Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

Kedar Yog 2023: ಸುಮಾರು 500 ವರ್ಷಗಳ ನಂತರ ಕೇದಾರ ಯೋಗ ರೂಪುಗೊಳ್ಳುತ್ತಿದ್ದು, ಈ ಯೋಗವು ಕೆಲವು ರಾಶಿಯ ಜನರಿಗೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಅಲ್ಲದೇ ಈ ರಾಶಿಯವರ ಬದುಕಿನಲ್ಲಿ ಅದೃಷ್ಟ ತರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಒಂಬತ್ತು ಗ್ರಹಗಳು ಸರಿಯಾದ ಸಮಯದಲ್ಲಿ ರಾಶಿ ಬದಲಾವಣೆ ಮಾಡುತ್ತವೆ. ಆ ಸಮಯದಲ್ಲಿ ಇತರ ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತವೆ. ಈ ಗ್ರಹಗಳ ಸಂಕ್ರಮಣ ಮತ್ತು ಸಂಯೋಗದಿಂದಾಗಿ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಕೆಲವು ಗ್ರಹಗಳ ಸಂಚಾರದಿಂದ ಅಪರೂಪದ ಯೋಗಗಳು ಉಂಟಾಗುತ್ತವೆ.

    MORE
    GALLERIES

  • 27

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    ನೂರಾರು ವರ್ಷಗಳ ನಂತರ ಗ್ರಹಗಳ ಸ್ಥಾನದಿಂದ ಕೇದಾರ ಯೋಗವು ರೂಪುಗೊಳ್ಳಲಿದೆ. ಒಂದು ಜಾತಕದಲ್ಲಿ ನಾಲ್ಕು ಮನೆಗಳಲ್ಲಿ ಏಳು ಗ್ರಹಗಳ ಸಂಯೋಜನೆ ಆಗುವುದು ಶುಭ ಮತ್ತು ಬಹಳ ಅಪರೂಪ. ಏಪ್ರಿಲ್ 23 ರಂದು ಈ ಶುಭ ಗ್ರಹ ಯೋಗ 500 ವರ್ಷಗಳ ನಂತರ ರೂಪುಗೊಳ್ಳುತ್ತಿದ್ದು, ಇದರಿಂದ ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಆಗಲಿದೆ.

    MORE
    GALLERIES

  • 37

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    ಸಿಂಹ: ಕೇದಾರ ಯೋಗ ನಿಮಗೆ ಅನುಕೂಲಕರವಾಗಿರಲಿದೆ. ಸಿಂಹ ರಾಶಿಯವರಿಗೆ ಏಳನೇ, ಒಂಬತ್ತನೇ, ಹತ್ತನೇ ಮತ್ತು ಹನ್ನೊಂದನೇ ಮನೆಗಳಲ್ಲಿ ಏಳು ಗ್ರಹಗಳ ಸಂಯೋಗವಾಗಲಿದ್ದು, ಇದರಿಂದ ಅನೇಕ ರೀತಿಯ ಪ್ರಯೋಜನ ಸಿಗಲಿದೆ. ಏಪ್ರಿಲ್ 23 ರ ನಂತರ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಒಟ್ಟಾರೆ ಬಹಳ ಒಳ್ಳೆಯ ಬೆಳವಣಿಗೆ ಆಗಲಿದೆ.

    MORE
    GALLERIES

  • 47

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    ಮೇಷ: ಮೇಷ ರಾಶಿಯವರಿಗೆ ಕೇದಾರ ಯೋಗ ಲಾಭದಾಯಕವಾಗಿರಲಿದೆ. ನಿಮ್ಮ ಜಾತಕದಲ್ಲಿ ಸೂರ್ಯ, ಗುರು, ರಾಹು ಮತ್ತು ಬುಧರು ಲಗ್ನ ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ. ಶುಕ್ರ ಎರಡನೇ ಮನೆಯಲ್ಲಿರುತ್ತಾನೆ. ಇದರ ಜೊತೆ ಮಂಗಳ ಮತ್ತು ಚಂದ್ರರು ಮೂರನೇ ಮನೆಯಲ್ಲಿದ್ದು, ಅಲ್ಲದೇ, ಶನಿಯು ಆದಾಯದ ಮನೆಯಲ್ಲಿರುತ್ತಾನೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಸಹ ಲಾಭವಾಗುತ್ತದೆ.

    MORE
    GALLERIES

  • 57

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    ಧನು ರಾಶಿ: ಈ ರಾಶಿಯವರಿಗೆ ಕೇದಾರ ಯೋಗದಿಂದ ಬಹಳ ಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ಜೊತೆಗೆ ನಿರುದ್ಯೋಗಿಗಳಿಗೆ ಹೊಸ ಕೆಲಸದ ಆಫರ್ ಸಹ ಬರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡಲಿದೆ.

    MORE
    GALLERIES

  • 67

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    ಮಕರ: ಈ ಯೋಗವು ನಿಮ್ಮ ಆರನೇ ಮನೆಯಲ್ಲಿ ಅಂದರೆ ಸಂಪತ್ತು, ಸಂತೋಷದ ಮನೆಯಲ್ಲಿದೆ. ಹಾಗಾಗಿ ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಅದೇ ಸಮಯದಲ್ಲಿ, ನೀವು ಪೂರ್ವಜರ ಆಸ್ತಿಯಿಂದ ಲಾಭ ಪಡೆಯುತ್ತೀರಿ. ಅಲ್ಲದೇ, ನೀವು ನ್ಯಾಯಾಲಯ ಪ್ರಕರಣಗಳಲ್ಲಿ ಜಯ ಸಾಧಿಸುತ್ತೀರಿ.

    MORE
    GALLERIES

  • 77

    Kedar Yoga 2023: ಒಂದೇ ಮನೆಯಲ್ಲಿ ಒಟ್ಟಿಗೆ 7 ಗ್ರಹಗಳ ಸಂಯೋಗ, 4 ರಾಶಿಯವರ ಬದುಕಿನಲ್ಲಿ ನಡೆಯಲಿದೆ ಮ್ಯಾಜಿಕ್

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES