Makara Sankranti 2023: ಸಂಕ್ರಾಂತಿ ಹಿನ್ನೆಲೆ, ಮಹತ್ವ ಏನು? ಹಬ್ಬವನ್ನು ಸಂಭ್ರಮಿಸುವ ಮುನ್ನ ಇದನ್ನು ತಿಳಿದುಕೊಳ್ಳಿ
Makara Sankranti 2023: ಮಕರ ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಈಗಾಗಲೇ ಹಬ್ಬದ ತಯಾರಿ ಸಹ ಆರಂಭವಾಗಿದೆ. ಈ ವಿಶೇಷ ಸಮಯದಲ್ಲಿ ಈ ಹಬ್ಬದ ಆಚರಣೆಯನ್ನು ಏಕೆ ಮಾಡಲಾಗುತ್ತದೆ ಹಾಗೂ ಇದರ ಹೊಂದಿನ ಇತಿಹಾಸವೇನು ಎಂಬುದು ಇಲ್ಲಿದೆ.
ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸೂರ್ಯನ ಚಲನೆಯನ್ನು ಸಂಕ್ರಾಂತಿಯಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಸೂರ್ಯ ದೇವ ತನ್ನ ಮಗ ಶನಿಯನ್ನು ಭೇಟಿ ಮಾಡುತ್ತಾನೆ ಎನ್ನುವ ನಂಬಿಕೆ ಸಹ ಇದೆ,
2/ 9
ಮಕರ ಸಂಕ್ರಾಂತಿಯನ್ನು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಕಡೆ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ಆಚರಿಸಲಾಗುತ್ತದೆ
3/ 9
ಈ ದಿನ, ಜನರು ಬೇಗನೆ ಎದ್ದು, ಸ್ನಾನ ಮಾಡಿ ಮತ್ತು ಸೂರ್ಯ ದೇವರಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಮನೆಗಳನ್ನು ಅಲಂಕಾರ ಮಾಡಲಾಗುತ್ತದೆ. ಅಲ್ಲದೇ ನಮ್ಮ ದಕ್ಷಿಣ ಭಾರತದಲ್ಲಿ ಈ ದಿನ ಎಳ್ಳು-ಬೆಲ್ಲ ಹಂಚಲಾಗುತ್ತದೆ.
4/ 9
ಎಳ್ಳು ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ಅಕ್ಕ-ಪಕ್ಕದವರಿಗೆ ಹಂಚಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂದು ಆಶೀರ್ವಾದ ಸಹ ಮಾಡಲಾಗುತ್ತದೆ. ಈ ಎಳ್ಳು ಹಾಗೂ ಬೆಲ್ಲದ ಮಿಶ್ರಣವು ಜೀವನದಲ್ಲಿ ಸಂತೋಷ ಹಾಗೂ ನೋವಿನ ಸಂಕೇತವಾಗಿದೆ.
5/ 9
ಇದು ವರ್ಷದ ಮೊದಲ ಹಬ್ಬವಾಗಿರುವುದರಿಂದ, ವರ್ಷವಿಡೀ ಜೀವನದಲ್ಲಿ ಎಲ್ಲವೂ ಸಮತೋಲಿತವಾಗಿರಲಿ. ನೋವು ಹಾಗೂ ಸಂತೋಷದ ಮಿಶ್ರಣವೇ ಜೀವನ ಎಂಬುದನ್ನ ಈ ಮೂಲಕ ಸಾರಿ ಹೇಳಲಾಗುತ್ತದೆ,
6/ 9
ಇನ್ನು ಉತ್ತರ ಭಾರತದಲ್ಲಿ ಗಾಳಿಪಟ ಹಾರಿಸುವ ಮೂಲಕ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅಲ್ಲದೇ ಈ ದಿನ ಬಗೆ ಬಗೆಯ ಸಿಹಿತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ.
7/ 9
ಮಕರ ಸಂಕ್ರಾಂತಿಯ ಸಮಯದಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಬಂಗಾಳದಲ್ಲಿ, ಜನರು ಹೊಸದಾಗಿ ಕೊಯ್ಲು ಮಾಡಿದ ಅಕ್ಕಿ ಬಳಸಿ ಸಿಹಿ ತಯಾರಿಸುತ್ತಾರೆ, ಹಾಗೆಯೇ ನಮ್ಮ ಕರ್ನಾಟಕದಲ್ಲಿ ಪೊಂಗಲ್ ತಯಾರಿಸಲಾಗುತ್ತದೆ.
8/ 9
ಅಲ್ಲದೇ ಈ ದಿನ ಖೀರ್, ಲಡ್ಡು ಹೀಗೆ ವಿವಿಧ ರೀತಿಯ ಸಿಹಿತಿಂಡಿಗಳನ್ನು ತಯಾರಿಸಿ ಹಂಚಲಾಗುತ್ತದೆ. ಮಹಾರಾಷ್ಟ್ರದಲ್ಲಿ ಈ ದಿನ ಪೂರನ್ ಪೋಳಿ ಮಾಡಿದರೆ ಗುಜರಾತ್ನಲ್ಲಿ ಬೆಲ್ಲದಿಂದ ಮಾಡಿದ ಸಿಹಿ ತಯಾರಿಸಲಾಗುತ್ತದೆ.
9/ 9
ಮಕರ ಸಂಕ್ರಾಂತಿ ಸುಗ್ಗಿಯ ಹಬ್ಬವಾಗಿದ್ದು, ಹಲವೆಡೆ ಹೊಸದಾಗಿ ಬೆಳೆದ ಅಕ್ಕಿಯಿಂದ ಆಹಾರವನ್ನು ತಯಾರಿಸಲಾಗುತ್ತದೆ. ಅಲ್ಲದೇ, ಮಕ್ಕಳು ಈ ದಿನ ಎಳ್ಳು-ಬೆಲ್ಲವನ್ನು ಅಕ್ಕ-ಪಕ್ಕದ ಮನೆಯವರಿಗೆ ಹಂಚಿ ಸಂಭ್ರಮಪಡುತ್ತಾರೆ.