Leo 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಸಿಂಹ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಸಿಂಹ ರಾಶಿಯವರ ವ್ಯಕ್ತಿತ್ವವನ್ನು ನಾಯಕತ್ವದ ಗುಣ ಎಂದು ಹೇಳಲಾಗುತ್ತದೆ. ಈ ರಾಶಿಯವರು ಯಾವುದೇ ಕೆಲಸವನ್ನು ಮುನ್ನೆಡೆಸುವಲ್ಲಿ ಮುಂದಿರುತ್ತಾರೆ. ಜನರಿಗೆ ಸಹ ಈ ರಾಶಿಯ ಜನರಿದ್ದರೆ ಧೈರ್ಯ ಎನ್ನುವ ಭಾವನೆ ಇರುತ್ತದೆ.
2/ 7
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಈ ವರ್ಷ ಬಹುಪಾಲು ಶುಭಫಲಗಳೇ ಅನುಭವಕ್ಕೆ ಬರಲಿದೆ ಎನ್ನಲಾಗುತ್ತಿದೆ. ಆದರೂ ಸಹ ಈ ವರ್ಷ ಕೆಲ ವಿಚಾರಗಳಲ್ಲಿ ಮುನ್ನೆಚ್ಚರಿಕೆವಹಿಸುವುದು ಮುಖ್ಯ.
3/ 7
ಭಾಗ್ಯದ ಗುರು ಎಲ್ಲಾ ವಿಚಾರಗಳಲ್ಲಿ ನಿಮಗೆ ಶ್ರೀರಕ್ಷೆಯಾಗಲಿದೆ ಎನ್ನಲಾಗುತ್ತದೆ. ಇನ್ನು ಅನಿರೀಕ್ಷಿತವಾದ ನಿವೇಶನ ಖರೀದಿ ಅಥವಾ ಭೂ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ ರಾಜಕೀಯದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯ ಯೋಗವಿದೆ.
4/ 7
ರಾಜಕಾರಣಿಗಳ ಜೊತೆ ಸಂಪರ್ಕ ಅಧಿಕವಾಗುವ ಸಾಧ್ಯತೆ ಇದೆ. ಧರ್ಮ- ದೇವರು ಗುರುಹಿರಿಯರಲ್ಲಿ ನಿಮಗೆ ಶ್ರದ್ಧೆ ಹಾಗೂ ವಿಶ್ವಾಸಗಳು ಜಾಸ್ತಿಯಾಗಲಿದೆ. ಬಂಧು-ಬಾಂಧವರು ನಿಮಗೆ ನಿರಂತರವಾಗಿ ಸಹಾಯವನ್ನೇ ಮಾಡಲಿದ್ದಾರೆ.
5/ 7
ನಿಮ್ಮ ಕರ್ತವ್ಯಗಳ ಬಗ್ಗೆ ನಿಮಗೆ ಅತೀವವಾದ ಆಸಕ್ತಿ ಹಾಗೂ ನಂಬಿಕೆ ಬೆಳೆಯಲಿದೆ. ಆದರೂ ಕುಟುಂಬದ ವಿಚಾರದಲ್ಲಿ ಹೆಂಡತಿ ಮಕ್ಕಳಿಂದ ಸ್ವಲ್ಪ ಕಿರಿಕಿರಿಗಳೇ ನಿಮಗೆ ಮುಂದುವರೆಯಲಿದ್ದು, ಆಸ್ಪತ್ರೆ ಸಹವಾಸ ತಪ್ಪುವ ಸಾಧ್ಯತೆ ಇಲ್ಲ.
6/ 7
ಮಾನಸಿಕವಾಗಿ ನಿಮಗೆ ಸಮಾಧಾನ ಸ್ವಲ್ಪ ಕಷ್ಟವೇ ಸರಿ. ಅರ್ಧ ವರ್ಷದ ನಂತರ ಆಪ್ತರಿಂದ ವಂಚನೆಯ ಭೀತಿ ಇರುತ್ತದೆ. ಅಲ್ಲದೇ, ರಾಜ ಸನ್ಮಾನ ಯೋಗವಿರುತ್ತದೆ. ಉಮಾ ಮಹೇಶ್ವರ ಆರಾಧನೆ ಮಾಡುವುದು ನಿಮಗೆ ಸಹಾಯ ಮಾಡುತ್ತದೆ.
7/ 7
ಒಟ್ಟಾರೆಯಾಗಿ ಈ ರಾಶಿಯವರು 2023ರಲ್ಲಿ ಬಹುತೇಕ ಆರಾಮವಾಗಿ ಜೀವನ ನಡೆಸುತ್ತಾರೆ. ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡರೆ ಸಾಕು. ಹಾಗೆಯೇ ಕುಟುಂಬದವರ ಜೊತೆ ಸ್ವಲ್ಪ ಕಳೆಯಿರಿ ಸಾಕು.