ಶಿವಪೂಜೆಗೆ ಮೀಸಲಾದ ಸೋಮವಾರ ಅಥವಾ ಮಹಾಶಿವರಾತ್ರಿಯಂದು ಉಪವಾಸ ಮಾಡುವಾಗ ಕೆಲವು ನಿಯಮಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಶಿವನ ಪೂಜೆಯಲ್ಲಿ ನಾವೆಲ್ಲರೂ ಹಾಲಿನಿಂದ ಅಭಿಷೇಕ ಮಾಡುತ್ತೇವೆ. ಹಾಲಿನೊಂದಿಗೆ ಅಭಿಷೇಕ ಮಾಡುವಾಗ ಯಾವುದೇ ಸಂದರ್ಭದಲ್ಲೂ ತಾಮ್ರದ ಪಾತ್ರೆ ಬಳಸದಂತೆ ಎಚ್ಚರಿಕೆ ವಹಿಸಬೇಕು. ತಾಮ್ರದ ಪಾತ್ರೆಯಲ್ಲಿ ಹಾಲನ್ನು ಸುರಿಯುವುದರಿಂದ ವಿಷವಾಗುತ್ತದೆ. ಹಾಗಾದ್ರೆ, ಸ್ಟೀಲ್ ಬಟ್ಟಲಿನಲ್ಲಿ ಅಲ್ಲದಿದ್ದರೂ ಮಣ್ಣಿನ ಪಾತ್ರೆಯಲ್ಲಿ ಹಾಲಿನ ಅಭಿಷೇಕ ಮಾಡಿದರೆ ಅದು ಉತ್ತಮ.