ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

ಇನ್ನು ಮೇಲುಕೋಟೆ ತೆಪ್ಪೊತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಂಗಾರತಿ ಮಾಡಲಾಯ್ತು. ಅಲ್ಲದೆ ಕಲಾ ತಂಡಗಳ ನೃತ್ಯ, ಚೆಂಡೆ, ಮದ್ದಳೆಗಳ ವಾದ್ಯ ನೆರದಿದ್ದವರ ಕಣ್ಮನ ಸೆಳೆಯಿತು

First published:

 • 18

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಪುರಾಣ ಪ್ರಸಿದ್ದ ಶ್ರೀ ಮೇಲುಕೋಟೆ ಚಲುವನಾರಾಯಾಣಸ್ವಾಮಿಯ ವೈರಮುಡಿ ಉತ್ಸವದ ಬಳಿಕ 9ನೇ ಜಾತ್ರೆ ದಿನ ಚಲುವನಾರಾಯಾಣಸ್ವಾಮಿಗೆ ತೆಪ್ಪೊತ್ಸವ ನೆರವೇರಿಸಲಾಯ್ತು. ಪ್ರತೀತಿಯಂತೆ ಹೋಳಿ ಹುಣ್ಣಿಮೆಯ ದಿನವಾದ ಚೆಲುವನಾರಾಯಾಣನಿಗೆ ರಾಜಮುಡಿ ಧರಿಸಿ ತೆಪ್ಪೋತ್ಸವ ನೆರವೇರಿಸಲಾಯ್ತು.

  MORE
  GALLERIES

 • 28

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಮೇಲುಕೋಟೆ ಪಂಚ ಕಲ್ಯಾಣಿಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದ ನಡುವೆ ಪವಿತ್ರ ರಾಜಮುಡಿ ಕಿರೀಟ ತೊಟ್ಟ ಚಲುವನಾರಾಯಾಣಸ್ವಾಮಿ ಮೂರ್ತಿ ಕಂಡು ನೆರೆದಿದ್ದ ಸಾವಿರಾರು ಜನ ಭಕ್ತಿ, ಭಾವ ಮೆರೆದ್ರು. 

  MORE
  GALLERIES

 • 38

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಕೊರೊನಾ ಹಿನ್ನೆಲೆ ಕಳೆದೆರಡು ಬಾರಿಯಿಂದ ವೈರಮುಡಿ ಬ್ರಹ್ಮೋತ್ಸವವನ್ನ ಸರಳವಾಗಿ ಆಚರಿಸಲಾಗಿತ್ತು. ಹಿಗಾಗಿ ಈ ಬಾರಿ ವೈರಮುಡಿ ಉತ್ಸವಕ್ಕೆ ಐಟೆಕ್ ಸ್ಪರ್ಶ ನೀಡಲಾಗಿತ್ತು.

  MORE
  GALLERIES

 • 48

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಮೇಲುಕೋಟೆಯ ಪ್ರತಿ ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಉತ್ಸವದ ಮೆರುಗನ್ನ ಹೆಚ್ಚಿಸಿದ್ವು. ಅದಷ್ಟೆ ಅಲ್ಲದೆ ರಾತ್ರಿ ನಡೆದ ತೆಪ್ಪೋತ್ಸವದಲ್ಲಿ ಪಂಚ ಕಲ್ಯಾಣಿಗೆ ಮಾಡಿದ್ದ ವಿದ್ಯುತ್ ದೀಪಗಳ ಅಲಂಕಾರ ಕಂಡು ದೇವ ಲೋಕವೆ ಧರೆಗಿಳಿದು ಬಂದಂತೆ ಬಾಸವಾಗಿತ್ತು. 

  MORE
  GALLERIES

 • 58

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಇನ್ನು ಮೇಲುಕೋಟೆ ತೆಪ್ಪೊತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಂಗಾರತಿ ಮಾಡಲಾಯ್ತು. ಅಲ್ಲದೆ ಕಲಾ ತಂಡಗಳ ನೃತ್ಯ, ಚೆಂಡೆ, ಮದ್ದಳೆಗಳ ವಾದ್ಯ ನೆರದಿದ್ದವರ ಮೈ ಜುಮ್ ಎನಿಸಿತ್ತು.

  MORE
  GALLERIES

 • 68

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಇದರ ಜೊತೆಗೆ ಮೇಲುಕೋಟೆಯ ಇತಿಹಾಸ ಸಾರುವ ಲೇಸರ್ ಶೋ, ಸಂಗೀತಕ್ಕೆ ತಕ್ಕಂತೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ನೃತ್ಯ, ಕಲ್ಯಾಣಿಯ ಪ್ರತಿ ಕಂಬಗಳ ನಡುವೆ ನಿಂತಿದ್ದ ನೃತ್ಯ ಗಾರ್ತಿಯರು ಹಾಗೂ ಮನರಂಜನೆಯ ನಡು ನಡುವೆ ಬರುತ್ತಿದ್ದ ಬಾಣ ಬಿರುಸುಗಳನ್ನ ನೋಡುಲು ಅತ್ಯಾಕರ್ಷಕವಾಗಿತ್ತು. 

  MORE
  GALLERIES

 • 78

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಇನ್ನು ಮೊದಲ ಬಾರಿಗೆ ಈ ರೀತಿಯ ಉತ್ಸವ ಕಂಡ ಸಹಸ್ತ್ರಾರು ಭಕ್ತರು‌, ಮೇಲುಕೋಟೆಯನ್ನ ಎರಡನೇ ತಿರುಪತಿಗೆ ಹೋಲಿಸಿದ್ದಾರೆ‌. ಮೇಲುಕೋಟೆಯಲ್ಲಿ ಹಿಂದೆ ಎಂದು ಈ ರೀತಿ ಉತ್ಸವಗಳು ನಡೆದಿರಲಿಲ್ಲ.

  MORE
  GALLERIES

 • 88

  ಅದ್ದೂರಿಯಾಗಿ ನಡೆದ Melukote ತೆಪ್ಪೋತ್ಸವ; ರಾಜಮುಡಿ ತೊಟ್ಟ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತರು

  ಈ ಬಾರಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಪರಿಶ್ರಮದಿಂದ ವೈರಮುಡಿ ಉತ್ಸವ ಅದ್ದೂರಿಗೆ ನಡೆಯಿತು ಎಂದಿದ್ದಾರೆ. ಒಟ್ಟಾರೆ ಪುರಾಣ ಪ್ರಸಿದ್ದ ವೈರಮುಡಿ ಉತ್ಸವ ಈ ಬಾರಿ ಅದ್ದೂರಿಯಾಗಿ ಜರುಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.

  MORE
  GALLERIES