Astrological Prediction 2023: ತುಲಾ ರಾಶಿಯವರು ಹೊಸವರ್ಷದಲ್ಲಿ ಲೆಕ್ಕ ಹಾಕಿ ಖರ್ಚು ಮಾಡ್ಬೇಕು
Libra 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ತುಲಾ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ತುಲಾ ರಾಶಿಯವರಿಗೆ ಈ ವರ್ಷ ಮಿಶ್ರಫಲ ಸಿಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದು, ಎಲ್ಲವನ್ನೂ ತಾಳ್ಮೆಯಿಂದ ನಿರ್ವಹಿಸಿಕೊಂಡು ಹೋದರೆ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಜೀವನದಲ್ಲಿ ಏಳು- ಬೀಳು ಸಾಮಾನ್ಯ ಎಂಬುದನ್ನ ನೆನಪಿಟ್ಟುಕೊಳ್ಳಬೇಕು.
2/ 7
ಲಾಭ-ನಷ್ಟ, ಸುಖ-ದುಃಖ ಹಾಗೂ ಸೋಲು-ಗೆಲುವು ಹೀಗೆ ಎಲ್ಲಾ ವಿಚಾರಗಳಲ್ಲಿ ಸಹ ಈ ಹೊಸವರ್ಷವು ಮಿಶ್ರಫಲದಾಯಕವಾಗಲಿದೆ ಎನ್ನಲಾಗುತ್ತಿದೆ. ಸಣ್ಣ-ಪುಟ್ಟ ಸಮಸ್ಯೆಗಳು ನಿಮಗೆ ಆಗಾಗ ಕಾಡಬಹುದು. ಆದರೆ ಎದೆಗುಂದದೇ ಧೈರ್ಯವಾಗಿರಿ.
3/ 7
ತುಲಾ ರಾಶಿಯ ಪಂಚಮದಲ್ಲಿ ಶನಿ ಇರುವ ಕಾರಣ ತೀವ್ರವಾದ ಪ್ರಭಾವ ಬೀರುತ್ತದೆ. ಶನಿಯು ಹಲವಾರು ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದರೆ ಸಪ್ತಮದಲ್ಲಿ ಇರುವ ಗುರು ತಕ್ಕಮಟ್ಟಿಗೆ ಕಮ್ಮಿ ಮಾಡುವ ಕಾರಣ ಫಲಿತಾಂಶ ಮಧ್ಯಮ ಪ್ರಮಾಣದಲ್ಲಿ ಇರುತ್ತದೆ.
4/ 7
ಇನ್ನು ಮಕ್ಕಳ ವಿಚಾರದಲ್ಲಿ ಈ ವರ್ಷ ನಿರಂತರವಾದ ಕಿರಿಕಿರಿಗಳು ಇದ್ದೇ ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಬೇಕು. ಅಲ್ಲದೇ, ಅವರ ವರ್ತನೆಯಲ್ಲಿ ಬದಲಾವಣೆ ಕಂಡರೆ ಕುಳಿತು ಮಾತನಾಡುವುದು ಮುಖ್ಯ.
5/ 7
ಹಲವು ಮೂಲದಿಂದ ಆದಾಯವಿದ್ದರೂ ಸಹ ನಿರಂತರವಾದ ವ್ಯರ್ಥದ ಕಾರಣ ಎಷ್ಟಿದ್ದರೂ ಸಾಲದು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಹಣವನ್ನು ಖರ್ಚು ಮಾಡುವಾಗ ಸಹ ಸ್ವಲ್ಪ ನೋಡಿ ಬಳಕೆ ಮಾಡುವುದು ಉತ್ತಮ.
6/ 7
ಅಲ್ಲದೇ, ಮನಸ್ಸಿನಲ್ಲಿ ನಿರಂತರವಾದ ಕೆಟ್ಟ ಆಲೋಚನೆಗಳು ಮೂಡಬಹುದು. ಆದರೂ ದೇವರಲ್ಲಿ ಅಚಲವಾದ ನಂಬಿಕೆ ದಿನೇ ದಿನೇ ವೃದ್ಧಿಯಾಗಲಿದೆ. ಸಾಧ್ಯವಾದಷ್ಟು ದೇವರ ಸೇವೆಯಲ್ಲಿ ಸಮಯ ಕಳೆಯಿರಿ. ಧಾನಗಳನ್ನು ಮಾಡಿ.
7/ 7
ಈ ಸಮಯದಲ್ಲಿ ನಿರಂತರವಾದ ಜ್ಞಾನಾರ್ಜನೆಯೊಂದಿಗೆ ಅನಿರೀಕ್ಷಿತವಾದ ಧನಗಮನ ಆಗುತ್ತದೆ. ಬಂಧುಬಾಂಧವರ ಹಿರಿಯರ ಸಹಕಾರ ನಿರಂತರವಾಗಿ ನಮ್ಮ ಮೇಲೆ ಇದ್ದೇ ಇರುತ್ತದೆ ಉಮಾ ಮಹೇಶ್ವರನನ್ನು ನಿರಂತರವಾಗಿ ಆರಾಧಿಸಿ.