Mars Direct in Taurus 2023: ಪಥ ಬದಲಾಯಿಸಿದ ಮಂಗಳ ಗ್ರಹ, ಈ ರಾಶಿಗಳಿಗೆ ಅನಾರೋಗ್ಯ ತಪ್ಪಿದ್ದಲ್ಲ
Mars Direct in Taurus 2023: ಜ್ಯೋತಿಷ್ಯದ ಪ್ರಕಾರ ಜನವರಿ ತಿಂಗಳಲ್ಲಿ ಹಲವಾರು ಗ್ರಹಗಳ ಬದಲಾವಣೆಯಾಗಲಿದೆ. ಈ ಸಮಯದಲ್ಲಿ ಮಂಗಳ ಗ್ರಹ ಸಹ ಸ್ಥಾನ ಬದಲಾವಣೆ ಮಾಡುತ್ತಿದ್ದು, ವೃಷಭ ರಾಶಿಗೆ ಪ್ರವೇಶಿಸಿದೆ. ಇದರಿಂದ ಏನೆಲ್ಲಾ ಬದಲಾವಣೆಗಳಾಗಲಿದೆ ಎಂಬುದು ಇಲ್ಲಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹವನ್ನು ಭೂಮಿ, ಶಕ್ತಿ, ಸೈನ್ಯ, ಯೋಧ ಮತ್ತು ಇತರ ಅನೇಕ ವಸ್ತುಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹವನ್ನು ಭೂಮಿಯ ಮಗ ಎಂದೂ ಕರೆಯಲಾಗುತ್ತದೆ. ಮಂಗಳ ಗ್ರಹವು ನಮ್ಮ ಕೋಪವನ್ನು ಸಹ ನಿಯಂತ್ರಿಸುತ್ತದೆ ಎನ್ನಲಾಗುತ್ತದೆ.
2/ 8
ಈ ಮಂಗಳ ಗ್ರಹ ಜನವರಿ 13ರಂದು ತನ್ನ ರಾಶಿ ಬದಲಾವಣೆ ಮಾಡಿದ್ದು, ಇದರಿಂದ ನವವಿವಾಹಿತ ದಂಪತಿಗಳಿಗೆ ಈ ಸಮಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಹಾಗೆಯೇ ಈ ಬದಲಾವಣೆಯಿಂದ ಕೆಲ ರಾಶಿಯವರ ಆರೋಗ್ಯದಲ್ಲಿ ಸಹ ಸಮಸ್ಯೆ ಬರಲಿದೆ.
3/ 8
ಈ ಮಂಗಳದ ಸ್ಥಾನ ಬದಲಾವಣೆಯು ಮೇಷ ರಾಶಿಯವರಿಗೆ ಮಿಶ್ರ ಫಲಿತಾಂಶ ನೀಡಲಿದ್ದು, ಆರ್ಥಿಕವಾಗಿ ಬೆಳವಣಿಗೆ ಇರುತ್ತದೆ, ಆದರೆ ಕುಟುಂಬದಲ್ಲಿ ಸಮಸ್ಯೆ ಬರುತ್ತದೆ. ಹಾಗೆಯೇ ವೃಷಭ ರಾಶಿಯವರಿಗೆ ಈ ಬದಲಾವಣೆ ಅದೃಷ್ಟವನ್ನು ತರಲಿದೆ ಎನ್ನಲಾಗುತ್ತಿದೆ.
4/ 8
ಮಿಥುನ ರಾಶಿಯವರಿಗೆ ಸಹ ಈ ಬದಲಾವಣೆಯಿಂದ ಒಳ್ಳೆಯದಾಗಲಿದ್ದು, ಕಟಕ ರಾಶಿಯವರಿಗೆ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಆರೋಗ್ಯದಲ್ಲಿ ಏರಿಳಿತ ಆಗಬಹುದು. ಹಾಗಾಗಿ ಎಚ್ಚರದಿಂದಿರಿ.
5/ 8
ಸಿಂಹ ಹಾಗೂ ಕನ್ಯಾ ರಾಶಿಯವರಿಗೆ ಮಂಗಳ ಗ್ರಹದ ಸ್ಥಾನ ಬದಲಾವಣೆಯಿಂದ ಲಾಭವಾಗಲಿದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ದಾಂಪತ್ಯ ಜೀವನದಲ್ಲಿ ಸಹ ಯಾವುದೇ ಸಮಸ್ಯೆ ಇರುವುದಿಲ್ಲ.
6/ 8
ತುಲಾ ರಾಶಿಯವರಿಗೆ ಮಾತ್ರ ಇದರ ಪ್ರಭಾವ ಹೆಚ್ಚಾಗಿ ಬೀರಲಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುವುದರಿಂದ ಎಚ್ಚರಿಕೆ ಅಗತ್ಯವಿದೆ. ವೈವಾಹಿಕ ಜೀವನದಲ್ಲಿ ಏನಾದರೂ ಬಿರುಕು ಉಂಟಾಗಬಹುದು. ಹಳೆಯ ಕೀಲು ನೋವು ಮತ್ತಷ್ಟು ಹೆಚ್ಚಾಗಬಹುದು.
7/ 8
ಇನ್ನು ವೃಶ್ಚಿಕ, ಧನಸ್ಸು, ಮಕರ ಹಾಗೂ ಕುಂಭ, ಮೀನ ರಾಶಿಗಳಿಗೆ ಈ ಮಂಗಳ ಗಹ್ರಹದ ಬದಲಾವಣೆಯಿಂದ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ನವ ದಂಪತಿಗಳಿಗೆ ಮಕ್ಕಳಾಗುವ ಸಾಧ್ಯತೆ ಇದ್ದು, ಅವಿವಾಹಿತರಿಗೆ ಮದುವೆಯ ಭಾಗ್ಯ ಇದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)