಲದೇ, ಯಶಸ್ಸು ಈ ಸಮಯದಲ್ಲಿ ತುಲಾ ರಾಶಿಯವರನ್ನು ಹುಡುಕಿ ಬರಲಿದೆ.

    MORE
    GALLERIES

  • 99

    Mercury Transit 2023: 2 ದಿನದಲ್ಲಿ ಬದಲಾಗಲಿದೆ ಈ ರಾಶಿಗಳ ಅದೃಷ್ಟ, ಧನಲಾಭ ಫಿಕ್ಸ್

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES