Mantralaya: ಸಂಭ್ರಮದಿಂದ ನಡೆದ ರಾಘವೇಂದ್ರಸ್ವಾಮಿ ಜಯಂತಿ; ಇಲ್ಲಿದೆ ಫೋಟೋಗಳು
ಕಲಿಯುಗದ ಕಾಮಧೇನು, ಕಲ್ಪವೃಕ್ಷ, ನಾದ ಪ್ರಿಯ ಹೀಗೆ ಹಲವು ಹೆಸರಿನಿಂದ ಕರೆಯಲ್ಪಡುವ, ತುಂಗೆಯ ತಟದಲ್ಲಿ ನೆಲೆಸಿರುವ ಗುರು ಸಾರ್ವಭೌಮ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ (Sri Raghavendra) 427 ನೇ ವರ್ಧಂತಿ ( ಹುಟ್ಟುಹಬ್ಬ) ಉತ್ಸವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಕೃತದಲ್ಲಿ ಹುಟ್ಟುಹಬ್ಬಕ್ಕೆ ವರ್ಧಂತಿ ಮಹೋತ್ಸವ ಎನ್ನುತ್ತಾರೆ. ಹೀಗಾಗಿ ಮಂತ್ರಾಲಯ ಮಠದಲ್ಲೂ ರಾಯರ ಹುಟ್ಟು ಹಬ್ಬವನ್ನು ವರ್ಧಂತಿ ಉತ್ಸವವನ್ನಾಗಿ ಆಚರಿಸುತ್ತಾರೆ. ಈ ಹಿನ್ನಲೆಯಲ್ಲಿ ಶ್ರೀ ಮಠದಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು
2/ 9
ಗುರು ಸಾರ್ವಭೌಮರ ವರ್ಧಂತಿ ಉತ್ಸವಕ್ಕೂ ಮುನ್ನಾ ಕಳೆದ 5 ದಿನಗಳಿಂದ ಗುರುಗಳ ವೈಭವವೋತ್ಸವವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಗುರುಗಳ ಪಟ್ಟಾಭಿಷೇಕ, ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಸೇರಿದಂತೆ ಹಲವು ವಿಧದ ರಥೋತ್ಸವ ಕಾರ್ಯಕ್ರಮಗಳು ಜರುಗಿವೆ.
3/ 9
ಇಂದು ರಾಯರ 427 ನೇ ಹುಟ್ಟುಹಬ್ಬ ನಿಮಿತ್ತ ಮಠದ ಪ್ರಾಂಗಣದಲ್ಲಿ ಹಲವು ವಿಶಿಷ್ಟಪೂರ್ಣ ಕಣ್ಮನ ಸೆಳೆಯುವ ಕಾರ್ಯಕ್ರಮಗಳು ಜರುಗಿದವು. ಮೂಲತಃ ಸಂಗೀತ ಪ್ರೇಮಿಗಳಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟನ 150 ವಿದ್ವಾಂಸರಿಂದ ಏಕ ಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ ಸಮರ್ಪಿಸಲಾಯಿತು.
4/ 9
ಎಂದಿನಂತೆ ಈ ದಿನವೂ ರಾಘವೇಂದ್ರ ಸ್ವಾಮಿಗಳ ಮೂಲ ಬೃದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಮಾಡಲಾಯಿತು. ವರ್ಧಂತೋತ್ಸವ ಹಿನ್ನಲೆ ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ಶೇಷ ವಸ್ತ್ರ ಬರ ಮಾಡಿಕೊಂಡು, ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಿಸಲಾಯಿತು.
5/ 9
ಭಕ್ತರು ನೀಡಿದ ದೇಣಿಗೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳ್ಳಿಯ ಆಭರಣ ಉಡುಗೊರೆಯಾಗಿ ನೀಡಿಲಾಯಿತು. ರಾಘವೇಂದ್ರ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಜರುಗಿತು.
6/ 9
ಇನ್ನು ಸ್ವತಃ ಸಂಗೀತ ಪ್ರಿಯರು, ವೈಣಿಕರಾಗಿದ್ದ ಶ್ರೀ ರಾಘವೇಂದ್ರ ಯತಿಗಳಿಗೆ ಚೆನೈನ ನಾದಾಹಾರ ಟ್ರಸ್ಟ್ ನಿಂದ ಕಳೆದ 18 ವರ್ಷಗಳಿಂದ ನಿರಂತರವಾಗಿ ಸಂಗೀತ ಸೇವೆ ಮಾಡುತ್ತಾ ಬರಲಾಗಿದೆ. ಈ ವರ್ಷವೂ ಕೂಡ 150 ಸಂಗೀತಗಾರರಿಂದ ಏಕ ಕಾಲಕ್ಕೆ ಗಾಯನ ಮಾಡುವ ಮೂಲಕ ನಾದಹಾರ ಸಮರ್ಪಿಸಿದರು
7/ 9
ಚೆನೈ ಮೂಲದ ನಾದಹಾರ ಸಂಗೀತ ಟ್ರಷ್ಟ್ ನ ಹಲವರು ವಿದ್ವಾಂಸರು ಇದೊಂದು ನಮ್ಮ ಪಾಲಿನ ಸುದಿನವಾಗಿದೆ. ರಾಯರ ಜಯಂತಿ ದಿನ ನಮಗೆ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತದ್ದು ನಮ್ಮಪುಣ್ಯ ಎಂದರು.
8/ 9
ಅಲ್ಲದೇ ಸತತವಾಗಿ 18 ವರ್ಷಗಳಿಂದ ಶ್ರೀ ಮಠ ತಮ್ಮ ಸಂಗೀತ ಸೇವೆಗೆ ಸಕಲ ರೀತಿಯಿಂದ ಸಹಕಾರ ನೀಡುತ್ತಿದೆ ಎಂದು ನಾದಹಾರ ಟ್ರಷ್ಟ್ ನ ಸಂಗೀತ ವಿಧ್ವಾಂಸರು ಹರ್ಷ ವ್ಯಕ್ತಪಡಿಸಿದರು.
9/ 9
ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಇಂದು ಸಂಪನ್ನಗೊಂಡಿದೆ. ನಾಡಿನ ಮೂಲೆ ಮೂಲೆಗಳಿಂದ ಬಂದ ಭಕ್ತರು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದರು.