ಮಿಥುನ - ಈ ರಾಶಿಯವರಿಗೆ ಮೂರನೇ ಮನೆಯ ಅಧಿಪತಿ ಸೂರ್ಯ. ಇದು ಧೈರ್ಯ ಮತ್ತು ಶೌರ್ಯದ ಮನೆ ಎನ್ನಲಾಗುತ್ತದೆ. ಆದರೆ ಈ ಹಬ್ಬದ ಸಮಯದಲ್ಲಿ ಸೂರ್ಯ ಎಂಟನೇ ಮನೆಯಲ್ಲಿ ಸಾಗುತ್ತಾನೆ. ಈ ಮನೆಯಲ್ಲಿ ಕುಳಿತಿರುವ ಸೂರ್ಯನ ದೃಷ್ಟಿ ಈಗ ನಿಮ್ಮ ಎರಡನೇ ಮನೆಯ ಮೇಲೆ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮಾತಿನ ಬಗ್ಗೆ ನಿಗಾ ಇರಲಿ. ಸಮಸ್ಯೆಗಳು ಹೆಚ್ಚಾಗಬಹುದು.
ಕನ್ಯಾ ರಾಶಿ - ಈ ರಾಶಿಯವರಿಗೆ ಸೂರ್ಯ ಹನ್ನೆರಡನೇ ಮನೆಯ ಅಧಿಪತಿ. ಸೂರ್ಯ ಈಗ ಐದನೇ ಮನೆಯ ಮೂಲಕ ಸಾಗುತ್ತಾನೆ. ಈ ಮನೆಯಲ್ಲಿ ಕುಳಿತಿರುವ ಸೂರ್ಯನ ದೃಷ್ಟಿ ಈಗ ನಿಮ್ಮ ಹನ್ನೊಂದನೇ ಮನೆಯ ಮೇಲೆ ಇರುತ್ತದೆ. ಸೂರ್ಯನ ಪ್ರಭಾವದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ, ಷೇರು ಮಾರುಕಟ್ಟೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
ಮಕರ ರಾಶಿ - ಈ ರಾಶಿಯವರಿಗೆ, ಸೂರ್ಯನು ಎಂಟನೇ ಮನೆಯ ಅಧಿಪತಿಯಾಗಿದ್ದು, ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ಅಪಘಾತಗಳು ಮತ್ತು ಆಕಸ್ಮಿಕ ಘಟನೆಗಳು ಉಂಟಾಗಬಹುದು. ಸೂರ್ಯನ ದೃಷ್ಟಿ ಈಗ ನಿಮ್ಮ ಏಳನೇ ಮನೆಯ ಮೇಲೆ ಬೀಳಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಸ್ವಲ್ಪ ಸಮಸ್ಯೆ ಬರಬಹುದು. ನಿಮ್ಮ ತಂದೆಯೊಂದಿಗೆ ನಿಮಗೆ ಭಿನ್ನಾಭಿಪ್ರಾಯ ಮೂಡಉವ ಸಾಧ್ಯತೆ ಇದೆ.