ಅರಳಿನ ಉಂಡೆ: ಅರಳು ಮತ್ತು ಎಳ್ಳು ಬೆರೆಸಿ ಮಾಡುವ ಈ ರುಚಿಯಾದ ಉಂಡೆ ಉಡುಪಿಯ ಶ್ರೀಕೃಷ್ಣ ನೆಚ್ಚಿನ ಸಿಹಿಗಳಲ್ಲೊಂದು. ಉಂಡೆ ಹಾಗೂ ಚಕ್ಕುಲಿ ಕೃಷ್ಣನಿಗೆ ಬಲು ಪ್ರಿಯ. ಹೀಗಾಗಿ ಶ್ರೀಕೃಷ್ಣ ಮಠ ಭಕ್ತರಿಗೆ ವಿತರಿಸಲು 80ಸಾವಿರ ಉಂಡೆ ಹಾಗೂ 40 ಸಾವಿರ ಚಕ್ಕುಲಿ ತಯಾರು ಮಾಡಿದೆ. ಈ ಮೂಲಕ ಜನ್ಮಾಷ್ಟಮಿಗೆ ಉಡುಪಿ ಸಕಲ ರೀತಿಯಲ್ಲಿ ಸನ್ನದ್ದವಾಗಿದ್ದು. ತಂಬಿಟ್ಟು, ಬಿಳಿ ಹಾಗೂ ಕಪ್ಪು ಎಳ್ಳು,ಅರಳು, ನೆಲಕಡಲೆ, ಬೂಂದಿಯಲ್ಲಿ ಮಾಡಿರುವ ಒಟ್ಟು 80 ಸಾವಿರ ಲಾಡು ರೆಡಿಯಾಗಿದೆ.
ಹಲಸಿನ ಎಲೆಯ ಕೊಟ್ಟೆ ಕಡುಬು: ಇದಿಲ್ಲದೇ ಅಷ್ಟಮಿಯ ಆಚರಣೆ ಕಳೆಗಟ್ಟುವುದೇ ಇಲ್ಲ. ಕರಾವಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂದ್ರೆ ಕಡುಬು, ಉಂಡೆ-ಚಕ್ಕುಲಿಯದ್ದೇ ಘಮಘಮ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ಮನೆ ಮನೆಯಲ್ಲಿ ಕಡುಬು ಸಾಮಾನ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಲಿ ಎಂಬ ಎಲೆಯಲ್ಲಿ ಮಾಡುವ ಕಡುಬು (ತುಳು ಭಾಷೆಯಲ್ಲಿ ಕೊಟ್ಟಿಗೆ) ವಿಶೇಷವಾದರೆ ಉಡುಪಿ ಜಿಲ್ಲೆಯಲ್ಲಿ ಹಲಸಿನ ಎಲೆಯಲ್ಲಿ ಮಾಡುವ ಕಡುಬು(ತುಳು ಭಾಷೆಯಲ್ಲಿ ಗುಂಡ) ವಿಶೇಷ.. ಉದ್ದು ಹಾಗೂ ಅಕ್ಕಿಯಲ್ಲಿ ಮಾಡುವ ಕಡುಬು ಮಕ್ಕಳಿಗೂ ಪ್ರಿಯ. ಕರಾವಳಿಯಲ್ಲಷ್ಟೇ ಕಡುಬು ಕಾಣಬಹುದು..
ಮೂಡೆ ಕೊಟ್ಟಿಗೆ- ಕರಾವಳಿಗೆ ವಿಶಿಷ್ಟವಾದ ಈ ಕಡುಬು ಕೃಷ್ಣ ಜನ್ಮಾಷ್ಟಮಿಯಲ್ಲಿ ಮತ್ತೂ ವಿಶೇಷ. ಜನ್ಮಾಷ್ಣಮಿ ದಿನದಂದು ಪ್ರಧಾನ ಘಟ್ಟವಾದ ರಾತ್ರಿ ನಡೆಯುವ ಅರ್ಘ್ಯ ಸಮರ್ಪಣೆ ಬಳಿಕ ಮರುದಿನ ಶ್ರೀಕೃಷ್ಣ ಲೀಲೋತ್ಸವ ಸಂಭ್ರಮ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಭಕ್ತರಿಗೆ ಅವಕಾಶ ನೀಡಲಾಗಿಲ್ಲ. ಕೇವಲ. ಮಠದ ಸಿಬ್ಬಂದಿಗಳು, ಅಷ್ಟಮಠದ ಯತಿಗಳು ಪಾಲ್ಗೊಳ್ಳುತ್ತಾರೆ. ಆಗಸ್ಟ್ 31ರಂದು ಮಧ್ಯಾಹ್ನ 3:30ಕ್ಕೆ ಗೊಲ್ಲರು ಮಠದ ಮುಖ್ಯದ್ವಾರದ ಎದುರಿರುವ ಮೊಸರು ಕುಡಿಕೆ ಒಡೆಯುವ ಮೂಲಕ ಲೀಲೋತ್ಸವಕ್ಕೆ ಚಾಲನೆ ನೀಡುತ್ತಾರೆ.
ಹಾಲಿನ ಪಾಯಸ- ಹಾಲು ಮತ್ತು ಅದರ ಎಲ್ಲಾ ಉತ್ಪನ್ನಗಳು, ಖಾದ್ಯಗಳು ಶ್ರೀಕಷ್ಣನಿಗೆ ಬಹಳ ಪ್ರಿಯವಾದದ್ದು. ಇನ್ನು ಅಷ್ಟಮಿಗೆ ಕಡುಬು, ಉಂಡೆ, ಚಕ್ಕುಲಿ ಜೊತೆಗೆ ಕೋಡುಬಳೆ, ಉದ್ದಿನ ದೋಸೆ, ಮೊಸರು -ಅವಲಕ್ಕಿ, ಹಾಲಿನ ಪಾಯಸ, ಅತ್ರಸ, ಕೋಡುಬಳೆ, ಗರಿ ವಡೆ ಕೂಡ ತಯಾರಾಗುತ್ತೆ. ಒಟ್ಟಾರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಈ ಬಾರಿಯೂ ಮನೆ ಮನದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತೆ. ಕೃಷ್ಣ ಮಠದಲ್ಲಿ ಕೂಡ ಅಷ್ಟಮಿ ಮುಗಿದ ಬಳಿಕ ಕೃಷ್ಣನಿಗೆ ಸಮರ್ಪಿಸಲಾದ ಉಂಡೆ ಚಕ್ಕುಲಿಯನ್ನ ಭಕ್ತರು ಸವಿಯಬಹುದು.. ಜೊತೆಗೆ ಕೋವಿಡ್ ಆತಂಕವನ್ನೂ ಭಕ್ತರು ಮೈಮರೆಯುವಂತಿಲ್ಲ.
ಉಡುಪಿ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಲಾಗ್ತಿದೆ. ಅರ್ಘ್ಯ ಸಮರ್ಪಣೆ ಬಳಿಕ ಕೃಷ್ಣನಿಗೆ ಶ್ರೀಗಳೇ ಕೈಯಿಂದ ಮಾಡಿರುವ ಉಂಡೆ, ಚಕ್ಕುಲಿ ನೈವೇಧ್ಯ ಮಾಡುತ್ತಾರೆ. ಇದಾದ ಬಳಿಕ ಭಕ್ತರಿಗೂ ಕೃಷ್ಣ ಮಠದ ಒಳಗಿರುವ ನವಗ್ರಹ ಕಿಂಡಿ ಎದುರು ಶಂಕದ ಮೂಲಕ ಕೃಷ್ಣನಿಗೆ ಅರ್ಘ್ಯ ಸಮರ್ಪಿಸುವ ಅವಕಾಶ ನೀಡಲಾಗುತ್ತೆ. ಈ ಮೂಲಕ ಜನ್ಮಾಷ್ಟಮಿ ಉಪವಾಸ ಮುಗಿದ ಹಾಗೆ..
ಪ್ರಸಾದದ ಪೊಟ್ಟಣಗಳನ್ನು ಮಾಡುವುದರಲ್ಲಿ ನಿರತರಾದ ಭಕ್ತರು. ಕೃಷ್ಣಾಷ್ಟಮಿಯಂದ್ರೆ ಮಕ್ಕಳಿಗೆ ವಿಶೇಷ ದಿನ. ಈದಿನ ಮುದ್ದು ಕೃಷ್ಣನಂತೆ ತಯಾರಾಗ್ತಾರೆ. ಪ್ರತೀ ಮನೆಯಲ್ಲೂ ಮುದ್ದು ಕೃಷ್ಣ ಮಕ್ಕಳ ರೂಪದಲ್ಲಿ ಒಲಿದು ಬರುತ್ತಾರೆ. ಆದ್ರೆ ಈ ಬಾರಿ ಶ್ರೀ ಕೃಷ್ಣ ಮಠದಲ್ಲಿ ಮುದ್ದುಮಕ್ಕಳ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಿಲ್ಲ. ಕೊರೋನಾ ಅಪಾಯ ಇರುವ ಕಾರಣ ಈ ಬಾರಿ ಕೃಷ್ಣಮಠದ ಆವರಣ ಮುದ್ದು ಕೃಷ್ಣರಿಲ್ಲದೆ ಕಳೆಗುಂದಲಿದೆ.