Shani Amavasya 2023: ಸಾಡೇಸಾತಿ ಕಾಟ ಇದ್ರೆ ಅಮಾವಾಸ್ಯೆ ದಿನ ಸಿಂಪಲ್ ಪರಿಹಾರ ಮಾಡಿ ಸಾಕು
Mouni Amavasya 2023: ನಮಗೆ ಅಮಾವಾಸ್ಯೆ ಎಂದರೆ ಭಯ, ಈ ದಿನ ಮನೆಯಿಂದ ಹೊರಗೆ ಕಾಲಿಡಬೇಡಿ ಎಂದು ಹಿರಿಯರೂ ಸಹ ಹೇಳುತ್ತಾರೆ. ಆದರೆ, ಅಮವಾಸ್ಯೆಯ ದಿನ ಮನೆಯಲ್ಲಿಯೇ ಇದ್ದು ಕೆಲವು ನಿಯಮಗಳನ್ನು ಪಾಲಿಸಿದರೆ
ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ಅದರಲ್ಲೂ ಶನಿ ಅಮಾವಾಸ್ಯೆಯ ದಿನ ಕೆಲ ನಿಯಮಗಳನ್ನು ಪಾಲಿಸುವುದರಿಂದ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ.
ಪ್ರತಿ ತಿಂಗಳು ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಬಂದರೂ ಕೆಲವು ಅಮಾವಾಸ್ಯೆ ಮತ್ತು ಹುಣ್ಣಿಮೆ ತುಂಬಾ ವಿಶೇಷವಾಗಿರುತ್ತದೆ. ಆ ದಿನ ನಾವು ಕೆಲವು ಕೆಲಸಗಳನ್ನು ಮಾಡಿದರೆ ಅದು ನಮಗೆ ಬಹಳ ಒಳ್ಳೆಯದನ್ನು ಮಾಡುತ್ತದೆ ಎನ್ನುವ ನಂಬಿಕೆ ಇದೆ.
2/ 10
ಅಮಾವಾಸ್ಯೆ ಎಂದರೆ ಅನೇಕರಿಗೆ ಭಯ. ಆ ದಿನವನ್ನು ಕೆಟ್ಟ ದಿನವೆಂದು ಪರಿಗಣಿಸಲಾಗುತ್ತದೆ. ಕೆಲವರಂತೂ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ಶನಿ ಅಮಾವಾಸ್ಯೆ ಬಹಳ ವಿಶೇಷ ಎನ್ನುತ್ತಾರೆ ಪಂಡಿತರು. ಆ ದಿನ ಕೆಲವು ಕೆಲಸಗಳನ್ನು ಮಾಡಿದರೆ ಸಾಡೇಸಾತಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
3/ 10
ಅಮಾವಾಸ್ಯೆಗಳಲ್ಲಿ ಮೌನಿ ಅಮಾವಾಸ್ಯೆ ಬಹಳ ಮುಖ್ಯ ಎನ್ನಲಾಗುತ್ತದೆ. ಈ ದಿನ ಧ್ಯಾನ ಮತ್ತು ಮೌನ ಪೂಜೆಯನ್ನು ಮಾಡುವುದರಿಂದ ಮನುಷ್ಯನು ದುಃಖ ಮತ್ತು ಪಾಪಗಳಿಂದ ಮುಕ್ತನಾಗುತ್ತಾನೆ ಎನ್ನುವ ನಂಬಿಕೆ ಇದೆ. ಈ ದಿನ ಪೂರ್ವಜರಿಗೆ ಪಿಂಡಗಳನ್ನು ಕೂಡ ಇಡಲಾಗುತ್ತದೆ.
4/ 10
ಸಾಮಾನ್ಯವಾಗಿ ಪ್ರತಿ ಅಮವಾಸ್ಯೆಯ ದಿನ ಕೆಲ ಪರಿಹಾರಗಳನ್ನು ಮಾಡುವಂತೆ ಹಿರಿಯರು ಹೇಳುತ್ತಾರೆ. ಆದರೆ ಶನಿ ಅಮಾವಾಸ್ಯೆ ಬಹಳ ವಿಶೇಷವಾಗಿರುವುದರಿಂದ, ಈ ದಿನ ಶನಿಯ ಮೆಚ್ಚಿಸಲು ಕೆಲ ಕೆಲಸಗಳನ್ನು ಮಾಡುವ ಅವಶ್ಯಕತೆ ಇದೆ.
5/ 10
ಮೌನಿ ಅಮಾವಾಸ್ಯೆಯ ದಿನ.. ನಮ್ಮ ಮನೆಯಲ್ಲಿ ಅರಿಶಿನ, ಕುಂಕುಮ, ಉಪ್ಪು, ನಿಂಬೆಹಣ್ಣಿನೊಂದಿಗೆ ಸಣ್ಣ ಪರಿಹಾರವನ್ನು ಮಾಡಿದರೆ, ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮೇಲಾಗಿ, ಲಕ್ಷ್ಮಿ ದೇವಿಯು ನಮ್ಮ ಮನೆಗೆ ಪ್ರವೇಶಿಸುತ್ತಾಳೆ.
6/ 10
ಮನೆಯ ಮುಖ್ಯ ದ್ವಾರದ ಮುಂದೆ ಮೌನಿ ಅಮಾವಾಸ್ಯೆಯ ದಿನ ಈ ಪರಿಹಾರವನ್ನು ಮಾಡಬೇಕು. ಈ ಪರಿಹಾರವನ್ನು ಸಂಜೆ 5 ರಿಂದ ರಾತ್ರಿ 8 ರವರೆಗೆ ಮಾಡಬೇಕು ಆಗ ಮಾತ್ರ ನಿಮಗೆ ಇದರಿಂದ ಲಾಭ ಸಿಗುತ್ತದೆ. ಅಲ್ಲದೇ, ಶನಿಯ ಕಾಟದಿಂದ ಸಹ ನಿಮಗೆ ಮುಕ್ತಿ ಸಿಗುತ್ತದೆ.
7/ 10
ಈ ದಿನ ಬೆಳಗ್ಗಿನಿಂದ ಉಪವಾಸ ಹಾಗೂ ಮೌನ ವ್ರತ ಮಾಡಿ ಸಂಜೆ 5 ಗಂಟೆಯ ನಂತರ ಉಪ್ಪು ಬೆರೆಸಿದ ನಿಂಬೆಹಣ್ಣಿನಿಂದ ಈ ಪರಿಹಾರ ಮಾಡಬೇಕು. ಹಸಿರು ನಿಂಬೆ ತೆಗೆದುಕೊಂಡು ಅವುಗಳನ್ನು ಕತ್ತರಿಸಿ ಎರಡು ಭಾಗಗಳಾಗಿ ಮಾಡಿಕೊಳ್ಳಿ. ಆ ನಂತರ ಒಂದು ಬಟ್ಟಲಿನಲ್ಲಿ ಅರಿಶಿನ ಮತ್ತು ಇನ್ನೊಂದು ಬಟ್ಟಲಿನಲ್ಲಿ ಕುಂಕುಮವನ್ನು ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ.
8/ 10
ಈಗ ನಿಂಬೆ ಹೋಳನ್ನು ಅರಿಶಿನದಲ್ಲಿ ಅದ್ದಿ, ನಂತರ ಇನ್ನೊಂದು ನಿಂಬೆ ಹೋಳನ್ನು ಕುಂಕುಮದಲ್ಲಿ ಅದ್ದಬೇಕು. ಆ ನಂತರ ಅವುಗಳನ್ನು ತೆಗೆದುಕೊಂಡು ಹೋಗಿ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಮನೆಯಮುಖ್ಯಬಾಗಿಲಿನಹೊಸ್ತಿಲಿನಎರಡೂಬದಿಯಲ್ಲಿಉಪ್ಪನ್ನು ಹಾಕಿ ಅದರ ಮೇಲೆ ಒಂದೊಂದು ನಿಂಬೆ ಹೋಳು ಇಡಿ.
9/ 10
ಇದಲ್ಲದೇ, ಈ ಮೌನಿ ಅಮಾವಾಸ್ಯೆಯ ದಿನ, ನಿಮಗೆ ಸಾಧ್ಯವಾದಷ್ಟು ದಾನ ಮಾಡುವುದು ಸಹ ತುಂಬಾ ಒಳ್ಳೆಯದು. ಒಂದಿಷ್ಟು ಹಣ, ವಸ್ತ್ರ, ಅನ್ನದಾನ ಮಾಡಿದರೂ ಲಕ್ಷ್ಮೀ ಕೃಪೆ ನಿಮ್ಮ ಮೇಲೆ ಇರುತ್ತದೆ ಎನ್ನಲಾಗುತ್ತದೆ.
10/ 10
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)