Malavya Yoga: ಈ 3 ರಾಶಿಗಳಿಗೆ ಮಾಲವ್ಯ ಯೋಗ, ಒಂದು ವರ್ಷ ಇವರು ನಡೆದಿದ್ದೇ ದಾರಿ
Malavya Yoga: 2023 ರಲ್ಲಿ ಯೋಗಗಳು ಸಾಲುಗಳಿದೆ ಎನ್ನಬಹುದು. ಈ ಬಾರಿ ಶುಕ್ರ ಮೂರು ಬಾರಿ ಮಾಲವ್ಯ ಯೋಗವನ್ನು ರೂಪಿಸುತ್ತಾನೆ. ಇದರಿಂದ ಮುಖ್ಯವಾಗಿ 3 ರಾಶಿಗಳಿಗೆ ಲಾಭ ಸಿಗಲಿದೆ. ಈ ಯೋಗದ ಕಾರಣದಿಂದ ಅವರ ಜೀವನ ಸಂಪತ್ತು ಹಾಗೂ ನೆಮ್ಮದಿಯಿಂದ ತುಂಬಿರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
2023 ರಲ್ಲಿ ಶುಕ್ರನು ಮೂರು ಬಾರಿ ಮಾಲವ್ಯ ಯೋಗವನ್ನು ರೂಪಿಸುತ್ತಾನೆ. ಮೊದಲು ಮೀನ, ಎರಡನೆಯದು ವೃಷಭ, ಮೂರನೆಯದು ತುಲಾ ರಾಶಿಯಲ್ಲಿ. ಫೆಬ್ರವರಿ 15 ರಂದು ಮೀನ, ಏಪ್ರಿಲ್ 6 ರಂದು ವೃಷಭ ರಾಶಿ ಮತ್ತು ನಂತರ ನವೆಂಬರ್ 29, 2023 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತದೆ,
2/ 7
ಫೆಬ್ರವರಿಯಲ್ಲಿ ಮಿಥುನ, ಧನು, ಮೀನ ರಾಶಿಯವರಿಗೆ ರಾಜಯೋಗವಿದ್ದು, ದ್ವಿತೀಯ ರಾಜಯೋಗದಿಂದ ವೃಷಭ, ಸಿಂಹ, ವೃಶ್ಚಿಕ, ಕುಂಭ, ತೃತೀಯ ರಾಜಯೋಗದಿಂದ ಮೇಷ, ಕರ್ಕಾಟಕ, ಮಕರ ರಾಶಿಗಳಿಗೆ ಲಾಭವಿದೆ. ಈ ಯೋಗವು ಸಂತೋಷ, ಸೌಕರ್ಯ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ.
3/ 7
ಆದರೆ ಪ್ರತಿಬಾರಿ ಈ ಮಾಲವ್ಯ ಯೋಗ ರೂಪುಗೊಂಡಾಗ ಕೇವಲ 3 ರಾಶಿಗಳಿಗೆ ಅದೃಷ್ಟ ಹೆಚ್ಚಾಗಲಿದೆ. ಈ ವರ್ಷ ಪೂರ್ತಿ ಅವರ ಜೀವನದಲ್ಲಿ ಮಹತ್ತರ ಬದಲಾವಣೆ ಆಗುವುದು ಮಾತ್ರವಲ್ಲದೇ, ಸಂಪತ್ತು ಹಾಗೂ ಗೌರವ ಸಹ ಹೆಚ್ಚಾಗುತ್ತದೆ.
4/ 7
ಕಟಕ ರಾಶಿ: ಈ ಮಾಲವ್ಯ ಯೋಗದಿಂದ ಕಟಕ ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಬಹುದು. ಈ ಯೋಗವು ನಿಮ್ಮ ಮನೆಯ 9ನೇ ಮನೆಯಲ್ಲಿ ರೂಪುಗೊಳ್ಳುವುದರಿಂದ ನಿಮಗೆ ವಿದೇಶ ಪ್ರವಾಸದ ಭಾಗ್ಯ ಇದೆ. ಅಲ್ಲದೇ ವೃತ್ತಿ ಜೀವನದಲ್ಲಿ ಸಹ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ.
5/ 7
ಮೀನ ರಾಶಿ: ಈ ರಾಶಿಯವರ ಲಗ್ನದ ಮನೆಯಲ್ಲಿ ಮಾಲವ್ಯ ಯೋಗ ರೂಪುಗೊಳ್ಳುತ್ತಿರುವುದರಿಂದ ಈ ಸಮಯದಲ್ಲಿ ಅವಿವಾಹಿತರಿಗೆ ಮದುವೆ ಭಾಗ್ಯ ಇದ್ದು, ಜೊತೆಗೆ ಇಷ್ಟು ದಿನ ಮದುವೆಗೆ ಅಡ್ಡಿಯಾಗುತ್ತಿದ್ದ ಸಮಸ್ಯೆಗಳು ಸಹ ದೂರವಾಗಲಿದೆ.
6/ 7
ವೃಷಭ ರಾಶಿ: ನಿಮ್ಮ ಜಾತಕ 11ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೇ, ವೃತ್ತಿ ಜೀವನದಲ್ಲಿ ಸಹ ನಿಮ್ಮ ಗೌರವ ಹೆಚ್ಚಾಗಲಿದ್ದು, ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)