12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

Jyotirlinga in India: ಶಿವನನ್ನು ಪೂಜಿಸುವ ಭಕ್ತರ ಸಂಖ್ಯೆ ಇಡೀ ದೇಶದಲ್ಲಿ ಹೆಚ್ಚಿದೆ. ನಮ್ಮ ಭಾರತದಲ್ಲಿ ಅನೇಕ ಶಿವ ದೇವಾಲಯಗಳಿವೆ ಆದರೆ ಶಿವನ ಈ 12 ಜ್ಯೋತಿರ್ಲಿಂಗಗಳು ಅತ್ಯಂತ ಪ್ರಮುಖ ಎನ್ನಬಹುದು. 12 ಜ್ಯೋತಿರ್ಲಿಂಗಗಳಲ್ಲಿ ಶಿವನು ಜ್ಯೋತಿಯ ರೂಪದಲ್ಲಿ ಇರುತ್ತಾನೆ ಎಂಬುದು ಪುರಾಣದ ನಂಬಿಕೆ. ಈ ಸ್ಥಳಗಳ ಮಹಿಮೆ ಇಲ್ಲಿದೆ.

First published:

  • 113

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಹಿಂದೂ ಧರ್ಮದಲ್ಲಿ, ಶಿವನನ್ನು ಮೋಕ್ಷ ಕರುಣಿಸುವ ದೇವರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಶಿವ ದೇವಾಲಯಗಳು ಬಹಳಷ್ಟಿದ್ದರೂ ಸಹ ಜ್ಯೋತಿರ್ಲಿಂಗಗಳಿಗೆ ಇರುವ ಮಹತ್ವ ಮಾತ್ರ ಹೆಚ್ಚು. ಹಾಗೆಯೇ, ಅವುಗಳ ಹಿಂದಿನ ಪುರಾಣ ಸಹ ಅಷ್ಟೇ ವಿಭಿನ್ನ.

    MORE
    GALLERIES

  • 213

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಸೋಮನಾಥ ಜ್ಯೋತಿರ್ಲಿಂಗ, ಗುಜರಾತ್: ಸೋಮನಾಥ ಜ್ಯೋತಿರ್ಲಿಂಗವನ್ನು ಭೂಮಿಯ ಮೇಲಿನ ಶಿವನ ಮೊದಲ ಜ್ಯೋತಿರ್ಲಿಂಗ ಎಂದು ಹೇಳಲಾಗುತ್ತದೆ. ಈ ಕುಂಡವನ್ನು ಸೋಮ್ ಕುಂಡ್ ಎಂದು ಕರೆಯಲಾಗುತ್ತದೆ, ಸೋಮನಾಥ ಜ್ಯೋತಿರ್ಲಿಂಗವು ಗುಜರಾತ್ನ ಸೌರಾಷ್ಟ್ರ ಪ್ರದೇಶದಲ್ಲಿದೆ.

    MORE
    GALLERIES

  • 313

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಆಂಧ್ರ ಪ್ರದೇಶ: ಮಲ್ಲಿಕಾರ್ಜುನ ಜ್ಯೋತಿರ್ಲಿಂಗವನ್ನು ಶಿವನ ಎರಡನೇ ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತದೆ. ಈ ಜ್ಯೋತಿರ್ಲಿಂಗವು ಆಂಧ್ರಪ್ರದೇಶದ ಕೃಷ್ಣಾ ನದಿಯ ದಡದಲ್ಲಿರುವ ಶ್ರೀಶೈಲ ಪರ್ವತದಲ್ಲಿದೆ.

    MORE
    GALLERIES

  • 413

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಉಜ್ಜಯಿನಿ: ಮಹಾಕಾಳೇಶ್ವರ ಜ್ಯೋತಿರ್ಲಿಂಗವನ್ನು ಮೂರನೇ ಜ್ಯೋತಿರ್ಲಿಂಗ ಎಂದು ಹೇಳಲಾಗುತ್ತದೆ. ಈ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಐತಿಹಾಸಿಕ ನಗರವಾದ ಉಜ್ಜಯಿನಿಯಲ್ಲಿದೆ. ಒಟ್ಟು 12 ಜ್ಯೋತಿರ್ಲಿಂಗಗಳ ಪೈಕಿ ಉಜ್ಜಯಿನಿಯಲ್ಲಿರುವ ಏಕೈಕ ಜ್ಯೋತಿರ್ಲಿಂಗವು ದಕ್ಷಿಣಾಭಿಮುಖವಾಗಿದೆ.

    MORE
    GALLERIES

  • 513

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಓಂಕಾರೇಶ್ವರ ಜ್ಯೋತಿರ್ಲಿಂಗ, ಖಾಂಡ್ವಾ: ಓಂಕಾರೇಶ್ವರ ಜ್ಯೋತಿರ್ಲಿಂಗವನ್ನು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪೂಜಿಸಲಾಗುತ್ತದೆ. ಇದು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿದೆ. ಈ ಜ್ಯೋತಿರ್ಲಿಂಗವು ನರ್ಮದಾ ನದಿಯ ದಡದಲ್ಲಿರುವ ಸಣ್ಣ ಪಟ್ಟಣವಾದ ಓಂಕಾರೇಶ್ವರದಲ್ಲಿದೆ.

    MORE
    GALLERIES

  • 613

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಕೇದಾರನಾಥ ಜ್ಯೋತಿರ್ಲಿಂಗ, ಉತ್ತರಾಖಂಡ: ಶಿವನ 5ನೇ ಜ್ಯೋತಿರ್ಲಿಂಗ I ಕೇದಾರನಾಥ ಜ್ಯೋತಿರ್ಲಿಂಗ. ಕೇದಾರನಾಥ ಜ್ಯೋತಿರ್ಲಿಂಗವು ಉತ್ತರಾಖಂಡದ ಕೇದಾರ ಹಿಮಾಲಯದ ಮೇಲೆ ನೆಲೆಗೊಂಡಿದ್ದು, ಸಮುದ್ರ ಮಟ್ಟದಿಂದ ಸುಮಾರು 3584 ಮೀಟರ್ ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

    MORE
    GALLERIES

  • 713

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಭೀಮಾಶಂಕರ ಜ್ಯೋತಿರ್ಲಿಂಗ, ಮಹಾರಾಷ್ಟ್ರ: ಭೀಮಾಶಂಕರ ಜ್ಯೋತಿರ್ಲಿಂಗವನ್ನು ಶಿವನ ಆರನೇ ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತದೆ. ಭೀಮಾಶಂಕರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಹ್ಯಾದ್ರಿ ಎಂಬ ಪರ್ವತದಲ್ಲಿದೆ.

    MORE
    GALLERIES

  • 813

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ವಿಶ್ವನಾಥ ಜ್ಯೋತಿರ್ಲಿಂಗ, ಉತ್ತರ ಪ್ರದೇಶ: ವಿಶ್ವನಾಥ ಜ್ಯೋತಿರ್ಲಿಂಗವನ್ನು ಶಿವನ 7 ನೇ ಜ್ಯೋತಿರ್ಲಿಂಗ ಎಂದು ಪೂಜಿಸಲಾಗುತ್ತದೆ. ಈ ಜ್ಯೋತಿರ್ಲಿಂಗವು ಉತ್ತರ ಪ್ರದೇಶದ ವಾರಣಾಸಿಯಲ್ಲಿದೆ. ಈ ನಗರವನ್ನು ಪ್ರಪಂಚದ ಅತ್ಯಂತ ಹಳೆಯ ನಗರ ಎನ್ನಲಾಗುತ್ತದೆ.

    MORE
    GALLERIES

  • 913

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ: ತ್ರಯಂಬಕೇಶ್ವರ ಜ್ಯೋತಿರ್ಲಿಂಗವನ್ನು ಶಿವನ 8 ನೇ ಜ್ಯೋತಿರ್ಲಿಂಗ ಎಂದು ಹೇಳಲಾಗುತ್ತದೆ. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ. ಈ ಜ್ಯೋತಿರ್ಲಿಂಗದ ಬಳಿ ಬ್ರಹ್ಮಗಿರಿ ಎಂಬ ಪರ್ವತವೂ ಇದ್ದು ಗೋದಾವರಿ ನದಿಯ ಮೂಲವೂ ಇದೇ ಪರ್ವತದಲ್ಲಿದೆ.

    MORE
    GALLERIES

  • 1013

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ವೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್: ವೈದ್ಯನಾಥ ಜ್ಯೋತಿರ್ಲಿಂಗವನ್ನು ಶಿವನ ಒಂಬತ್ತನೇ ಜ್ಯೋತಿರ್ಲಿಂಗ ಎನ್ನಲಾಗುತ್ತದೆ. ಈ ಜ್ಯೋತಿರ್ಲಿಂಗವು ಜಾರ್ಖಂಡ್ನ ಸಂತಾಲ್ ಪರಗಣದ ಬಳಿ ಇದೆ.

    MORE
    GALLERIES

  • 1113

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ನಾಗೇಶ್ವರ ಜ್ಯೋತಿರ್ಲಿಂಗ, ಗುಜರಾತ್: ನಾಗೇಶ್ವರ ಜ್ಯೋತಿರ್ಲಿಂಗವನ್ನು ಶಿವನ 10 ನೇ ಜ್ಯೋತಿರ್ಲಿಂಗ ಎಂದು ಹೇಳಲಾಗುತ್ತದೆ. ಈ ಜ್ಯೋತಿರ್ಲಿಂಗವು ಗುಜರಾತ್ನ ಬರೋಡಾ ಪ್ರದೇಶದ ಗೋಮತಿ ದ್ವಾರಕಾ ಬಳಿ ಇದೆ.

    MORE
    GALLERIES

  • 1213

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ರಾಮೇಶ್ವರಂ ಜ್ಯೋತಿರ್ಲಿಂಗಂ, ತಮಿಳುನಾಡು: ರಾಮೇಶ್ವರಂ ಜ್ಯೋತಿರ್ಲಿಂಗವನ್ನು ಶಿವನ 11ನೇ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಈ ಜ್ಯೋತಿರ್ಲಿಂಗವು ತಮಿಳುನಾಡು ರಾಜ್ಯದ ರಾಮನಾಥಂ ಎಂಬ ಸ್ಥಳದಲ್ಲಿದೆ. ಈ ಜ್ಯೋತಿರ್ಲಿಂಗವನ್ನು ಸ್ವತಃ ಶ್ರೀರಾಮನು ಸ್ಥಾಪಿಸಿದ್ದು ಎಂಬ ನಂಬಿಕೆ ಇದೆ. ಹಾಗಾಗಿ ಶ್ರೀರಾಮನ ಕಾರಣದಿಂದ ಈ ಜ್ಯೋತಿರ್ಲಿಂಗಕ್ಕೆ ರಾಮೇಶ್ವರಂ ಎಂಬ ಹೆಸರು ಬಂದಿದೆ.

    MORE
    GALLERIES

  • 1313

    12 Jyotirlinga: ಭಾರತದ ಈ ಸುಂದರ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆಷ್ಟು ತಿಳಿದಿದೆ, ಇದಕ್ಕಿದೆ ಅಪಾರ ಮಹಿಮೆ

    ಘೃಷ್ಣೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ: ಘುಷ್ಮೇಶ್ವರ ಜ್ಯೋತಿರ್ಲಿಂಗವನ್ನು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪೂಜಿಸಲಾಗುತ್ತದೆ. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಶಂಭಾಜಿ ನಗರ ಜಿಲ್ಲೆಯಲ್ಲಿದೆ. ಈ ಜ್ಯೋತಿರ್ಲಿಂಗದ ಸಮೀಪದಲ್ಲಿ ಐತಿಹಾಸಿಕ ಕೈಲಾಸ ದೇವಾಲಯವೂ ಇದೆ.

    MORE
    GALLERIES