Kundali: ಎಷ್ಟೇ ಕಷ್ಟಪಟ್ಟರೂ ಕೆಲಸ ಸಿಗ್ತಿಲ್ವಾ; ಜಾತಕದ ಅನುಸಾರ ಈ ಪರಿಹಾರ ಕ್ರಮ ಕೈಗೊಳ್ಳಿ

ಕೆಲವರು ಕಷ್ಟಪಟ್ಟು ಕೆಲಸ (Work) ಮಾಡಿದರೂ ಯಶಸ್ವಿಯಾಗುವುದಿಲ್ಲ. ಯಶಸ್ವಿಯಾಗಲು ಕೆಲವೊಮ್ಮೆ ಅದೃಷ್ಟದ ಬೆಂಬಲವೂ ಅಗತ್ಯ ಎಂದು ಹೇಳಲಾಗುತ್ತದೆ. ಅದೃಷ್ಟ ಮತ್ತು ಕರ್ಮ ಎರಡೂ ಸೇರಿದಾ ವ್ಯಕ್ತಿ ಅಭಿವೃದ್ದಿ ಸಾಧಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದ ಒಂಬತ್ತನೇ ಮನೆ ಅವನ ಅದೃಷ್ಟವನ್ನು ತೋರಿಸುತ್ತದೆ. ಒಂಬತ್ತನೇ ಮನೆಯ ಅಧಿಪತಿ ಮತ್ತು ಅದರಲ್ಲಿ ಗ್ರಹದ ಸ್ಥಾನವು ಧನಾತ್ಮಕವಾಗಿದ್ದರೆ, ಅಂತಹ ವ್ಯಕ್ತಿಯು ಅದೃಷ್ಟವಂತರು ಎಂದು ನಂಬಲಾಗಿದೆ. ಅಂತಹ ಸಂದರ್ಭದಲ್ಲಿ ಕೈಗೆ ಸಿಕ್ಕ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮತ್ತೊಂದೆಡೆ, ಈ ಮನೆಯ ಸ್ಥಾನವು ಅಶುಭವಾಗಿದ್ದರೆ, ಒಬ್ಬ ವ್ಯಕ್ತಿಯು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಅವನಿಗೆ ಯಶಸ್ಸು ಸಿಗುವುದಿಲ್ಲ

First published: