P ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು: ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಹುಡುಗಿಯರು ಬಹಳ ಉಜ್ವಲ ಭವಿಷ್ಯವನ್ನು ಹೊಂದಿರುತ್ತಾರೆ. ಅವರು ವಿಶೇಷವಾಗಿ ತಮ್ಮ ತಂದೆಯ ಪಾಲಿಗೆ ಅದೃಷ್ಟವಂತರು. ತಂದೆಗೆ ಎಂದೂ ಸಂಪತ್ತಿನ ಕೊರತೆಯಾಗುವುದಿಲ್ಲ. ಇವರಿಗೆ ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ. ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೆ ಅದು ಪೂರ್ಣಗೊಳ್ಳುವವರೆಗೆ ಅವರಿಗೆ ಸಮಾಧಾನ ಇರುವುದಿಲ್ಲ.
ಭಾರತೀಯ ಸಂಸ್ಕೃತಿಯಲ್ಲಿ ಸೊಸೆಯನ್ನು ಲಕ್ಷ್ಮಿಯ ಮೂರ್ತರೂಪ ಎಂದು ಪರಿಗಣಿಸಲಾಗಿದೆ. ಹೆಣ್ಣು ಮಗುವಿನ ಜನನವನ್ನು ಲಕ್ಷ್ಮಿಯ ಅವತಾರಕ್ಕೆ ಹೋಲಿಸಲಾಗುತ್ತದೆ. ಅನೇಕ ಕುಟುಂಬಗಳು ಹೆಣ್ಣು ಮಗು ಹುಟ್ಟಿದರೆ ಸಂಭ್ರಮಾಚರಣೆ ಮಾಡುತ್ತವೆ. ಹೆಣ್ಣು ಮಗುವಿನ ಜನನದ ನಂತರ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಇಲ್ಲಿ ಹೇಳಿರುವ ಅಕ್ಷರಗಳಿಂದ ಹೆಣ್ಮಕ್ಕಳಿಗೆ ಹೆಸರಿಟ್ಟರೆ, ಅವರು ತಂದೆಯ ಪಾಲಿಗೆ ಅದೃಷ್ಟ ದೇವತೆಯಾಗುತ್ತಾರೆ.