Sabrimalaಯಲ್ಲಿ ಮಕರ ಜ್ಯೋತಿ ದರ್ಶನ; ಬೆಳಕು ಕಂಡು ಪುನೀತರಾದ ಭಕ್ತರು
ಮಕರ ಸಂಕ್ರಾಂತಿಯಂದು (Makar Sankranti) ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯದ ಮಕರವಿಳಕ್ಕು ಉತ್ಸವ ನಡೆಯುತ್ತದೆ. ಈ ದಿನದಂದು, ಅಯ್ಯಪ್ಪನು ತನ್ನ ಬಾಲ್ಯದಲ್ಲಿ ಧರಿಸುತ್ತಿದ್ದ ಆಭರಣಗಳನ್ನು ತೊಡಿಸಲಾಗುವುದು. ಪಂದಳಂ ಅರಮನೆಯಿಂದ ಈ ತಿರುವಾಭರಣಂ ಎಂಬ ಪವಿತ್ರ ಆಭರಣವನ್ನು ತಂದು ಸಿಂಗರಿಸಲಾಯಿತು. ದೇವರಿಗೆ ಆಭರಣ ತೊಡಿಸಿದ ಬಳಿಕ ವಿಶೇಷ ಪೂಜೆ ನಡೆಸಿ ನಂತರ ದೀಪಾರಾಧನೆ ನಡೆಯುತ್ತದೆ.
ಇನ್ನು ಈ ಮಕರ ಸಂಕ್ರಾಂತಿಯಂದು ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಮೇಲೆ ಬೆಳಗುವ ಮಕರವಿಳಕ್ಕು ದೀಪ ದರ್ಶನಕ್ಕಾಗಿ ಭಕ್ತರು ಕಾದು ಕುಳಿತಿರುತ್ತಾರೆ. ಸೂರ್ಯಾಸ್ತದ ನಂತರ ಕಾಣಿಸಿಕೊಳ್ಳುವ ಮಕರ ಜ್ಯೋತಿ ಮೂಲಕ ಅಯ್ಯಪ್ಪ ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.
2/ 5
ದೀಪಾರಾಧನೆಯೊಂದಿಗೆ ಏಳು ದಿನಗಳ ಮಕರವಿಳಕ್ಕು ಉತ್ಸವ ಪ್ರಾರಂಭವಾಗುತ್ತದೆ. ಶುಕ್ರವಾರದಂದು ಸುಮಾರು 75,000 ಯಾತ್ರಾರ್ಥಿಗಳು 'ಮಕರವಿಳಕ್ಕು' ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
3/ 5
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದರಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇಂದು 10 ಸಾವಿರ ಭಕ್ತಾದಿಗಳು ಶಬರಿಮಲೆಯಲ್ಲಿ ಹಾಜರಿದ್ದು, ಈ ಮಕರ ಜ್ಯೋತಿ ದರ್ಶನ ಪಡೆದರು.
4/ 5
ಮಕರ ಜ್ಯೋತಿ ನಕ್ಷತ್ರವು ಮಕರ ಸಂಕ್ರಾಂತಿಯಂದು ಆಕಾಶದಲ್ಲಿ ಕಾಣಿಸಿಕೊಳ್ಳುತ್ತದೆ ಇದು ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯನ ಸಾಗಣೆಯನ್ನು ಸೂಚಿಸುತ್ತದೆ. ಜನವರಿ 14 ಮಲಯಾಳಂ ತಿಂಗಳ ಮಕರಂನ ಮೊದಲ ದಿನವಾಗಿದೆ.
5/ 5
ಸಂಜೆ 6.30ರಿಂದ 6.45ರ ವೇಳೆಗೆ ದೀಪಾರಾಧನೆ ವೇಳೆ ಜ್ಯೋತಿ ರೂಪದಲ್ಲಿ ಅಯ್ಯಪ್ಪನ ದರ್ಶನ ಭಕ್ತರಿಗೆ ಆಗಿದೆ. ಮಕರ ಜ್ಯೋತಿ ದರ್ಶನ ಪಡೆದ ಭಕ್ತರು ಪುನೀತರಾದರು