ಈ ವರ್ಷ ಮಹಾಶಿವರಾತ್ರಿ 18 ಫೆಬ್ರವರಿ 2023 ರಂದು ಬರಲಿದೆ. ಹಲವಾರು ಅಪರೂಪದ ಕಾಕತಾಳೀಯಗಳಿಂದಾಗಿ ಈ ವರ್ಷದ ಮಹಾಶಿವರಾತ್ರಿ ಮಹತ್ವ ಪಡೆಯುತ್ತಿದೆ. ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿಯ ವಿವಾಹವು ಈ ಶುಭ ದಿನದಂದು ನಡೆಯಿತು ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಈ ದಿನ ಉಪವಾಸ ಮಾಡಿ ಶಿವನ ದರ್ಶನ ಮಾಡಿದರೆ ಭಗವಂತನ ಕೃಪೆ ಸಿಗುತ್ತದೆ ಎಂಬ ನಂಬಿಕೆ ಅನೇಕರದ್ದು.
ಪೂಜಾ ವಿಧಾನ: ಮಹಾಶಿವರಾತ್ರಿಯಂದು ಉಪವಾಸದ ಸಮಯದಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರು ಅಥವಾ ಹಾಲನ್ನು ತುಂಬಿಸಿ ಅದರ ಮೇಲೆ ಬಿಲ್ವಪತ್ರೆ, ಹೂವು, ಅಕ್ಕಿ ಮುಂತಾದವುಗಳನ್ನು ಇಟ್ಟು ಶಿವಲಿಂಗಕ್ಕೆ ಅರ್ಪಿಸಬೇಕು. ಮನೆಯ ಹತ್ತಿರ ಯಾವುದೇ ಶಿವ ದೇವಾಲಯವಿಲ್ಲದಿದ್ದರೆ, ಮನೆಯಲ್ಲಿ ಶಿವಲಿಂಗವನ್ನು ಮಾಡಿ ಪೂಜಿಸಿ. ಈ ಸಮಯದಲ್ಲಿ ಶಿವನ ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ.