ವೃಷಭ ರಾಶಿಯಲ್ಲಿ ಶುಕ್ರ ಬಹಳ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಮೀನ ರಾಶಿಯಲ್ಲಿ ಶುಕ್ರನ ಈ ಸಂಕ್ರಮಣ ಹೆಚ್ಚು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಶುಕ್ರ ಸಂಕ್ರಮಣವು ಒಟ್ಟಾರೆ ಎಲ್ಲಾ ರಾಶಿಗಳಿಗೆ ಕೆಲವು ವಿಶಿಷ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದರೆ ತಪ್ಪಲ್ಲ. ಅದರಲ್ಲೂ ಮೂರು ರಾಶಿಯವರಿಗೆ ಶುಕ್ರನ ಆಶೀರ್ವಾದ ಇದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಕಟಕ ರಾಶಿಯ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಶುಕ್ರ. ನಾಲ್ಕನೇ ಮನೆ ಸೌಕರ್ಯ, ಮನೆ, ವಾಹನ, ತಾಯಿಯ ಸಂಕೇತ ಎನ್ನಲಾಗುತ್ತದೆ. ಈ ಬಾರು 11 ನೇ ಮನೆಯಲ್ಲಿ ಶುಕ್ರ ಸಂಕ್ರಮಣವು ಈ ರಾಶಿಯ ಜನರ ಆಸೆಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ. ಹೊಸ ಮನೆ ಮತ್ತು ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ವೃತ್ತಿಯ ದೃಷ್ಟಿಯಿಂದ ಈ ಪ್ರಯಾಣವು ಅನುಕೂಲಕರವಾಗಿರಲಿದೆ.