Makar Sankranti 2022: ಸಂಕ್ರಾಂತಿ ಹಬ್ಬದ ದಿನ ಯಾವ ರಾಶಿಯವರು ಏನು ದಾನ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
What To Offer On Makar Sankranti: ಈ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಜನರು ತಮ್ಮ ರಾಶಿಯ ಅನುಗುಣವಾಗಿ ವಿವಿಧ ವಸ್ತುಗಳನ್ನು ದಾನ ಮಾಡುತ್ತಾರೆ. ಇದರಿಂದ ಸೂರ್ಯದೇವನ ಅನುಗ್ರಹ ಲಭಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ನಿಮ್ಮ ರಾಶಿಯ ಅನುಗುಣವಾಗಿ ಯಾವ ವಸ್ತುವನ್ನು ದಾನ ಮಾಡಬೇಕು ಎಂಬುದು ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರು ಎಳ್ಳು, ಸಿಹಿತಿಂಡಿ, ಕಿಚಡಿ, ರೇಷ್ಮೆ ಬಟ್ಟೆ, ಬೇಳೆಕಾಳು, ಅಕ್ಕಿ ಮತ್ತು ಉಣ್ಣೆಯ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರ ಈ ವಸ್ತುಗಳನ್ನು ದಾನ ಮಾಡಬೇಕು.
2/ 12
ವೃಷಭ ರಾಶಿ : ಮಕರ ಸಂಕ್ರಾಂತಿಯ ದಿನದಂದು ಈ ರಾಶಿಯ ಜನರು ಉದ್ದಿನ ಬೇಳೆಯ ಕಿಚಡಿ, ಕಪ್ಪು ಉದ್ದಿನಬೇಳೆ, ಸಾಸಿವೆ ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಎಳ್ಳು ಇತ್ಯಾದಿಗಳನ್ನು ದಾನ ಮಾಡುವುದು ಉತ್ತಮ.
3/ 12
ಮಿಥುನ ರಾಶಿ: ಈ ರಾಶಿಯ ಜನರು ಕಿಚಡಿ, ಕಪ್ಪು ಎಳ್ಳು, ಛತ್ರಿ, ಉದ್ದಿನ ಬೇಳೆ, ಲಡ್ಡು, ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು. ಮಿಥುನ ರಾಶಿಯವರು ಈ ವಸ್ತುಗಳನ್ನು ವಿಶೇಷವಾಗಿ ಬಡವರಿಗೆ ದಾನ ಮಾಡಬೇಕು.
4/ 12
ಕರ್ಕಾಟಕ: ಕರ್ಕಾಟಕ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಬಡವರು ಮತ್ತು ನಿರ್ಗತಿಕರಿಗೆ ಕಿಚಡಿ, ಬೇಳೆ, ಹಳದಿ ಬಟ್ಟೆ, ಅರಿಶಿನ ಕೊಂಬು, ಹಿತ್ತಾಳೆಯ ಪಾತ್ರೆಗಳು, ಹಣ್ಣುಗಳು ಇತ್ಯಾದಿಗಳನ್ನು ದಾನ ಮಾಡಬೇಕು.
5/ 12
ಸಿಂಹ: ಮಕರ ಸಂಕ್ರಾಂತಿಯಂದು ಸಿಂಹ ರಾಶಿಯವರು ಮುಂಜಾನೆ ಸ್ನಾನದ ನಂತರ ಉದ್ದಿನಬೇಳೆ, ಕಿಚಡಿ, ಕೆಂಪು ಬಟ್ಟೆ ಹಾಗೂ ಇತ್ಯಾದಿಗಳನ್ನು ದಾನ ಮಾಡಬೇಕು.
6/ 12
ಕನ್ಯಾರಾಶಿ : ಈ ರಾಶಿಯವರು ಮಕರ ಸಂಕ್ರಾಂತಿಯಂದು ಬೆಳಗಿನ ಜಾವ ಸ್ನಾನ ಮಾಡಿ ಬಡವರಿಗೆ ಬೆಲ್ಲ, ಹಸಿರು ಬಟ್ಟೆ, ಕಿಚಡಿ, ಶೇಂಗಾ ಇತ್ಯಾದಿಗಳನ್ನು ದಾನ ಮಾಡಬೇಕು.
7/ 12
ತುಲಾ ರಾಶಿ : ಮಕರ ಸಂಕ್ರಾಂತಿಯ ದಿನದಂದು ತುಲಾ ರಾಶಿಯವರು ಬಡವರಿಗೆ ಕಿಚಡಿ, ಹಣ್ಣು, ಸಕ್ಕರೆ ಮಿಠಾಯಿ, ಬೆಚ್ಚನೆಯ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬೇಕು
8/ 12
ವೃಶ್ಚಿಕ ರಾಶಿ :ಈ ರಾಶಿಯ ಜನರು ಮಕರ ಸಂಕ್ರಾಂತಿಯಂದು ಬಡವರಿಗೆ ಕಿಚಡಿ, ಕಂಬಳಿ, ಎಳ್ಳು-ಬೆಲ್ಲ ಇತ್ಯಾದಿಗಳನ್ನು ದಾನ ಮಾಡಬೇಕು.
9/ 12
ಧನು ರಾಶಿ: ಧನು ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಶೇಂಗಾ, ಎಳ್ಳು, ಕೆಂಪು ಚಂದನ ಹಾಗೂ ಕೆಂಪು ಬಟ್ಟೆಯನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು.
10/ 12
ಮಕರ :ಮಕರ ಸಂಕ್ರಾಂತಿಯ ದಿನವನ್ನು ಈ ರಾಶಿಯವರಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ ಏಕೆಂದರೆ ಈ ದಿನ ಸೂರ್ಯನು ಮಕರ ರಾಶಿಗೆ ಚಲಿಸುತ್ತಾನೆ. ಈ ರಾಶಿಯವರು ಕಿಚಡಿ, ಹೊದಿಕೆ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬೇಕು.
11/ 12
ಕುಂಭ ರಾಶಿ: ಮಕರ ಸಂಕ್ರಾಂತಿಯ ದಿನದಂದು, ಈ ರಾಶಿಯ ಜನರು ಕಿಚಡಿ, ಎಣ್ಣೆ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಬಹಳ ಮುಖ್ಯ.
12/ 12
ಮೀನ ರಾಶಿ: ಈ ರಾಶಿಯವರು ಮಕರ ಸಂಕ್ರಾಂತಿಯ ದಿನ ಶೇಂಗಾ, ಎಳ್ಳು, ಬೆಲ್ಲ, ಕಿಚಡಿ ದಾನ ಮಾಡಬೇಕು.