Love Horoscope: 2023ರಲ್ಲಿ ಈ ರಾಶಿಯವರು ಪ್ರೀತಿಯಲ್ಲಿ ಬೀಳೋದು ಪಕ್ಕಾ!
Love Horoscope: ನಮ್ಮ ಜೀವನದಲ್ಲಿ ಪ್ರೀತಿ ಎಂಬುದು ಬಹಳ ಮುಖ್ಯ. ಏಳು-ಬೀಳುಗಳಲ್ಲಿ ಜೊತೆಯಾಗಿರಲು ಒಬ್ಬ ವ್ಯಕ್ತಿ ಇದ್ದರೆ ಜೀವನ ಚೆನ್ನಾಗಿರುತ್ತದೆ. ಈಗಾಗಲೇ 2022 ಮುಗಿದಿದೆ, 2023ಕ್ಕೆ ಕಾಲಿಡಲಿದ್ದೇವೆ. ಈ ಸಮಯದಲ್ಲಿ ಯಾವ ರಾಶಿಯವರ ಬದುಕಲ್ಲಿ ಬದಲಾವಣೆ ಆಗುತ್ತದೆ ಎಂಬುದು ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರು ಪ್ರೀತಿಯ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. 2023ರ ಮೊದಲ ಸೂರ್ಯಗ್ರಹಣ ಇದೇ ರಾಶಿಯಲ್ಲಿ ಆಗುವುದರಿಂದ ಚಂಚಲತೆ ಹೆಚ್ಚಿರುತ್ತದೆ. ನೀವು ಗಟ್ಟಿಯಾಗಿದ್ದರೆ ನಿಮ್ಮ ಸಂಬಂಧ ಸಹ ಗಟ್ಟಿಯಾಗಿರುತ್ತದೆ.
2/ 12
ವೃಷಭ ರಾಶಿ: ಪ್ರೀತಿಯ ವಿಚಾರದಲ್ಲಿ ವೃಷಭ ರಾಶಿಯವರಿಗೆ ಈ ವರ್ಷದ ಆರಂಭ ಬಹಳ ಉತ್ತಮವಾಗಿರುತ್ತದೆ. ಆದರೆ ನಿಮ್ಮ ಮಾತುಗಳ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಚಂದ್ರಗ್ರಹಣದ ನಂತರ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು.
3/ 12
ಮಿಥುನ ರಾಶಿ: ಮಿಥುನ ರಾಶಿಯವರ ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳು ಬರಬಹುದು. ಆದರೆ ಅವಿವಾಹಿತರಿಗೆ 2023ರಲ್ಲಿ ವಿವಾಹ ಭಾಗ್ಯವಿದ್ದು, ಅಕ್ಟೋಬರ್ 30ರ ನಂತರ ಮದುವೆ ಆಗಬಹುದು.
4/ 12
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಈ 2023 ಬಹಳ ಉತ್ತಮವಾದ ಸಮಯ ಎನ್ನಬಹುದು. ಈ ಸಮಯದಲ್ಲಿ ದಂಪತಿಗಳ ನಡುವೆ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ರೊಮ್ಯಾನ್ಸ್ ಜಾಸ್ತಿ ಆಗುತ್ತದೆ ಎಂದರೆ ತಪ್ಪಲ್ಲ.
5/ 12
ಸಿಂಹ ರಾಶಿ: ವಿವಾಹಿತರಿಗೆ ಈ ಸಮಯದಲ್ಲಿ ಸ್ವಲ್ಪ ಸಮಸ್ಯೆಗಳು ಬರುತ್ತದೆ. ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದ ಜೊತೆ ಸಮಯ ಕಳೆಯುವುದು ಈ ಸಮಯದಲ್ಲಿ ಸಹಾಯ ಮಾಡುತ್ತದೆ.
6/ 12
ಕನ್ಯಾ ರಾಶಿ: ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸೂಕ್ತವಾದ ಸಮಯ. ಅವಿವಾಹಿತರಾಗಿದ್ದರೆ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ವಿವಾಹಿತ ದಂಪತಿಗಳಿಗೆ ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಬರಬಹುದು
7/ 12
ತುಲಾ ರಾಶಿ: ನೀವು ಪ್ರೀತಿಯಲ್ಲಿ ಇದ್ದರೆ ಮದುವೆಯ ವಿಚಾರವಾಗಿ ಸ್ವಲ್ಪ ಆಲೋಚನೆ ಮಾಡುವುದು ಮುಖ್ಯ. ಸಮಯ ತೆಗೆದುಕೊಂಡು ನಂತರ ನಿರ್ಧಾರ ಮಾಡುವುದು ಉತ್ತಮ. ಕೆಲ ಸಮಸ್ಯೆಗಳು ಬರಬಹುದು. ಅಕ್ಟೋಬರ್ 30 ರಿಂದ, ಪ್ರೇಮಿಗಳು ಮತ್ತು ವಿವಾಹಿತರಿಗೆ ಉತ್ತಮ ದಿನ.
8/ 12
ವೃಶ್ಚಿಕ ರಾಶಿ: ವರ್ಷದ ಮೊದಲ ಅರ್ಧ ಈ ರಾಶಿಯವರಿಗೆ ಬಹಳ ಉತ್ತಮ. ಅವಿವಾಹಿತರಿಗೆ ವಿವಾಹದ ಭಾಗ್ಯ ದೊರೆಯಲಿದೆ. ನವೆಂಬರ್ ಮತ್ತು ಡಿಸೆಂಬರ್ ಬಹಳ ಮುಖ್ಯವಾದ ತಿಂಗಳು. ಕೆಲ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ.
9/ 12
ಧನು ರಾಶಿ: ಹೊಸ ಸಂಬಂಧಕ್ಕೆ ಬುನಾದಿ ಹಾಕುವ ಸಮಯ ಇದೆ. ವಿವಾಹಿತರು ನಿಮ್ಮ ಸಂಗಾತಿಯನ್ನು ನೆಗ್ಲೆಕ್ಟ್ ಮಾಡಬೇಡಿ. ಹೊರಗಿನವರಿಗೆ ನಿಮ್ಮ ಸಂಬಂಧದ ಬಗ್ಗೆ ಮಾತನಾಡಲು ಅವಕಾಶ ಕೊಡಬೇಡಿ.
10/ 12
ಮಕರ ರಾಶಿ: ಈ ರಾಶಿಯವರಿಗೆ ಪ್ರೀತಿಯ ವಿಚಾರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೆಯೇ, ಜುಲೈ ಮತ್ತು ಅಕ್ಟೋಬರ್ 30 ರ ನಡುವೆ ಪ್ರೀತಿಯನ್ನು ವ್ಯಕ್ತಪಡಿಸುವುದು ಸೂಕ್ತ. ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಿರಿ.
11/ 12
ಕುಂಭ ರಾಶಿ: ಪ್ರೀತಿ - ಪ್ರೇಮದ ವಿಚಾರದಲ್ಲಿ ಈ ರಾಶಿಯವರಿಗೆ ಸ್ವಲ್ಪ ಮಾನಸಿಕ ಒತ್ತಡ ಆಗಬಹುದು. ಸಂಗಾತಿಯ ಆರೋಗ್ಯದಲ್ಲಿ ಸಹ ಏರುಪೇರಾಗುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ. ಸೆಪ್ಟೆಂಬರ್ನಿಂದ ಎಲ್ಲಾವೂ ಸರಿಯಾಗುತ್ತದೆ.
12/ 12
ಮೀನ ರಾಶಿ: ಸಂಗಾತಿಯ ಜೊತೆ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ಸಣ್ಣ-ಪುಟ್ಟ ಸಮಸ್ಯೆಗಳು ಬಂದರೂ ಸಹ ಕ್ರಮೇಣವಾಗಿ ಎಲ್ಲವೂ ಸರಿಯಾಗುತ್ತದೆ. ರೊಮ್ಯಾಂಟಿಕ್ ಸ್ಥಳಕ್ಕೆ ಸಂಗಾತಿ ಜೊತೆ ಪ್ರವಾಸಕ್ಕೆ ಹೋಗಿ.