Dream Meaning: ಕನಸಿನಲ್ಲಿ ಹಳೆಯ ಮನೆ ಪದೇ ಪದೇ ಕಾಡ್ತಿದ್ರೆ ಅದರ ಹಿಂದಿದೆ ಈ ಅರ್ಥ
Dream Meaning: ನಾವು ರಾತ್ರಿ ಮಲಗಿದಾಗ ವಿವಿಧ ರೀತಿಯ ಕನಸುಗಳನ್ನು ಕಾಣುತ್ತೇವೆ. ಕೆಲವೊಮ್ಮೆ ನಮಗೆ ಆ ಕನಸಿನ ಅರ್ಥ ತಿಳಿಯುವುದಿಲ್ಲ. ಆದರೆ ನಮ್ಮ ಒಂದೊಂದು ಕನಸಿಗೆ ಒಂದೊಂದು ಅರ್ಥವಿರುತ್ತದೆ. ಹಾಗೆಯೇ ನಿಮ್ಮ ಕನಸಿನಲ್ಲಿ ಹಳೆಯ ಮನೆ ಅಥವಾ ಕಟ್ಟಡ ಬಂದರೆ ಅರ್ಥವೇನು ಎಂಬುದು ಇಲ್ಲಿದೆ.
ಕನಸಿನಲ್ಲಿ ನಿಮಗೆ ಹಳೆಯ ಮನೆ ಅಥವಾ ಕಟ್ಟಡ ಕಾಣಿಸಿಕೊಂಡರೆ ನೀವು ನಿಮ್ಮ ಹಳೆಯ ಘಟನೆಗಳನ್ನು ಮರೆತು ಜೀವನ ಸಾಗಿಸಬೇಕು ಎಂದರ್ಥ. ಕೆಲವೊಮ್ಮೆ ಜೀವನದಲ್ಲಿ ನಡೆದ ಘಟನೆಗಳು ಹಾಗೆಯೇ ಮನಸಿನಲ್ಲಿ ಕುಳಿತುಬಬಿಡುತ್ತದೆ. ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದರೆ, ಹಾಗೆ ಮಾಡಬಾರದು ಎಂಬುದು ಕನಸಿನ ಅರ್ಥ.
2/ 9
ಕನಸಿನಲ್ಲಿ ಹಳೆಯ ಮನೆ ಬಂದರೆ ನಿಮ್ಮ ಜೀವನಶೈಲಿಯನ್ನು ತೋರಿಸುತ್ತದೆ ಎನ್ನಲಾಗುತ್ತದೆ. ನಿಮ್ಮ ಜೀವನಶೈಲಿಯಿಂದ ನೀವು ಖುಷಿಯಾಗಿಲ್ಲ ಎಂದು ಅರ್ಥ. ಹಾಗಾಗಿ ಪದೇ ಪದೇ ಕನಸಿನಲ್ಲಿ ಹಳೆಯ ಮನೆ ಬಂದರೆ ನಿಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಿ.
3/ 9
ಈ ಕನಸಿನ ಮತ್ತೊಂದು ಅರ್ಥ ಎಂದರೆ ನಿಮ್ಮ ಜೀವನದಲ್ಲಿ ನೋವು ಹಾಗೂ ಬೇಸರ ಇದೆ, ಅವುಗಳನ್ನು ತೆಗೆದು ಸಂತೋಷವಾಗಿ ಜೀವನ ನಡೆಸಬೇಕು ಎಂದರ್ಥ. ನಿಮಗೆ ಈ ಕನಸು ಪದೇ ಪದೇ ಬಂದರೆ ಮೊದಲು ನಿಮಗಾಗಿ ಸಮಯ ಮೀಸಲಿಟ್ಟು, ರಿಫ್ರೆಶ್ ಆಗಿ.
4/ 9
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನೀವು ಸಾರ್ವಜನಿಕವಾಗಿ ಹೇಗೆ ಕಾಣಿಸಿಕೊಳ್ಳುತ್ತಿದ್ದೀರಿ ಎಂಬುದು ಸಹ ಮುಖ್ಯ ನೀವು ಸಾರ್ವಜನಿಕವಾಗಿ ನಿಮ್ಮ ಲುಕ್ ಅನ್ನು ನೆಗ್ಲೆಕ್ಟ್ ಮಾಡುತ್ತಿದ್ದರೆ ಈ ರೀತಿಯ ಕನಸು ಬೀಳುತ್ತದೆ.
5/ 9
ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸುವ ಅವಶ್ಯಕತೆ ಇದೆ ಎನ್ನುವುದರ ಸೂಚನೆ ಇದು. ನಿಮ್ಮ ಕನಸಿನಲ್ಲಿ ಪದೇ ಪದೇ ಹಳೆಯ ಮನೆ ಬಂದರೆ ನೀವು ಆರೋಗ್ಯ ಪರೀಕ್ಷೆ ಮಾಡಿಸಿ, ಸರಿಯಾದ ನಿರ್ವಹಣೆ ಮಾಡಿಕೊಳ್ಳಬೇಕು. ಯಾವುದೇ ಕೆಟ್ಟ ಅಭ್ಯಾಸ ಇದ್ದರೂ ಸಹ ಬಿಡುವುದು ಉತ್ತಮ.
6/ 9
ಈ ಕನಸಿಗೆ ಹಲವಾರು ಅರ್ಥಗಳಿದೆ. ಹಾಗೆಯೇ, ಹಳೆಯ ಮನೆ ಕನಸಿನಲ್ಲಿ ಬಂದರೆ ನಿಮ್ಮ ಬದುಕು ಸರಿಯಾದ ದಾರಿಯಲ್ಲಿ ಇದೆ ಎಂದು ಅರ್ಥ. ಹಾಗೆಯೇ, ಕನಸಿನಲ್ಲಿ ನೀವು ಮನೆಯನ್ನು ರಿಪೇರಿ ಮಾಡಿಸುವ ರೀತಿ ಕಂಡರೆ ಇಷ್ಟು ದಿನ ನಿಮ್ಮ ಜೀವನ ಸರಿಯಾದ ದಾರಿಯಲ್ಲಿ ಇರಲಿಲ್ಲ, ಈಗ ಸರಿಯಾಗಿದೆ ಎಂದರ್ಥ.
7/ 9
ನಿಮ್ಮ ಹಳೆಯ ಜೀವನಕ್ಕೂ ಹಾಗೂ ನಿಮ್ಮ ಕನಸಿಗೂ ಸಂಬಂಧ ಇರುತ್ತದೆ., ಹಾಗೆಯೇ ಕನಸಿನಲ್ಲಿ ಹಳೆ ಮನೆ ಬಂದರೆ ನೀವು ವ್ಯಕ್ವಿತ್ವ ಬದಲಾವಣೆ ಮಾಡಿಕೊಳ್ಳಬೇಕು. ನಿನ್ನೆಯ ನಿಮಗೂ, ಇಂದಿನ ನಿಮಗೂ ವ್ಯತ್ಯಾಸ ಇರಬೇಕು.
8/ 9
ಈ ಕನಸಿನ ಇನ್ನೊಂದು ಅರ್ಥವಿದೆ, ಅದು ನೀವು ಒಂದು ಉತ್ತಮ ಸಂಬಂಧವನ್ನು ಕಳೆದುಕೊಳ್ಳುತ್ತೀರಿ ಎಂದು. ಹೌದು, ನಿಮ್ಮ ಜೊತೆ ಇರುವ ಅದ್ಭುತ ವ್ಯಕ್ತಿ ನಿಮ್ಮಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರನ್ನು ಉಳಿಸಿಕೊಳ್ಳಲು ಇದೊಂದು ಸೂಚನೆ ಎನ್ನಬಹುದು.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)